ಬೆಳ್ಳಿಗದೆ ವಿಚಾರ ಸುಳ್ಳು, ಮಂಜುಳಾ ಪಾಟೀಲ್ ಅವರಿಗೆ ಸಹಾಯ ಮಾಡಲು ಮುಂದಾಗಿದ್ದೆ: ವಿನಯ್ ಕುಲಕರ್ಣಿ

Updated on: Apr 25, 2025 | 12:41 PM

ಐಶ್ವರ್ಯ ಗೌಡ ಜನರಿಗೆ ಮೋಸ ವಂಚನೆ ಮಾಡಿದ್ದರೆ ಅದು ಖಂಡಿತ ತಪ್ಪು ಸಮಾಜ ಅಂಥದನ್ನೆಲ್ಲ ಸಹಿಸಿಕೊಳ್ಳೋದಿಲ್ಲ, ಮೋಸ ಮಾಡುವ ಕೆಲಸವನ್ನು ಯಾರೂ ಮಾಡಬಾರದು, ತನ್ನ ವಿರುದ್ಧ ದೂರು ದಾಖಲಾಗಿದ್ದು ನಿಜ, ತನಿಖಾಧಿಕಾರಿಗಳಯ ತನ್ನ ಮನೆಗೆ ಬಂದು ತಪಾಸಣೆ ಮಾಡಿದ್ದಾರೆ, ಅವರಿಗೆ ಯಾವ ದಾಖಲಾತಿಗಳು ಮನೆಯಲ್ಲಿ ಸಿಕ್ಕಿಲ್ಲ ಎಂದು ವಿನಯ್ ಕುಲಕರ್ಣಿ ಹೇಳಿದರು.

ಬೆಂಗಳೂರು, ಏಪ್ರಿಲ್ 25: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ, ವಂಚನೆ ಪ್ರಕರಣದಲ್ಲಿ ಸಿಲುಕಿರುವ ಐಶ್ವರ್ಯ ಗೌಡಗೆ (Aishwarya Gowda) ತಾನು ಯಾವ ಸಹಾಯವೂ ಮಾಡಿಲ್ಲ ಎಂದು ಹೇಳಿದರು. ಆದರೆ ಮಂಜುಳಾ ಪಾಟೀಲ್ ಹೆಸರಿನ ಮಹಿಳೆಯೊಬ್ಬರಿಗೆ ಸಹಾಯ ಮಾಡುವಂತೆ ಕೆಲ ಸಚಿವರು ಫೋನ್ ಮಾಡಿ ಹೇಳಿದಾಗ ತಾನು ಅದಕ್ಕೆ ಮುಂದಾಗಿದ್ದು ನಿಜ ಎಂದು ಹೇಳಿದರು. ಅವರು ತನಗೆ ಬೆಳ್ಳಿಗದೆಯನ್ನು ನೀಡಿಲ್ಲ, ಹುಟ್ಟುಹಬ್ಬದ ಸಂದರ್ಭದಲ್ಲಿ ಯಾವುದೋ ಗಿಫ್ಟ್ ನೀಡಿದ್ದರು, ಆ ಫೋಟೋ ತನ್ನಲ್ಲಿದೆ ಎಂದು ಕುಲಕರ್ಣಿ ಹೇಳಿದರು.

ಇದನ್ನೂ ಓದಿ:  ಬಡ ವಾಹನ ಸವಾರರಿಂದ ಹಣ ವಸೂಲಿ ಮಾಡೋದನ್ನೇ ಪೊಲೀಸರು ಕಾಯಕ ಮಾಡಿಕೊಂಡಿದ್ದಾರೆ: ವಿನಯ್ ಕುಲಕರ್ಣಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ