ಪರೀಕ್ಷೆ ಬರೆಯುವಾಗ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಸಾವು ಪ್ರಕರಣ; ಅನುಶ್ರೀ ಕುಟುಂಬಕ್ಕೆ ನೆರವಾಗಲು ಮೈಸೂರಿನಲ್ಲಿ ಪಾದಯಾತ್ರೆ
ಮಾರ್ಚ್ 28ಕ್ಕೆ ಪರೀಕ್ಷಾ ಕೊಠಡಿಯಲ್ಲಿ ಬಿದ್ದು ಮೃತಪಟ್ಟ ಅನುಶ್ರೀ ಕುಟುಂಬಕ್ಕೆ ಶಿಕ್ಷಣ ಇಲಾಖೆ ಒಂದು ಲಕ್ಷ ಪರಿಹಾರ ನೀಡಿದೆ. ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರು ವಿದ್ಯಾರ್ಥಿನಿ ಕುಟುಂಬಕ್ಕೆ ಒಂದು ಲಕ್ಷ ಚೆಕ್ ವಿತರಣೆ ಮಾಡಿದ್ದಾರೆ.
ಮೈಸೂರು: ಪರೀಕ್ಷೆ ಬರೆಯುವಾಗ ಮೃತಪಟ್ಟ ಎಸ್ಎಸ್ಎಲ್ಸಿ (SSLC) ವಿದ್ಯಾರ್ಥಿನಿ ಅನುಶ್ರೀ ಕುಟುಂಬಕ್ಕೆ ನೆರವಾಗಲು ಪಾದಯಾತ್ರೆ (Padayathre) ಮಾಡಿದ್ದಾರೆ. ಪರೀಕ್ಷೆ ಬರೆಯುವಾಗ ಗೊಂದಲ ಶಾಕ್ನಿಂದ ಅನುಶ್ರೀ ಮೃತಪಟ್ಟಿದ್ದಳು. ಸೇವಾಶ್ರಯ ಫೌಂಡೇಶನ್ ಸದಸ್ಯರು ಹಾಗೂ ವಿದ್ಯಾರ್ಥಿಗಳು ಪಾದಯಾತ್ರೆ ನಡೆಸಿ ಅನುಶ್ರೀ ಕುಟುಂಬಕ್ಕೆ ದೇಣಿಗೆ ಸಂಗ್ರಹ ಮಾಡಿದ್ದಾರೆ. ನರಸೀಪುರದಿಂದ ಅಕ್ಕೂರು ಗ್ರಾಮದವರೆಗೂ ಪಾದಯಾತ್ರೆ ನಡೆಸಿದ್ದಾರೆ. ಪಾದಯಾತ್ರೆಯಲ್ಲಿ ಟಿ ನರಸೀಪುರ ಸಣ್ಣ ವ್ಯಾಪಾರಿಗಳು ಧನ ಸಹಾಯ ಮಾಡಿದ್ದಾರೆ. ಸಂಗ್ರಹವಾದ ಹಣವನ್ನು ಫೌಂಡೇಶನ್ ಅನುಶ್ರೀ ಕುಟುಂಬಕ್ಕೆ ನೀಡಿದೆ.
ಮಾರ್ಚ್ 28ಕ್ಕೆ ಪರೀಕ್ಷಾ ಕೊಠಡಿಯಲ್ಲಿ ಬಿದ್ದು ಮೃತಪಟ್ಟ ಅನುಶ್ರೀ ಕುಟುಂಬಕ್ಕೆ ಶಿಕ್ಷಣ ಇಲಾಖೆ ಒಂದು ಲಕ್ಷ ಪರಿಹಾರ ನೀಡಿದೆ. ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರು ವಿದ್ಯಾರ್ಥಿನಿ ಕುಟುಂಬಕ್ಕೆ ಒಂದು ಲಕ್ಷ ಚೆಕ್ ವಿತರಣೆ ಮಾಡಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿ ಕುಳಿತಿದ್ದ ಅನುಶ್ರೀಯನ್ನು 15 ನಿಮಿಷ ಬಳಿಕ ಬೇರೆ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಆಘಾತದಿಂದ ಕುಸಿದು ಬಿದ್ದಿದ್ದಳು. ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು. ಈಕೆ ಮಾದಾಪುರ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.
ಇದನ್ನೂ ಓದಿ
Chanakya Niti: ನಾವು ಬಯಸಿದರೆ ನಾಯಿಯಿಂದಲೂ ಬಹಳಷ್ಟು ಕಲಿಯಬಹುದು, ನಾಯಿಯ 4 ವಿಶೇಷ ಗುಣಗಳಿವು- ಚಾಣಕ್ಯ ನೀತಿ