ನಮ್ಮದು ಜಾತ್ಯಾತೀತ ರಾಷ್ಟ್ರ, ವಿದೇಶಿ ಉಗ್ರ ಸಂಘಟನೆಗಳು ಶಾಂತಿ-ಸೌಹಾರ್ದತೆ ಕದಡಲು ಪ್ರಯತ್ನಿಸಿದರೆ ಸುಮ್ಮನಿರಲ್ಲ: ಶಿವಕುಮಾರ
ನಮ್ಮದು ಜಾತ್ಯಾತೀತ ರಾಷ್ಟ್ರವಾಗಿರುವುದರಿಂದ ದೇಶದ ಸಮಗ್ರತೆ ಮತ್ತು ಶಾಂತಿಯೊಂದಿಗೆ ನಾವು ಯಾವುದೇ ರಾಜಿ ಮಾಡಿಕೊಳ್ಳವುದಿಲ್ಲ, ಇದೇ ನಮ್ಮ ಪಕ್ಷದ ನಿಲುವು ಕೂಡ ಆಗಿದೆ ಎಂದು ಶಿವಕುಮಾರ ಹೇಳಿದರು.
ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ (KPCC) ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ಮಂಡ್ಯದ ಯುವತಿ ಮುಸ್ಕಾನ್ ಖಾನ್ (Muskan Khan) ಬಗ್ಗೆ ಅಲ್-ಖೈದಾ ಮುಖ್ಯಸ್ಥ ಅಂತ ಹೇಳಿಕೊಳ್ಳುವ ಆಯ್ಮನ್ ಮೊಹಮ್ಮದ್ ರಬೀ ಅಲ್-ಜವಾಹಿರಿ ರಿಲೀಸ್ ಮಾಡಿರುವ ವಿಡಿಯೋವನ್ನು ಖಂಡಿಸಿದರು. ನಮ್ಮ ರಾಷ್ಟ್ರ ಕೋಮು ಸೌಹಾರ್ದತೆ ಪ್ರತಿಪಾದಿಸುವ ಮತ್ತು ಆಚರಿಸುವ ದೇಶವಾಗಿದೆ. ನಾವೆಲ್ಲ ಶಾಂತಿ ಸಮಾಧಾನಗಳಿಂದ ಬದುಕುತ್ತಿದ್ದೇವೆ, ಹೊರಗಿನವರು ನಮ್ಮ ದೇಶದ ಬಗ್ಗೆ ಮಾತಾಡಿ ನಮ್ಮಲ್ಲಿನ ಶಾಂತಿ, ಸಮಗ್ರತೆ ಮತ್ಯು ಐಕ್ಯತೆಯನ್ನು ಕದಡುವಂತಿಲ್ಲ ಎಂದು ಶಿವಕುಮಾರ ಹೇಳಿದರು.
ಅಲ್-ಖೈದಾ ಒಂದು ನಿಷೇಧಕ್ಕೊಳಗಾಗಿರುವ ಸಂಘಟನೆಯಾಗಿದೆ. ಅದೊಂದೇ ಅಲ್ಲ, ಬೇರೆ ಯಾವುದೇ ಉಗ್ರ ಸಂಘಟನೆಗೆ ನಮ್ಮಲ್ಲಿ ಪ್ರವೇಶವಿಲ್ಲ. ನಮ್ಮದು ಜಾತ್ಯಾತೀತ ರಾಷ್ಟ್ರವಾಗಿರುವುದರಿಂದ ದೇಶದ ಸಮಗ್ರತೆ ಮತ್ತು ಶಾಂತಿಯೊಂದಿಗೆ ನಾವು ಯಾವುದೇ ರಾಜಿ ಮಾಡಿಕೊಳ್ಳವುದಿಲ್ಲ, ಇದೇ ನಮ್ಮ ಪಕ್ಷದ ನಿಲುವು ಕೂಡ ಆಗಿದೆ ಎಂದು ಶಿವಕುಮಾರ ಹೇಳಿದರು.
ಶಿವಕುಮಾರ ಅವರ ಹೇಳಿಕೆಯ ಹೆಚ್ಚಿನ ಭಾಗ ಇಂಗ್ಲಿಷ್ ಭಾಷೆಯಲ್ಲಿತ್ತು. ಯಾಕೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬಹುದು ಮಾರಾಯ್ರೇ. ಅವರ ಬಲಭಾಗದಲ್ಲಿ ಎ ಐ ಸಿ ಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಕುಳಿತಿದ್ದಾರೆ. ಅವರಿಗೆ ಕನ್ನಡ ಬರೋದಿಲ್ಲ. ತಾವು ಮಾತಾಡಿದ್ದು ಏನು ಅಂತ ಅವರಿಗೂ ಅರ್ಥವಾಗಲು ಡಿಕೆಶಿ ಆಂಗ್ಲ ಭಾಷೆಯಲ್ಲಿ ಮಾತಾಡಿದರು.
ಕೋಮು ಗಲಭೆಗೆ ಪ್ರಚೋದನೆಯಾಗುವ ಹೇಳಿಕೆಗಳನ್ನು ನೀಡಿರುವ ಅರಗ ಜ್ಞಾನೇಂದ್ರ ಮತ್ತು ಸಿಟಿ ರವಿ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಶಿವಕುಮಾರ ಹೇಳಿದ್ದಾರೆ, ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಹೇಗೆ ಅಂತ ಕೇಳಿದ ಪ್ರಶ್ನೆಗೆ, ನಾವೇ ಸ್ವಯಂಪ್ರೇರಿತ ದೂರು ದಾಖಲಿಸುತ್ತೇವೆ ಎಂದು ಶಿವಕುಮಾರ ಹೇಳಿದರು.
ಇದನ್ನೂ ಓದಿ: ಜ್ಞಾನೇಂದ್ರ ಮತ್ತು ಸಿಟಿ ರವಿ ಮತೀಯ ಗಲಭೆಗೆ ಪ್ರಚೋದನೆಯಾಗುವ ಹೇಳಿಕೆ ನೀಡುತ್ತಿರುವುದರಿಂದ ಕೂಡಲೇ ಬಂಧಿಸಬೇಕು: ಡಿಕೆ ಶಿವಕುಮಾರ್