ಮೈಸೂರು: ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣದ ಅವಶ್ಯಕತೆ ಇಲ್ಲ: ಪ್ರಮೋದಾದೇವಿ ಒಡೆಯರ್ ಹೇಳಿಕೆ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣದ ಅವಶ್ಯಕತೆ ಇಲ್ಲ: ಪ್ರಮೋದಾದೇವಿ ಒಡೆಯರ್ ಹೇಳಿಕೆ
ಪ್ರಮೋದಾದೇವಿ ಒಡೆಯರ್

ಚಾಮುಂಡಿ ಬೆಟ್ಟದ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಆಲ್ಲಿ ಕಮರ್ಷಿಯಲ್ ಮಳಿಗೆಗಳ ಅವಶ್ಯಕತೆಯೂ ಇಲ್ಲ. ಬೆಟ್ಟದಲ್ಲಿ ಮೂಲಭೂತ ಸೌಕರ್ಯಗಳ ನೀಡಿದರೆ ಸಾಕು ಎಂದು ಮೈಸೂರಿನಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿಕೆ ನೀಡಿದ್ದಾರೆ.

TV9kannada Web Team

| Edited By: sadhu srinath

Apr 06, 2022 | 4:01 PM

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣದ ಅವಶ್ಯಕತೆ ಇಲ್ಲ. ನಗರದಿಂದ ಬೆಟ್ಟಕ್ಕೆ ಹೋಗಲು ಕೇವಲ 20 ನಿಮಿಷ ಸಾಕು. ಪರಿಸರ ನಾಶ ಮಾಡಿ ರೋಪ್ ವೇ ಮಾಡುವ ಅಗತ್ಯವಿಲ್ಲ. ಚಾಮುಂಡಿ ಬೆಟ್ಟ ಧಾರ್ಮಿಕ ಕ್ಷೇತ್ರವಾಗಿ ಉಳಿಯಬೇಕು. ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಮಾಡಿದ್ರೆ ನಾಶವಾಗುತ್ತೆ. ಈಗಾಗಲೇ ಚಾಮುಂಡಿ ಬೆಟ್ಟದ ಪರಿಸರಕ್ಕೆ ಡ್ಯಾಮೇಜ್ ಆಗಿದೆ. ಈ ಹಿಂದೆ ಬೆರಳೆಣಿಕೆಯಷ್ಟಿದ್ದ ಮನೆ ಇಂದು ಗ್ರಾಮವಾಗಿದೆ. ಬೆಟ್ಟದ ಮೇಲೆಯೇ ನಗರ ಪ್ರದೇಶ ನಿರ್ಮಾಣವಾಗುತ್ತಿದೆ. ಚಾಮುಂಡಿ ಬೆಟ್ಟದ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು. ಆಲ್ಲಿ ಕಮರ್ಷಿಯಲ್ ಮಳಿಗೆಗಳ ಅವಶ್ಯಕತೆಯೂ ಇಲ್ಲ. ಬೆಟ್ಟದಲ್ಲಿ ಮೂಲಭೂತ ಸೌಕರ್ಯಗಳ ನೀಡಿದರೆ ಸಾಕು ಎಂದು ಮೈಸೂರಿನಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿಕೆ ನೀಡಿದ್ದಾರೆ.

ಈ ಮೊದಲು ಕೂಡ ಮೈಸೂರು ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಯೋಜನೆಗೆ ಹಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ವಿಚಾರಕ್ಕೆ ವಿರೋಧ ವ್ಯಕ್ತವಾಗಿತ್ತು. ರೋಪ್ ವೇ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಮೈಸೂರು ಕನ್ನಡ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗಿತ್ತು. ಚಾಮುಂಡಿಬೆಟ್ಟದ ತಪ್ಪಲಿನ ಬಳಿ ಪ್ರತಿಭಟನೆ ನಡೆಸಲಾಗಿತ್ತು. ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಚಾಮುಂಡಿ ಬೆಟ್ಟಕ್ಕೆ ಸಾಕಷ್ಟು ಮಾರ್ಗಗಳು ಇವೆ. ಸರ್ಕಾರ ಹಣ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರುತ್ತಿದೆ ಎಂದು ಆರೋಪ ಮಾಡಲಾಗಿತ್ತು. ಪ್ರವಾಸೋದ್ಯಮ ಅಭಿವೃದ್ಧಿ ನೆಪದಲ್ಲಿ ಅರಣ್ಯ ಸಂಪತ್ತು ಹಾಳು ಮಾಡಲು ಸರ್ಕಾರ ಹೊರಟಿದೆ ಎಂದು ಆಕ್ರೋಶ ಕೇಳಿಬಂದಿತ್ತು. ರೋಪ್ ವೇ ನಿರ್ಮಾಣದಿಂದ ಸಾವಿರಾರು ಮರ ಕಾಡು ನಾಶ ಆಗುತ್ತದೆ. ಚಾಮುಂಡಿ ಬೆಟ್ಟ ಹಾಳು ಮಾಡುವುದು ಬೇಡ. ಯಾವುದೇ ಕಾರಣಕ್ಕೂ ಸರ್ಕಾರ ಈ ಯೋಜನೆ ಜಾರಿ ಮಾಡಬಾರದು ಎಂದು ಪ್ರತಿಭಟನಾನಿರತರು ಒತ್ತಾಯ ಮಾಡಿದ್ದರು.

ಸಂಸದ ಶ್ರೀನಿವಾಸ್​ ಪ್ರಸಾದ್ ಅವರೂ ಬೆಟ್ಟಕ್ಕೆ ರೋಪ್​ ವೇ ಬೇಡವೆಂದು ಪ್ರತಿಪಾದಿಸಿದ್ದರು: ಈ ಬಾರಿಯ ಕರ್ನಾಟಕ ಬಜೆಟ್​ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಎಂಬ ಬಗ್ಗೆ ಈ ಯೋಜನೆಯನ್ನು ಘೋಷಿಸಲಾಗಿತ್ತು. ಕರ್ನಾಟಕದ ವಿವಿಧ ಕಡೆಗಳಲ್ಲಿ ರೋಪ್ ವೇ ನಿರ್ಮಾಣ ಮಾಡುವ ಬಗ್ಗೆ ಹೇಳಲಾಗಿತ್ತು. ಆದರೆ ಮೈಸೂರು ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೇಡ ಎಂಬ ಕೂಗು ಕೇಳಿಬರುತ್ತಿದೆ. ಕಳೆದ ಮುಂಗಾರು ಜೋರಾಗಿ ಬಿದ್ದಾಗ ಚಾಮುಂಡಿಬೆಟ್ಟ ಪ್ರದೇಶದಲ್ಲಿ ಅನೇಕ ಕಡೆ ಭೂಕುಸಿತ ಪ್ರಕರಣಗಳು ವರದಿಯಾಗಿದ್ದವು. ಇದರಿಂದ ಬೆಚ್ಚಿಬಿದ್ದುದ್ದ ಮೈಸೂರು ಮಂದಿ, ಭಾರೀ ಆತಂಕವನ್ನು ಹೊರಹಾಕಿದ್ದರು. ಸಂಸದ ಶ್ರೀನಿವಾಸ್​ ಪ್ರಸಾದ್ ಅವರೂ ಇತ್ತೀಚೆಗೆ ಬೆಟ್ಟಕ್ಕೆ ರೋಪ್​ ವೇ ಬೇಡಾ ಎಂದು ಪ್ರತಿಪಾದಿಸಿದ್ದರು.

ಇದನ್ನೂ ಓದಿ: ಮೈಸೂರು: ಸಫಾರಿ ವೇಳೆ ಒಂದೆರಡಲ್ಲ, ಮೂರು ಹುಲಿಗಳ ದರ್ಶನ! ಪ್ರವಾಸಿಗರಿಗೆ ಧಮಾಕ; ವಿಡಿಯೋ ನೋಡಿ

ಇದನ್ನೂ ಓದಿ: ಮೈಸೂರು ಜಾತ್ರೆಯಲ್ಲಿ ಎತ್ತಿನ ಕೊಂಬುಗಳಲ್ಲಿ ಮಿಂಚಿದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್; ವಿಡಿಯೋ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada