ಫೈಜಿಯ ತರನ್ನುಮ್ರನ್ನು ಪಾಕಿಸ್ತಾನಿ ಅನ್ನುವ ರವಿಕುಮಾರ್ ನಂತರ ವಿಷಾದ ವ್ಯಕ್ತಪಡಿಸುತ್ತಾರೆ: ಪ್ರಿಯಾಂಕ್ ಖರ್ಗೆ
ಭಾರತೀಯ ಮಹಿಳೆಯರ ಬಗ್ಗೆ ಬಿಜೆಪಿ ತಮಗೆ ತೋಚಿದ್ದನ್ನೆಲ್ಲ ಹೇಳುತ್ತಾರೆ ಮತ್ತು ಬಚಾವಾಗುತ್ತಾರೆ, ಅವರ ವಿರುದ್ಧ ಯಾವ ಕ್ರಮವೂ ಜರುಗುವುದಿಲ್ಲ, ಲೆಫ್ಟಿನೆಂಟ್ ಕರ್ನಲ್ ಸೋಫಿಯ ಖುರೇಷಿಯವರನ್ನು ಮಧ್ಯಪ್ರದೇಶದ ಮಂತ್ರಿ ಕುಂವರ್ ವಿಜಯ್ ಭಯೋತ್ಪಾದಕರ ಸಹೋದರಿ ಅಂತ ಹೇಳಿದ್ದರು, ಆದರೆ ಅವರ ವಿರುದ್ಧ ಯಾವುದೇ ಕ್ರಮ ಜರುಗಲಿಲ್ಲ, ರವಿಕುಮಾರ್ ವಿರುದ್ಧವೂ ಬಿಜೆಪಿ ಕ್ರಮ ತೆಗೆದುಕೊಳ್ಳೋದಿಲ್ಲ ಎಂದು ಖರ್ಗೆ ಹೇಳಿದರು.
ಬೆಂಗಳೂರು, ಮೇ 27: ಐಎಎಸ್ ಅಧಿಕಾರಿ ಮತ್ತು ಕಲಬುರಗಿ ಜಿಲ್ಲಾಧಿಕಾರಿ ಬಿ ಫೌಜಿಯ ತರನ್ನುಮ್ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿರುವ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ (N Ravikumar, MLC) ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಮನುಸ್ಮೃತಿ ಮನಸ್ಥಿತಿಯ ರವಿಕುಮಾರ್ಗೆ ಮಹಿಳೆಯರು ಬದುಕಿನಲ್ಲಿ ಏನಾದರೂ ಸಾಧನೆ ಮಾಡುವುದು ಇಷ್ಟವಿಲ್ಲ, ಫೈಜಿಯ ಅವರು ಭಾರತೀಯ ಆಡಳಿತಾತ್ಮಕ ಸೇವೆ ಪಾಸು ಮಾಡಿ ಕೆಲಸಕ್ಕೆ ಬಂದಿದ್ದಾರೆ, ಪಾಕಿಸ್ತಾನ ಆಡಳಿತಾತ್ಮಕ ಸೇವೆ ಅಲ್ಲ, ಇತ್ತೀಚಿಗೆ ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಪಡೆದಿರುವ ಫೈಜಿಯ ಅವರನ್ನು ರವಿಕುಮಾರ್ ಪಾಕಿಸ್ತಾನದವರು ಅಂತ ಹೇಳೋದ್ರಲ್ಲಿ ಏನಾದರೂ ಅರ್ಥವಿದೆಯೇ? ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸುತ್ತೇನೆ ಅಂಥ ರವಿಕುಮಾರ್ ಈಗ ಹೇಳಿದರೆ ಏನು ಪ್ರಯೋಜನ ಎಂದು ಖರ್ಗೆ ಪ್ರಶ್ನಿಸಿದರು.
ಇದನ್ನೂ ಓದಿ: ಹಿಂದೂಗಳು ಟಾರ್ಗೆಟ್ ಆಗಿದ್ದನ್ನು ಅಲ್ಲಗಳೆಯುವ ಪ್ರಿಯಾಂಕ್ ಖರ್ಗೆ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ: ಚಲವಾದಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ