ಜನರಿಗೆ ಗುಡ್, ರಾಜ್ಯಕ್ಕೆ ಬ್ಯಾಡ್ ನ್ಯೂಸ್! ನೂತನ ಜಿಎಸ್ಟಿಯಿಂದ ಕರ್ನಾಟಕಕ್ಕೆ 70 ಸಾವಿರ ಕೋಟಿ ನಷ್ಟದ ಅಂದಾಜು
ಸೆಪ್ಟೆಂಬರ್ 22ರಿಂದ ನೂತನ ಜಿಎಎಸ್ಟಿ ದರ ಜಾರಿಯಾಗುತ್ತಿರುವ ಕಾರಣ ಕರ್ನಾಟಕ ಸೇರಿದಂತೆ ಇತರ ರಾಜ್ಯ ಸರ್ಕಾರಗಳು ಆದಾಯ ಕಡಿತದ ಆತಂಕದಲ್ಲಿವೆ. ಕರ್ನಾಟಕಕ್ಕೆ ವಾರ್ಷಿಕ 70,000 ಕೋಟಿ ರೂ. ಖೋತಾ ಉಂಟಾಗುವ ಆತಂಕ ಎದುರಾಗಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ವಿವರಗಳನ್ನು ನೀಡಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 4: ಕೇಂದ್ರ ಸರ್ಕಾರದ ಜಿಎಸ್ಟಿ ದರ ಸರಳೀಕರಣ ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದ್ದು, ಇದು ರಾಜ್ಯ ಸರ್ಕಾರಗಳಿಗೆ ಹೊರೆಯಾಘುವ ಬಗ್ಗೆ ಆತಂಕ ಎದುರಾಗಿದೆ. ಈ ಬಗ್ಗೆ ಅಂದಾಜು ಮಾಡಿರುವ ರಾಜ್ಯ ಸರ್ಕಾರ, ಆದಾಯದಲ್ಲಿ ವಾರ್ಷಿಕವಾಗಿ 70,000 ಕೋಟಿ ರೂ. ಕಡಿತವಾಗಲಿದೆ ಎಂದಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ವಿವರಿಸಿದ್ದು, ಕೇಂದ್ರದ ತೀರ್ಮಾನಗಳಿಂದ 2016, 17 ಮತ್ತು 24-25ರ ನಡುವೆ ಕರ್ನಾಟಕಕ್ಕೆ ಭಾರೀ ನಷ್ಟವಾಗಿದೆ. ಇದೀಗ 24-25ರ ಸಾಲಿನಲ್ಲಿ ಆದಾಯದಲ್ಲಿ 70,000 ಕೋಟಿ ರೂ. ಕಡಿತವಾಗಲಿದೆ ಎಂದಿದ್ದಾರೆ.
ಇದನ್ನೂ ಓದಿ: ದಸರಾಗೆ ಮೋದಿ ಸರ್ಕಾರದ ಉಡುಗೊರೆ; ನೂತನ ಜಿಎಸ್ಟಿಯಿಂದ ಈ ವಸ್ತುಗಳ ಬೆಲೆ ಇಳಿಕೆ
Published on: Sep 04, 2025 06:42 AM
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

