ಶಿವರಾಜ್ ಕುಮಾರ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಹಿಸಲ್ಲ: ಬೇಳೂರು ಗೋಪಾಲಕೃಷ್ಣ
Shiva Rajkumar: ಕಮಲ್ ಹಾಸನ್ ಕನ್ನಡದ ಬಗ್ಗೆ ಆಡಿರುವ ಮಾತು ವಿವಾದವಾಗಿದ್ದು, ಈ ವಿವಾದಕ್ಕೆ ಶಿವರಾಜ್ ಕುಮಾರ್ ಹೆಸರನ್ನು ಕೆಲವರು ಎಳೆದು ತಂದಿದ್ದಾರೆ. ಶಿವರಾಜ್ ಕುಮಾರ್ ಬಗ್ಗೆ ಕೆಲವರು ಲಘುವಾಗಿಯೂ ಮಾತನಾಡಿದ್ದಾರೆ. ಇದೀಗ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಶಿವರಾಜ್ ಕುಮಾರ್ ಬಗ್ಗೆ ಲಘುವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ ಎಂದಿದ್ದಾರೆ.
ಕಮಲ್ ಹಾಸನ್ (Kamal Haasan) ಅವರ ಹೇಳಿಕೆಯನ್ನು ಖಂಡಿಸಿರುವ ಶಾಸಕ ಬೇಳೂರು ಗೋಪಾಲಕೃಷ್ಣ, ಅದರ ಜೊತೆಗೆ ಶಿವರಾಜ್ ಕುಮಾರ್ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕಮಲ್ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ, ಕನ್ನಡಪರ ಹೋರಾಟಗಾರರು ಅವರ ಹಕ್ಕಿನಡಿಯಲ್ಲಿ ಹೋರಾಟ ಮಾಡಲಿ, ಆದರೆ ಚಿತ್ರಮಂದಿರಗಳಿಗೆ ಬೆಂಕಿ ಇಡುತ್ತೇವೆ ಎಂಬುದನ್ನು ಒಪ್ಪಲಾಗುವುದಿಲ್ಲ, ಜೊತೆಗೆ ಶಿವರಾಜ್ ಕುಮಾರ್ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನವಾಗಲಿ, ಶಿವರಾಜ್ ಕುಮಾರ್ ಬಗ್ಗೆ ಹಗುರವಾಗಿ ಮಾತನಾಡುವ ಕಾರ್ಯವನ್ನು ಸಹ ಸಹಿಸುವುದಿಲ್ಲ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
