ಜನರಿಗೆ ಗುಡ್, ರಾಜ್ಯಕ್ಕೆ ಬ್ಯಾಡ್ ನ್ಯೂಸ್! ನೂತನ ಜಿಎಸ್​ಟಿಯಿಂದ ಕರ್ನಾಟಕಕ್ಕೆ 70 ಸಾವಿರ ಕೋಟಿ ನಷ್ಟದ ಅಂದಾಜು

Updated on: Sep 04, 2025 | 6:43 AM

ಸೆಪ್ಟೆಂಬರ್ 22ರಿಂದ ನೂತನ ಜಿಎಎಸ್​​ಟಿ ದರ ಜಾರಿಯಾಗುತ್ತಿರುವ ಕಾರಣ ಕರ್ನಾಟಕ ಸೇರಿದಂತೆ ಇತರ ರಾಜ್ಯ ಸರ್ಕಾರಗಳು ಆದಾಯ ಕಡಿತದ ಆತಂಕದಲ್ಲಿವೆ. ಕರ್ನಾಟಕಕ್ಕೆ ವಾರ್ಷಿಕ 70,000 ಕೋಟಿ ರೂ. ಖೋತಾ ಉಂಟಾಗುವ ಆತಂಕ ಎದುರಾಗಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ವಿವರಗಳನ್ನು ನೀಡಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 4: ಕೇಂದ್ರ ಸರ್ಕಾರದ ಜಿಎಸ್​ಟಿ ದರ ಸರಳೀಕರಣ ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದ್ದು, ಇದು ರಾಜ್ಯ ಸರ್ಕಾರಗಳಿಗೆ ಹೊರೆಯಾಘುವ ಬಗ್ಗೆ ಆತಂಕ ಎದುರಾಗಿದೆ. ಈ ಬಗ್ಗೆ ಅಂದಾಜು ಮಾಡಿರುವ ರಾಜ್ಯ ಸರ್ಕಾರ, ಆದಾಯದಲ್ಲಿ ವಾರ್ಷಿಕವಾಗಿ 70,000 ಕೋಟಿ ರೂ. ಕಡಿತವಾಗಲಿದೆ ಎಂದಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ವಿವರಿಸಿದ್ದು, ಕೇಂದ್ರದ ತೀರ್ಮಾನಗಳಿಂದ 2016, 17 ಮತ್ತು 24-25ರ ನಡುವೆ ಕರ್ನಾಟಕಕ್ಕೆ ಭಾರೀ ನಷ್ಟವಾಗಿದೆ. ಇದೀಗ 24-25ರ ಸಾಲಿನಲ್ಲಿ ಆದಾಯದಲ್ಲಿ 70,000 ಕೋಟಿ ರೂ. ಕಡಿತವಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ದಸರಾಗೆ ಮೋದಿ ಸರ್ಕಾರದ ಉಡುಗೊರೆ; ನೂತನ ಜಿಎಸ್​ಟಿಯಿಂದ ಈ ವಸ್ತುಗಳ ಬೆಲೆ ಇಳಿಕೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 04, 2025 06:42 AM