ಮಾಜಿ ಡೆಪ್ಯುಟಿ ಸ್ಪೀಕರ್ ಕೃಷ್ಣಾರೆಡ್ಡಿ ಕಾರಿನ ನಂಬರ್ ಪ್ಲೇಟ್ ಪ್ರಮಾದ, ಆರ್ ಟಿ ಒ ಅಧಿಕಾರಿಗಳು ತಡೆದು ವಿಚಾರಿಸಿದರು
ಜನರ ಪ್ರತಿನಿಧಿಗಳು ಸಾರ್ವಜನಿಕವಾಗಿ ಜವಾಬ್ದಾರಿಯಿಂದ ವರ್ತಿಸುವುದರಿಂದ ತಮ್ಮ ವಾಹನಕ್ಕೆ ಸಂಬಂಧಿಸಿದ ಎಲ್ಲ ಕಾಗದ ಪತ್ರಗಳನ್ನು ಜೊತೆಯಲ್ಲಿ ಇಟ್ಟುಕೊಂಡಿರುತ್ತಾರೆ ಎಂಬ ನಂಬಿಕೆ ಅಧಿಕಾರಿಗಳಲ್ಲಿರುತ್ತದೆ.
ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಗುರುವಾರ ಮಾಜಿ ಡೆಪ್ಯುಟಿ ಸ್ಪೀಕರ್ (deputy speaker) ಕಾರನ್ನೂ ಬಿಡದೆ ಜುಲ್ಮಾನೆ ವಿಧಿಸಿದರು. ಕಾರಾಗಲೀ, ದ್ವಿಚಕ್ರವಾಹನವಾಗಲೀ ಅಥವಾ ಹೆವಿ ಮೋಟಾರ್ ಆಗಿರಲಿ ಆರ್ ಟಿ ಒ ಅಧಿಕಾರಿಗಳು (RTO officials) ತಪಾಸಣೆ ಮಾಡುವ ದೃಶ್ಯಗಳು ನಮಗೆ ಕಾಣಿಸುತ್ತಿರುತ್ತವೆ. ವಿಐಪಿ ಗಳ ವಾಹನಗಳನ್ನು ಪರಿಶೀಲಿಸಬಾರದು ಅಂತೇನಿಲ್ಲ. ತಪಾಸಣೆ ಮಾಡುವ ಅಧಿಕಾರ ಅವರಿಗೆ ಇರುತ್ತದೆ. ಆದರೆ ಸಾಮಾನ್ಯವಾಗಿ ಅವರು ಹಾಗೆ ಮಾಡೋದಿಲ್ಲ. ಜನರ ಪ್ರತಿನಿಧಿಗಳು (representatives of people) ಸಾರ್ವಜನಿಕವಾಗಿ ಜವಾಬ್ದಾರಿಯಿಂದ ವರ್ತಿಸುವುದರಿಂದ ತಮ್ಮ ವಾಹನಕ್ಕೆ ಸಂಬಂಧಿಸಿದ ಎಲ್ಲ ಕಾಗದ ಪತ್ರಗಳನ್ನು ಜೊತೆಯಲ್ಲಿ ಇಟ್ಟುಕೊಂಡಿರುತ್ತಾರೆ ಎಂಬ ನಂಬಿಕೆ ಅಧಿಕಾರಿಗಳಲ್ಲಿರುತ್ತದೆ.
ಅವರು ತಪಾಸಣೆ ಮಾಡದಿರಲು ಮತ್ತೊಂದು ಕಾರಣವೂ ಇದೆ. ಅದೇನು ಅಂತ ನಿಮಗೆ ಗೊತ್ತು. ಕೆಲ ಗಣ್ಯರು ತಮ್ಮ ವಾಹನಗಳನ್ನು ಆರ್ ಟಿ ಒ ಅಧಿಕಾರಿಗಳು ನಿಲ್ಲಿಸಿದಾಗ ಅಸಮಾಧಾನಗೊಳ್ಳತ್ತಾರೆ, ಕೋಪಗೊಂಡಿರುವ ಸಂದರ್ಭಗಳೂ ಇವೆ. ಹಾಗೆ ಕೋಪಗೊಂಡವರು ಸರ್ಕಾರೀ ಹಸ್ತಕ್ಷೇಪ ನಡೆಸಿ, ವರ್ಗಾವಣೆ ಮಾಡಿಸುವ ಕೆಲಸಕ್ಕೆ ಮುಂದಾಗುತ್ತಾರೆ.
ಹಾಗಾಗಿ ಯಾಕಪ್ಪ ಅವರ ಉಸಾಬರಿ ಅಂತ ಅವರ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುವ ಗೋಜಿಗೆ ಅಧಿಕಾರಿಗಳು ಹೋಗುವುದಿಲ್ಲ. ಅದರೆ ಗುರುವಾರ ಆರ್ ಟಿ ಒ ಅಧಿಕಾರಿಗಳು ವಿಧಾನಸಭೆ ಮಾಜಿ ಡೆಪ್ಯಟಿ ಸ್ಪೀಕರ್ ಹಾಗೂ ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ ಅವರ ಕಾರಿನ ನೋಂದಣಿ ಸಂಖ್ಯೆ ಸಂಬಂಧಿಸಿದಂತೆ ಕಂಡ ಪ್ರಮಾದ ಹಿನ್ನೆಲೆಯಲ್ಲಿ ವಿಧಾನ ಸೌಧದ ಆವರಣದಲ್ಲಿ ತಪಾಸಣೆ ನಡೆಸಿದರು.
ಈ ಐಷಾರಾಮಿ ಕಾರಿನಲ್ಲಿ ಡ್ರೈವರ್ ಒಬ್ಬನೇ ಇದ್ದಿದ್ದು. ಆಮೇಲೆ ಅಧಿಕಾರಿಗಳು ಒಂದು ನೋಟಿಸ್ ನೀಡಿ ಕಾರನ್ನು ಕಳಿಸಿದರು.
ಇದನ್ನೂ ಓದಿ: ಅಲ್ ಖೈದಾ ವಿಡಿಯೋ ತುಣುಕು: ನಿಖರತೆ ಪರಿಶೀಲಿಸಲು ಪೊಲೀಸರಿಗೆ ಸೂಚಿಸಿದ ಸಿಎಂ ಬಸವರಾಜ ಬೊಮ್ಮಾಯಿ