ಕಂಠಮಟ್ಟ ಕುಡಿದಿದ್ದ ಮಿನಿಟ್ರಕ್ ಡ್ರೈವರ್​ನೊಬ್ಬ ವಾಹನವನ್ನು ಹೆದ್ದಾರಿ ನಡುವೆ ನಿಲ್ಲಿಸಿ ನಿದ್ರೆಗೆ ಜಾರಿದ!

ಕಂಠಮಟ್ಟ ಕುಡಿದಿದ್ದ ಮಿನಿಟ್ರಕ್ ಡ್ರೈವರ್​ನೊಬ್ಬ ವಾಹನವನ್ನು ಹೆದ್ದಾರಿ ನಡುವೆ ನಿಲ್ಲಿಸಿ ನಿದ್ರೆಗೆ ಜಾರಿದ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 07, 2022 | 7:32 PM

ಅವನು ಎಚ್ಚರಗೊಂಡು ಏನು ಅಂತ ಅವರಿಗೆ ಕೇಳುತ್ತಾನೆ! ಗಾಡಿ ಪಕ್ಕಕ್ಕೆ ಹಾಕು ಅಂತ ಜೋರಾಗಿ ಕೂಗಿ ಹೇಳಿದಾಗ ಅವನು ಎದ್ದು ಕೂರುತ್ತಾನೆ ಆದರೆ ಸ್ಟೀರಿಂಗ್ ಮೇಲೆ ತಲೆಯಿಟ್ಟು ಗೊರಕೆ ಹೊಡೆಯಲಾರಂಭಿಸುತ್ತಾನೆ!!

ಇದಪ್ಪಾ ವರಸೆ ಅಂದ್ರೆ! ಹಿಂದೆ ಮುಂದೆ ಚಲಿಸುವ ವಾಹನಗಳಿಗೆ ತನ್ನಿಂದ ತೊಂದರೆಯಾಗುತ್ತಿದೆ ಎಂಬ ಪರಿವೆಯೇ ಈ ಡ್ರೈವರ್ (driver) ಮಹಾಶಯನಿಗೆ ಇಲ್ಲ. ಕಂಠಮಟ್ಟ ಕುಡಿದು ವಾಹನವನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಗಡದ್ದಾಗಿ ನಿದ್ರೆ ಹೊಡೆಯುತ್ತಿದ್ದಾನೆ. ಎಸ್ ಎಮ್ ರೋಡ್ ಲೈನ್ಸ್ (SM Roadlines) ಗೆ ಸೇರಿದ ಈ ಮಿನಿ ಲಾರಿಯ ಕ್ಲೀನರ್ (cleaner) ಸಹ ಫುಲ್ ನಶೆಯಲ್ಲಿದ್ದಾನೆ. ಅವರ ಪಕ್ಕ ಬಾಂಬ್ ಸ್ಫೋಟಗೊಂಡರೂ ಎಚ್ಚರಗೊಳ್ಳದಂಥ ಸ್ಥಿತಿಯಲ್ಲಿ ಅವರಿದ್ದಾರೆ. ಅಂದಹಾಗೆ, ಈ ದೃಶ್ಯ ಕಂಡುಬಂದಿದ್ದು ಮೈಸೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಮಡಿಕೇರಿ ಚೈನ್ ಗೇಟ್ ಬಳಿ. ಹೆದ್ದಾರಿಯಲ್ಲಿ ಹಾದು ಹೋಗುತ್ತಿರುವ ವಾಹನಗಳಲ್ಲಿರುವರು ಡ್ರೈವರ್ ಗೆ ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಅವನು ಎಚ್ಚರಗೊಂಡು ಏನು ಅಂತ ಅವರಿಗೆ ಕೇಳುತ್ತಾನೆ! ಗಾಡಿ ಪಕ್ಕಕ್ಕೆ ಹಾಕು ಅಂತ ಜೋರಾಗಿ ಕೂಗಿ ಹೇಳಿದಾಗ ಅವನು ಎದ್ದು ಕೂರುತ್ತಾನೆ ಆದರೆ ಸ್ಟೀರಿಂಗ್ ಮೇಲೆ ತಲೆಯಿಟ್ಟು ಗೊರಕೆ ಹೊಡೆಯಲಾರಂಭಿಸುತ್ತಾನೆ!! ಕ್ಲೀನರ್, ಡ್ರೈವರ್ ನನ್ನು ಪಕ್ಕಕ್ಕೆಳೆದು ಬೇರೆಯವರಿಗೆ ಲಾರಿಯನ್ನು ಪಕ್ಕಕ್ಕೆ ಹಾಕಲು ಅನುವು ಮಾಡಿಕೊಡುತ್ತಾನೆ. ಆದರೆ, ಅವರಿಗೆ ಲಾರಿಯನ್ನು ಸ್ಟಾರ್ಟ್ ಮಾಡಲು ಆಗಲ್ಲ. ನಂತರ ಕ್ಲೀನರ್ ವ್ಹೀಲ್ ಮೇಲೆ ಕೂರುತ್ತಾನೆ.

ಅವನು ಲಾರಿಯನ್ನು ಸ್ಟಾರ್ಟ್ ಮಾಡುತ್ತಾನಾದರೂ ಗೇರ್ ಹಾಕಿ ಅದನ್ನು ಮುಂದಕ್ಕೆ ಓಡಿಸುವಲ್ಲಿ ವಿಫಲನಾಗುತ್ತಾನೆ. ಅವನ ದೇಹದಲ್ಲೂ ಮದಿರೆ ಇಳಿದಿದೆ ಆದರೆ ಚಾಲಕ ಕುಡಿದಿರುವಷ್ಟು ಪ್ರಮಾಣ ಅಲ್ಲ. ಅಂತಿಮವಾಗಿ ಬೇರೆ ಯಾರೋ ಲಾರಿಯನ್ನು ಪಕ್ಕಕ್ಕೆ ಹಾಕಿ ರಸ್ತೆಯನ್ನು ಕ್ಲೀಯರ್ ಮಾಡುತ್ತಾರೆ.

ಇದನ್ನೂ ಓದಿ:  ಕ್ಯಾಲಿಫೋರ್ನಿಯಾ: ಮಂಚದಲ್ಲಿ 7 ಅಡಿ ಉದ್ದದ ಹಾವು ಮಲಗಿದ್ದನ್ನು ನೋಡಿ ಹೌಹಾರಿದ ವ್ಯಕ್ತಿ; ವೈರಲ್ ವಿಡಿಯೋ ಇಲ್ಲಿದೆ