ಮಹಾಕುಂಭಕ್ಕೆ ಹೋಗಲಾಗದ್ದಕ್ಕೆ ಈಜುಕೊಳದಲ್ಲಿ ಗಂಗಾ ನೀರು ಸುರಿದು ಮುಳುಗೆದ್ದ ಮಹಿಳೆಯರು!
2025ರ ಮಹಾ ಕುಂಭಕ್ಕೆ ಭೇಟಿ ನೀಡಲು ಸಾಧ್ಯವಾಗದ ನೊಯ್ಡಾ ಸೊಸೈಟಿ ಸದಸ್ಯರು ತ್ರಿವೇಣಿ ಸಂಗಮದಿಂದ ಪವಿತ್ರ ನೀರನ್ನು ಈಜುಕೊಳಕ್ಕೆ ಸುರಿದು, ಸ್ನಾನ ಮಾಡಿದ್ದಾರೆ. ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಅಪಾರ್ಟ್ ಮೆಂಟಿನ ಮಹಿಳೆಯರು ಮಹಾ ಕುಂಭಕ್ಕೆ ಬರಲು ಸಾಧ್ಯವಾಗದ ಕಾರಣದಿಂದಾಗಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ತ್ರಿವೇಣಿ ಸಂಗಮದಿಂದ ಪವಿತ್ರ ನೀರನ್ನು ತಂದು ಈಜುಕೊಳಕ್ಕೆ ಸುರಿದಿದ್ದಾರೆ.
ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಒಂದು ಅಪಾರ್ಟ್ ಮೆಂಟ್ ನಿವಾಸಿಗಳಾದ ಮಹಿಳೆಯರು ಮಹಾ ಕುಂಭಕ್ಕೆ ಬರಲು ಸಾಧ್ಯವಾಗದ ಕಾರಣದಿಂದ ಬೇರೆಯವರಿಂದ ಗಂಗಾ ನದಿಯ ನೀರನ್ನು ಪಡೆದು ತಂದು, ಅದನ್ನು ಈಜುಕೊಳಕ್ಕೆ ಹಾಕಿ ಈಜು ಕೊಳದಲ್ಲೇ ಮುಳುಗೆದ್ದಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ತ್ರಿವೇಣಿ ಸಂಗಮದಿಂದ ಪವಿತ್ರ ನೀರನ್ನು ಪಡೆದು ಈಜುಕೊಳಕ್ಕೆ ಸುರಿದು ಅದರಲ್ಲೇ ಎಲ್ಲರೂ ಪವಿತ್ರ ಸ್ನಾನ ಮಾಡಿದ್ದಾರೆ.ಈ ಘಟನೆ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರು ‘ಹರ್ ಹರ್ ಗಂಗೆ’ ಎಂಬ ಘೋಷಣೆಗಳನ್ನು ಸಹ ಕೂಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos