ಗಾಂಧಿನಗರದಲ್ಲಿ ಮಾಯವಾಯ್ತು ಶುಕ್ರವಾರದ ಕಳೆ; ಸಿನಿಮಾ ರಿಲೀಸ್ ಇಲ್ಲದೇ ಚಿತ್ರಮಂದಿರಗಳು ಖಾಲಿ
ಥಿಯೇಟರ್ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣ ಆಗಿದೆ. ಇದರಿಂದ ಚಿತ್ರರಂಗಕ್ಕೆ ಭಾರಿ ನಷ್ಟ ಆಗಲಿದೆ.
ಕೊರೊನಾ ಮೂರನೇ ಅಲೆ ಹೆಚ್ಚುತ್ತಿರುವ ಕಾರಣದಿಂದ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಇದು ನೇರವಾಗಿ ಚಿತ್ರರಂಗದ ಮೇಲೆ ಪರಿಣಾಮ ಬೀರಿದೆ. ನೈಟ್ ಕರ್ಫ್ಯೂ (Night Curfew) ಮತ್ತು ವೀಕೆಂಡ್ ಕರ್ಫ್ಯೂ (Weekend Curfew) ಜಾರಿ ಆಗಿರುವುದರಿಂದ ಯಾವುದೇ ಹೊಸ ಸಿನಿಮಾ ಕೂಡ ಬಿಡುಗಡೆ ಆಗುತ್ತಿಲ್ಲ. ಪರಿಸ್ಥಿತಿ ಚೆನ್ನಾಗಿ ಇದ್ದಿದರೆ ಗಾಂಧಿನಗರದಲ್ಲಿ ಈ ಶುಕ್ರವಾರ (ಜ.7) ವಾತಾವರಣ ರಂಗೇರಬೇಕಿತ್ತು. ತೆಲುಗಿನ ಆರ್ಆರ್ಆರ್, ಕನ್ನಡದ ‘ಡಿಎನ್ಎ’ ಮುಂತಾದ ಚಿತ್ರಗಳು ರಿಲೀಸ್ ಆಗಬೇಕಿತ್ತು. ಆದರೆ ಒಮಿಕ್ರಾನ್ ಹರಡುತ್ತಿರುವ (Omicron Surge) ಹಿನ್ನೆಲೆಯಲ್ಲಿ ಎಲ್ಲ ವಹಿವಾಟುಗಳು ಕುಸಿದಿವೆ. ಈಗಾಗಲೇ ಪ್ರದರ್ಶನ ಕಾಣುತ್ತಿದ್ದ ಸಿನಿಮಾಗಳಿಗೂ ಪ್ರೇಕ್ಷಕರ ಸಂಖ್ಯೆ ಇಳಿಮುಖ ಆಗಿದೆ. ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣ ಆಗಿದೆ. ಇದರಿಂದ ಚಿತ್ರರಂಗಕ್ಕೆ ಭಾರಿ ನಷ್ಟ ಆಗಲಿದೆ.
ಇದನ್ನೂ ಓದಿ:
ಬಿಕೋ ಎನ್ನುತ್ತಿವೆ ಚಿತ್ರಮಂದಿರಗಳು; ವೀಕೆಂಡ್ ಕರ್ಫ್ಯೂಗೂ ಮುನ್ನವೇ ಚಿತ್ರರಂಗ ಸೈಲೆಂಟ್
ಮುಂದಿನ ವಾರವಾದ್ರೂ ಚೇತರಿಸಿಕೊಳ್ಳುತ್ತಾ ಚಿತ್ರರಂಗ? ವಾಣಿಜ್ಯ ಮಂಡಳಿಗೆ ‘ಡಿಎನ್ಎ’ ತಂಡದ ಮನವಿ