ಅಲ್​ ಖೈದಾ ವಿಡಿಯೋ ತುಣುಕು: ನಿಖರತೆ ಪರಿಶೀಲಿಸಲು ಪೊಲೀಸರಿಗೆ ಸೂಚಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಅಲ್​ ಖೈದಾ ವಿಡಿಯೋ ತುಣುಕು: ನಿಖರತೆ ಪರಿಶೀಲಿಸಲು ಪೊಲೀಸರಿಗೆ ಸೂಚಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ತನಿಖಾ ವರದಿ ಬರುವವರೆಗೆ ಯಾವುದೇ ಕ್ರಮ ಇಲ್ಲ - ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು: ಮೋಸ್ಟ್​ ವಾಂಟೆಡ್ ಉಗ್ರ ಸಂಘಟನೆ ಅಲ್​ ಖೈದಾ ನಾಯಕನೊಬ್ಬನ ವಿಡಿಯೋ ತುಣುಕಿನ ನಿಖರತೆ ಬಗ್ಗೆ ಪರಿಶೀಲಿಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮೈಸೂರು ಭೇಟಿಗಾಗಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಮಾಧ್ಯಮದವರಿಗೆ ಈ ಪ್ರತಿಕ್ರಿಯೆ ನೀಡಿದರು. ಹಿಜಾಬ್ ಪ್ರಕರಣದ ಬಗ್ಗೆ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ ದೇಶ, ರಾಜ್ಯದ ಕಾನೂನಿನ ವಿರುದ್ಧ ಅನವಶ್ಯಕವಾಗಿ ಹಲವಾರು ವಿಷಯಗಳನ್ನು ಪ್ರಾರಂಭ ಮಾಡಿ ಜನರಲ್ಲಿ ಆಶಾಂತಿ ಗೊಂದಲವನ್ನು ಮೂಡಿಸುವ ಶಕ್ತಿ ಹಿಂದಿನಿಂದಲೂ ಕೆಲಸ […]

TV9kannada Web Team

| Edited By: sadhu srinath

Apr 07, 2022 | 7:47 PM

ಮೈಸೂರು: ಮೋಸ್ಟ್​ ವಾಂಟೆಡ್ ಉಗ್ರ ಸಂಘಟನೆ ಅಲ್​ ಖೈದಾ ನಾಯಕನೊಬ್ಬನ ವಿಡಿಯೋ ತುಣುಕಿನ ನಿಖರತೆ ಬಗ್ಗೆ ಪರಿಶೀಲಿಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮೈಸೂರು ಭೇಟಿಗಾಗಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಮಾಧ್ಯಮದವರಿಗೆ ಈ ಪ್ರತಿಕ್ರಿಯೆ ನೀಡಿದರು.

ಹಿಜಾಬ್ ಪ್ರಕರಣದ ಬಗ್ಗೆ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ ದೇಶ, ರಾಜ್ಯದ ಕಾನೂನಿನ ವಿರುದ್ಧ ಅನವಶ್ಯಕವಾಗಿ ಹಲವಾರು ವಿಷಯಗಳನ್ನು ಪ್ರಾರಂಭ ಮಾಡಿ ಜನರಲ್ಲಿ ಆಶಾಂತಿ ಗೊಂದಲವನ್ನು ಮೂಡಿಸುವ ಶಕ್ತಿ ಹಿಂದಿನಿಂದಲೂ ಕೆಲಸ ಮಾಡುತ್ತಾ ಬಂದಿದೆ. ಅದರ ಭಾಗವಾಗಿ ಅಲ್ ಖೈದಾ ಸಂಘಟನೆಯಿಂದ ಎಂದು ಹೇಳಿಕೊಂಡು ವಿಡಿಯೋ ತುಣುಕಿನಲ್ಲಿ ಅಭಿಪ್ರಾಯವೊಂದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಸಿದ್ಧರಾಮಯ್ಯ ಗಲಿಬಿಲಿ ಆಗುವುದೇಕೆ: ಸಿಎಂ ಬೊಮ್ಮಾಯಿ ಮಾರ್ಮಿಕ ಪ್ರಶ್ನೆ ಅಲ್ ಖೈದಾ ಹೇಳಿಕೆ ಹಿಂದೆ ಆರ್ ಎಸ್ ಎಸ್ ಕೈವಾಡವಿದೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರ ಮಾತಿಗೆ ಯಾವುದೇ ತರ್ಕ ಹಾಗೂ ಆಧಾರ ಇಲ್ಲ. ಅಲ್ ಖೈದಾ ಹೇಳಿಕೆ ಬಹಿರಂಗವಾದರೆ ಸಿದ್ಧರಾಮಯ್ಯ ಅವರು ಗಲಿಬಿಲಿ ಆಗುತ್ತಿರುವುದೇಕೆ ಎನ್ನುವ ಮೂಲಭೂತ ಪ್ರಶ್ನೆ ಉದ್ಭವಿಸುತ್ತಿದೆ ಎಂದು ಅವರು ಹೇಳಿದರು.

Also Read: ಮಂಡ್ಯ ವಿದ್ಯಾರ್ಥಿನಿಗೆ ಶಹಬಾಸ್ ಎಂದ ಅಲ್​ ಖೈದಾ ನಾಯಕನನ್ನು ಎಲ್ರೂ ತರಾಟೆಗೆ ತೆಗೆದುಕೊಂಡಿರುವಾಗ ಸಿದ್ದರಾಮಯ್ಯ ಏನಂದರು ನೋಡಿ!?

Also Read: ಮೈಸೂರು ಕೋರ್ಟ್‌ನಲ್ಲಿ ಬಾಂಬ್ ಸ್ಫೋಟ ಪ್ರಕರಣ; ಮೂವರು ಅಲ್‌ಖೈದಾ ಉಗ್ರರಿಗೆ ಶಿಕ್ಷೆ ಪ್ರಮಾಣ ಪ್ರಕಟ

Follow us on

Related Stories

Most Read Stories

Click on your DTH Provider to Add TV9 Kannada