Digital Personal Data Protection Act: ಸೈಬರ್ ಅಪರಾಧಗಳ ತಡೆಗೆ ಕೇಂದ್ರ ಸರ್ಕಾರದಿಂದ ಹೊಸ ಕಾನೂನು ಜಾರಿ
ಸೈಬರ್ ಅಪರಾಧಗಳ ತಡೆಗೆ ಕೇಂದ್ರ ಸರ್ಕಾರ ಹೊಸ ಕಾನೂನು ಜಾರಿಗೆ ತಂದಿದೆ. ಜನರ ಖಾಸಗಿ ಮಾಹಿತಿಗಳನ್ನ ಕಳ್ಳತನ ಮಾಡಿದ್ರೆ ಅಂತವರಿಗೆ ಇನ್ಮೇಲೆ ಗುನ್ನಾ ಬೀಳಲಿದೆ. ಇನ್ನು ಡಿಜಿಟಲ್ ಪರ್ಸನಲ್ ಡಾಟಾ ಸಂರಕ್ಷಣಾ ಕಾನೂನು ಸಂಬಂಧ ಸಾರ್ವಜನಿಕರ ಜೊತೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸಂವಾದ ನಡೆಸಿದ್ದಾರೆ.
ಸೈಬರ್ ಅಪರಾಧಗಳ ತಡೆಗೆ ಡಿಜಿಟಲ್ ಪರ್ಸನಲ್ ಡಾಟಾ ಸಂರಕ್ಷಣಾ ಕಾನೂನು ಜಾರಿಗೆ ತರಲಾಗಿದೆ. ಜನರ ವಿಳಾಸ, ಫೋನ್ ನಂಬರ್, ಆಧಾರ್ ಸಂಖ್ಯೆ, ಪ್ಯಾನ್ ಕಾರ್ಡ್‌ಗಳು, ಬ್ಯಾಂಕ್ ಖಾತೆ ವಿವರಗಳನ್ನ ಕದಿಯೋ ಸೈಬರ್ ಕ್ರಿಮಿನಲ್ಗಳ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದೆ. ಜನರ ವೈಯಕ್ತಿಕ ಮಾಹಿತಿ & ಗೌಪ್ಯತೆ ರಕ್ಷಿಸಲು ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಕಾನೂನು ಸಹಕಾರಿ ಆಗಲಿದೆ.
ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾನೂನು ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬೆಂಗಳೂರಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಸದ್ ಧ್ವನಿ ಹೆಸರಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿದ್ರು. ಡಿಜಿಟಲ್ ಪ್ರೊಟೆಕ್ಷನ್ ಕಾನೂನು ಆಗಿದ್ದು ಬಹಳ ಸಂತೋಷ ತಂದಿದೆ ಅಂತಾ ಹೇಳಿದ್ರು.