ವೇದಿಕೆಯ ಮೇಲೆ ಹಾರ ಹಾಕಿಸಿಕೊಳ್ಳುವಾಗ ಸೂರಜ್ ರೇವಣ್ಣನನ್ನು ಹತ್ತಿರಕ್ಕೆ ಕರೆದ ನಿಖಿಲ್ ಕುಮಾರಸ್ವಾಮಿ!

Updated on: Feb 19, 2025 | 6:53 PM

ಮಾಧ್ಯಮಗಳಲ್ಲಿ ಪದೇಪದೆ ವರದಿಯಾಗಿರುವಂತೆ ಕುಮಾರಸ್ವಾಮಿಯವರು ತಮ್ಮ ಮಗ ನಿಖಿಲ್​ನನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ ಘೋಷಿಸಲು ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅವರ ಪ್ರಸ್ತಾಪಿತ ನಡೆಗೆ ಜೆಡಿಎಸ್ ನಾಯಕರಿಂದ ವಿರೋಧವೇನೂ ಎದುರಾಗಿಲ್ಲ. ಕುಟುಂಬದ ರಾಜಕೀಯ ಲೆಗಸಿಯನ್ನು ಮಗ ಮುಂದುವರಿಸಿಕೊಂಡು ಹೋಗಲಿ ಅನ್ನೋದು ಕುಮಾರಸ್ವಾಮಿಯವರ ಇರಾದೆಯಾಗಿರಬಹುದು. ಸೂರಜ್​ನನ್ನು ಅಧ್ಯಕ್ಷ ಮಾಡುವಂತೆ ರೇವಣ್ಣ ಒತ್ತಾಯಿಲಾರರು.

ಹಾಸನ: ಲೋಕಸಭಾ ಚುನಾವಣೆಯ ನಂತರ ಹೆಚ್ ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಹೆಚ್ ಡಿ ರೇವಣ್ಣ ಕುಟುಂಬವನ್ನು ದೂರ ಮಾಡಿದ್ದರು. ಯಾಕೆ ಅಂತ ಎಲ್ಲ ಕನ್ನಡಿಗರಿಗೆ ಗೊತ್ತು. ಈಗ ಕಾಲ ಬದಲಾಗಿದೆ ಮತ್ತು ಕಾವೇರಿಯಲ್ಲಿ ಹೆಚ್ಚು ನೀರು ಹರಿದು ಹೋಗಿದೆ. ಪಕ್ಷ ಸಂಘಟನೆಯ ಹೊಣೆ ಹೊತ್ತಿರುವ ನಿಖಿಲ್ ಕುಮಾರಸ್ವಾಮಿ ಇವತ್ತು ನಗರದಲ್ಲಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಭಾಗದ ಜೆಡಿಎಸ್ ಮುಖಂಡರ ಸಭೆ ನಡೆಸಿದರು. ಸಭೆಯಲ್ಲಿ ರೇವಣ್ಣ ಭಾಗಿಯಾಗಿರಲಿಲ್ಲ ನಿಜ ಅದರೆ ಅವರ ಮಗ ಮತ್ತು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಪಾಲ್ಗೊಂಡಿದ್ದರು. ನಿಖಿಲ್ ಮತ್ತು ಸೂರಜ್ ನಡುವಿನ ಬಾಂಡಿಂಗ್ ಮತ್ತು ಬಾಂಧವ್ಯ ಸಭೆಯಲ್ಲಿ ಹಾಜರಿದ್ದ ಜೆಡಿಎಸ್ ನಾಯಕರಿಗೆ ಖುಷಿ ನೀಡಿರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪಕ್ಷದ ರಾಜ್ಯಾಧ್ಯಕ್ಷನಾಗಲು ಸಿದ್ಧನಿದ್ದೇನೆ ಅನ್ನೋದನ್ನು ನಿಖಿಲ್ ಕುಮಾರಸ್ವಾಮಿ ನೇರವಾಗಿ ಹೇಳಲ್ಲ!

Published on: Feb 19, 2025 06:51 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More