ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು; ವಿಡಿಯೋ ಮಿಸ್ ಮಾಡಬೇಡಿ
ಛತ್ತೀಸ್‌ಗಢದ ರಾಯಗಢದಲ್ಲಿ ಟ್ರಾಫಿಕ್ನಿಂದ ತುಂಬಿದ್ದ ರಸ್ತೆಯಲ್ಲಿ ಕರುವೊಂದು ಬಿದ್ದಿತ್ತು. ಆ ಕರುವಿನ ಮೇಲೆ ಕಾರು ಹರಿದು ಹೋಯಿತು. ಆ ಕರುವನ್ನು ಕಾಪಾಡಲು ಬಂದ ಹಸುಗಳು ಕಾರನ್ನು ಅಡ್ಡ ಹಾಕಿವೆ. ಬಳಿಕ ಅಕ್ಕಪಕ್ಕದಲ್ಲಿ ಸೇರಿದ ಜನರು ಕಾರಿನಡಿ ಸಿಲುಕಿದ್ದ ಕರುವನ್ನು ಹೊರಗೆ ಎಳೆದು, ಅದನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ದೃಶ್ಯ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಾಯಗಢ: ಪುಟ್ಟ ಕರುವನ್ನು 200 ಮೀಟರ್‌ಗಳಷ್ಟು ಎಳೆದಿರುವ ವಿಡಿಯೋವನ್ನು ಹಲವಾರು ಇಂಟರ್ನೆಟ್ ಬಳಕೆದಾರರು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಛತ್ತೀಸ್‌ಗಢದ ರಾಯಗಢದ ರಸ್ತೆಯೊಂದರಲ್ಲಿ ಕರು ಕಾರಿನ ಕೆಳಗೆ ಸಿಲುಕಿರುವುದನ್ನು ನೋಡಬಹುದು. ಆ ವೇಳೆ ಕೆಲವು ಹಸುಗಳು ಕಾರನ್ನು ಅಡ್ಡಹಾಕಿ, ಕರುವನ್ನು ರಕ್ಷಿಸಲು ಬಂದಿವೆ. ಆಗ ಕಾರು ಚಾಲಕ ಕಾರನ್ನು ನಿಲ್ಲಿಸಿದ್ದಾನೆ. ಬಳಿಕ ಅಲ್ಲಿ ಸೇರಿದ ಜನರು ಆ ಕರುವನ್ನು ರಕ್ಷಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos