ಜೆಡಿಎಸ್ ಮುಖಂಡರು ಇಷ್ಟು ದುರ್ಬಲರು ಅಂತ ಭಾವಿಸಿರಲಿಲ್ಲ: ಡಿಕೆ ಶಿವಕುಮಾರ್

|

Updated on: Oct 19, 2024 | 4:26 PM

ಚನ್ನಪಟ್ಟಣದಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಿದರೂ ಎದೆಗುಂದುವ ಅವಶ್ಯಕತೆಯಿಲ್ಲ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದ ಶಿವಕುಮಾರ್ ತಮ್ಮ ಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಅನ್ನೋದನ್ನು ಮಾತ್ರ ತಿಳಿಸದೆ ಗೌಪ್ಯವಾಗಿಟ್ಟರು.

ಬೆಂಗಳೂರು: ಡಿಕೆ ಶಿವಕುಮಾರ್ ಮಾತು ಕೇಳಿದರೆ ಚನ್ನಪಟ್ಟಣ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ ಬಿಜೆಪಿಯ ಮುಖಂಡ ಸ್ಪರ್ಧಿಸಲಿದ್ದಾರೆ. ಇವತ್ತು ನಗರರ ಖಾಸಗಿ ಕಾಲೇಜೊಂದರಲ್ಲ್ಲಿ ಚನ್ನಪಟ್ಟಣದ ಕಾರ್ಯಕರ್ತರೊಡನೆ ಮಾತುಕತೆ ನಡೆಸಿ ನಗುತ್ತಾ ಹೊರಬಂದ ಶಿವಕುಮಾರ್, ಚನ್ನಪಟ್ಟಣದಲ್ಲಿ ಜೆಡಿಎಸ್ ಕ್ಯಾಂಡಿಡೇಟ್ ಸ್ಪರ್ಧಿಸುತ್ತಿಲ್ಲ, ನಿನ್ನೆ ರಾತ್ರಿಯೆಲ್ಲ ಸಭೆ ನಡೆಸಿದ್ದರ ಬಗ್ಗೆ ಯಾರೋ ಫೋನ್ ಮಾಡಿ ವಿಷಯ ತಿಳಿಸಿದರು, ಜೆಡಿಎಸ್ ನಾಯಕರು ಅಷ್ಟೊಂದು ದುರ್ಬಲ ಹಾಗೂ ಅಷ್ಟು ಬೇಗ ಹೆದರುತ್ತಾರೆ ಅಂತ ಅಂದುಕೊಂಡಿರಲಿಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಬೆಂಗಳೂರು ಅಭಿವೃದ್ಧಿಗೆ ಸುಂದರ ಹೆಸರು ನೀಡೋದು ಬಿಟ್ಟರೆ ಶಿವಕುಮಾರ್ ಏನೂ ಮಾಡಿಲ್ಲ: ಕುಮಾರಸ್ವಾಮಿ

Follow us on