ಬಾಡೇ ನಮ್ಮ ಮನೆ ಗಾಡು: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು

|

Updated on: Dec 22, 2024 | 5:29 PM

ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊನೆ ಹಂತಕ್ಕೆ ಬಂದಿದೆ. ಇಂದು (ಡಿಸೆಂಬರ್ 22) ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯುತ್ತಿದ್ದು, ಅತ ಪ್ರಗತಿಪರರ ತಮ್ಮ ಹಠ ಸಾಧಿಸಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡುಟ ಹಂಚಿ ಸಂಭ್ರಮಿಸಿದ್ದಾರೆ. ಆದ್ರೆ, ಇದಕ್ಕೆ ಪೊಲೀಸರು ಮಧ್ಯ ಪ್ರವೇಸಿದ್ದು, ಈ ವೇಳೆ ಬಾಡೂಟ ಮಾಡಿಸುವಂತೆ ಜಟಾಪಟಿ ಜೋರಾಗಿದೆ.

ಮಂಡ್ಯ, (ಡಿಸೆಂಬರ್ 22): ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಮಾಡಿಸುವಂತೆ ಆರಂಭದಿಂದಲೂ ಕೂಗು ಕೇಳಿಬಂದಿತ್ತು. ಈ ಸಂಬಂಧ ಪರ-ವಿರೋಧ ಚರ್ಚೆಗಳು ನಡೆದಿದ್ದವು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗಿತ್ತು. ಆದರೂ ಯಾವುದೇ ಬಾಡೂಟ ವ್ಯವಸ್ಥೆ ಮಾಡಲಿಲ್ಲ. ಬದಲಿಗೆ ಸಸ್ಯಹಾರ ಊಟವೇ ಬಡಸಲಾಗಿದೆ. ಇದರಿಂದ ಆಕ್ರೋಶಗೊಂಡ ಪ್ರಗತಿಪರರು ಇಂದು (ಡಿಸೆಂಬರ್ 22) ಸಮ್ಮೇಳನದ ಕೊನೆ ದಿನ ತಾವೇ ಭರ್ಜಿ ಬಾಡೂಟ ಹಂಚಿದರು. ಬಾಡೇ ನಮ್ಮ ಮನೆ ಗಾಡು ಎಂದು ಭಾನುವಾರದ ಬಾಡೂಟ ಉಣಬಡಿಸಿದರು. ಮೊಟ್ಟೆ, ಕಬಾಬ್, ಚಿಕನ್ ಸಾಂಬರ್ ಊಟಕ್ಕೆ ಜನರು ಸಹ ಮುಗಿಬಿದ್ದಿದ್ದರು.