ಬ್ರಹ್ಮ ಅಡ್ಡ ಬಂದರೂ ನೈಋತ್ಯ ಪದವೀಧರ ಕ್ಷೇತ್ರದಿಂದ ರಘುಪತಿ ಭಟ್ ಗೆಲ್ಲುತ್ತಾರೆ: ಕೆಎಸ್ ಈಶ್ವರಪ್ಪ

|

Updated on: May 21, 2024 | 4:47 PM

ಶಿವಮೊಗ್ಗದಲ್ಲಿಂದು ಬೆಂಬಲಿಗರು ಮತ್ತು ಪದವೀಧರ ಮತದಾರರನ್ನು ಉದ್ದೇಶಿಸಿ ಮಾತಾಡಿದ ಈಶ್ವರಪ್ಪ ಪಕ್ಷದ ವ್ಯವಹಾರಗಳಲ್ಲಿ ಬಿಎಸ್ ಯಡಿಯೂರಪ್ಪ ಕುಟುಂಬ ಏಕಸ್ವಾಮ್ಯ ಮೆರೆಯುತ್ತಿದ್ದು ಮೊದಲಿದ್ದ ಸಾಮೂಹಿಕ ನಾಯಕತ್ವ ಕಾಣೆಯಾಗಿದೆ ಎಂದರು. ಇದನ್ನೇ ಬದಲಾಯಿಸಬೇಕು ಎಂದು ತಾನು ಮತ್ತು ರಘುಪತಿ ಭಟ್ ಪಣತೊಟ್ಟಿರುವುದಾಗಿ ಅವರು ಹೇಳಿದರು.

ಶಿವಮೊಗ್ಗ: ಬಿಜೆಪಿಯಿಂದ ಉಚ್ಚಾಟಿತರಾಗಿರುವ ಕೆಎಸ್ ಈಶ್ವರಪ್ಪ (KS Eshwarappa) ಮತ್ತು ರಘುಪತಿ ಭಟ್ (Raghupathi Bhat) ಒಂದೇ ಬಳ್ಳಿಯ ಹೂಗಳು ಅಥವಾ ಒಂದೇ ದೋಣಿಯ ಪಯಣಿಗರು. ಇಬ್ಬರೂ ರಾಜ್ಯ ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಈಶ್ವರಪ್ಪ, ಜೂನ್ 3 ರಂದು ವಿಧಾನ ಪರಿಷತ್ ಚುನಾವಣೆಯಲ್ಲಿ ನೈಋತ್ಯ ಪದವೀಧರ ಕ್ಷೇತ್ರದಿಂದ (South-West Graduates constituency) ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಘುಪತಿ ಭಟ್ ಅವರಿಗೆ ಬೆಂಬಲ ಸೂಚಿಸಿ ಮತ ಯಾಚಿಸುತ್ತಿದ್ದಾರೆ. ಶಿವಮೊಗ್ಗದಲ್ಲಿಂದು ಬೆಂಬಲಿಗರು ಮತ್ತು ಪದವೀಧರ ಮತದಾರರನ್ನು ಉದ್ದೇಶಿಸಿ ಮಾತಾಡಿದ ಈಶ್ವರಪ್ಪ ಪಕ್ಷದ ವ್ಯವಹಾರಗಳಲ್ಲಿ ಬಿಎಸ್ ಯಡಿಯೂರಪ್ಪ ಕುಟುಂಬ ಏಕಸ್ವಾಮ್ಯ ಮೆರೆಯುತ್ತಿದ್ದು ಮೊದಲಿದ್ದ ಸಾಮೂಹಿಕ ನಾಯಕತ್ವ ಕಾಣೆಯಾಗಿದೆ ಎಂದರು. ಇದನ್ನೇ ಬದಲಾಯಿಸಬೇಕು ಎಂದು ತಾನು ಮತ್ತು ರಘುಪತಿ ಭಟ್ ಪಣತೊಟ್ಟಿರುವುದಾಗಿ ಹೇಳಿದ ಈಶ್ವರಪ್ಪ ಬ್ರಹ್ಮ ಅಡ್ಡಬಂದರೂ ಭಟ್ ನೈಋತ್ಯ ಪಧವೀಧರ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾರೆ ಎಂದರು. ಹಿಂದೂತ್ವದಲ್ಲಿ ಶಿವಮೊಗ್ಗ ಜಿಲ್ಲೆಯು ದಕ್ಷಿಣ ಕನ್ನಡ, ಉಡುಪಿ ಮತ್ತಿ ಕೊಡಗು ಜಿಲ್ಲೆಗಳಿಗಿಂತ ಹಿಂದಿಲ್ಲ, ಹಿಂದೂತ್ವದಲ್ಲಿ ನಂಬಿಕೆಯಿರುವ ಮತ್ತು ಅದನ್ನು ಪ್ರತಿಪಾದಿಸುವ ಜನರ ಮನೆಮನೆಗೆ ಹೋಗಿ ಭಟ್ ಅವರಿಗೆ ಮತ ಯಾಚಿಸೋಣ ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಬಗೆದಿರುವ ರಾಘವೇಂದ್ರ ವಿರುದ್ಧ ಎಫ್ಐಆರ್ ದಾಖಲಾಗಬೇಕು: ಕೆಎಸ್ ಈಶ್ವರಪ್ಪ

Follow us on