ನೆಲಮಂಗಲ ಬಳಿ ಟ್ರಾಫಿಕ್ ಜಾಮ್: ಹೆದ್ದಾರಿ ಬಿಟ್ಟು ಸರ್ವಿಸ್ ರಸ್ತೆಯಲ್ಲಿ ತೆರಳಿದ ಪರಮೇಶ್ವರ್
ಕಳೆದ 3-4 ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಕೂಲ್ ಆಗಿದ್ದಾರೆ. ಮಳೆಯಿಂದ ಕೆಲವೊಂದಿಷ್ಟು ಅವಾಂತರ ಸೃಷ್ಟಿಯಾಗಿದೆ. ಪುಣೆ-ಬೆಂಗಳೂರು ಹೆದ್ದಾರಿಯ ನೆಲಮಂಗಲ ಬಳಿ ರಸ್ತೆ ಕುಸಿತಗೊಂಡು ಟ್ರಾಫಿಕ್ ಜಾಮ್ ಉಂಟಾಯಿತು. ಟ್ರಾಫಿಕ್ ಜಾಮ್ ಬಿಸಿ ಗೃಹ ಸಚಿವ ಜಿ ಪರಮೇಶ್ವರ ಅವರಿಗೂ ತಟ್ಟಿದೆ.
ನೆಲಮಂಗಲ, ಮೇ 10: ತಡರಾತ್ರಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದೆ (Rain). ತಡರಾತ್ರಿ ಸುರಿದ ಮಳೆಗೆ ಪುಣೆ-ಬೆಂಗಳೂರು ರಸ್ತೆಯ ನೆಲಮಂಗಲದ (Nelamangala) ಬಳಿ ಹೆದ್ದಾರಿ ಕುಸಿದು ಅವಾಂತರ ಸೃಷ್ಟಿಯಾಗಿದ್ದು ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಟ್ರಾಫಿಕ್ ಜಾಮ್ ಬಿಸಿ ಗೃಹ ಸಚಿವ ಪರಮೇಶ್ವರ್ ಅವರಿಗೂ ತಟ್ಟಿದೆ. ಟ್ರಾಫಿಕ್ ಜಾಮ್ನಿಂದ ಕೋಪಗೊಂಡ ಪರಮೇಶ್ವರ್ ಅವರು ಸಂಚಾರಿ ಪೊಲೀಸರ ಮೇಲೆ ಗರಂ ಆದರು. ಬಳಿಕ ಹೆದ್ದಾರಿ ಬಿಟ್ಟು ಸರ್ವಿಸ್ ರಸ್ತೆಯಲ್ಲಿ ತೆರಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ