New Year 2025: ಮೈಸೂರಿನ ಅರಮನೆ ಬಳಿ ಹೊಸ ವರ್ಷಾಚರಣೆ ರದ್ದು, ಕಾರಣ?

| Updated By: ರಮೇಶ್ ಬಿ. ಜವಳಗೇರಾ

Updated on: Dec 27, 2024 | 5:02 PM

ಎಲ್ಲರೂ ಹೊಸ ವರ್ಷದ ಆಚರಣೆಗೆ ತುದಿಗಾಲಲ್ಲಿ ನಿಂತಿದ್ದಾರೆ. ಹೌದು...2024ಕ್ಕೆ ಗುಡ್​ ಬೈ ಹೇಳಿ 2025ಅನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಕೆಲವರು ಫುಲ್ ಪಾರ್ಟಿ ಮಾಡುವ ಮೂಲಕ ಹಳೇ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ನಡೆಸಿದ್ದಾರೆ. ಇನ್ನು ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ವರ್ಷದ ಆಚರಣೆಗೆ ಬ್ರೇಕ್ ಬಿದ್ದಿದೆ.

ಮೈಸೂರು, (ಡಿಸೆಂಬರ್ 27): ಬೆಂಗಳೂರಿನಲ್ಲಿ ಹೊಸ ವರ್ಷವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಎಂ.ಜಿ.ರೋಡ್‌, ಬ್ರಿಗೇಡ್‌ ರೋಡ್‌, ಚರ್ಚ್‌ ಸ್ಟ್ರೀಟ್​ನಲ್ಲಿ ಹೊಸ ವರ್ಷ ಆಚರಣೆ ಜೋರಾಗಿರುತ್ತೆ. ಇನ್ನು ಅತ್ತ ಮೈಸೂರಿನಲ್ಲೂ ಸಹ ಪ್ರತಿವರ್ಷದಂತೆ ಹೊಸ ವರ್ಷ ಆಚರಣೆಗೆ ಸಕಲ ಸಿದ್ಧತೆಗಳು ನಡೆದಿದ್ದವು. ಆದ್ರೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ವರ್ಷದ ಆಚರಣೆಗೆ ಬ್ರೇಕ್ ಬಿದ್ದಿದೆ. ಇಂದು (ಡಿಸೆಂಬರ್ 27) ಮತ್ತು ನಾಳೆ(ಡಿಸೆಂಬರ್ 28) ಅರಮನೆ ವಿದ್ಯುತ್​ ದೀಪಾಲಂಕಾರಕ್ಕೂ ಬ್ರೇಕ್ ಬಿದ್ದಿದೆ. ಈ ಬಗ್ಗೆ ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.