Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ರಿವೇಣಿ ಸಂಗಮದ ಮೇಲೆ ಪ್ರತಿ 20 ನಿಮಿಷಕ್ಕೊಮ್ಮೆ ಹೆಲಿಕಾಪ್ಟರ್ ಯಾಕೆ ಹಾರಾಡುತ್ತದೆ ಗೊತ್ತಾ? ವಿಡಿಯೋ ನೋಡಿ

ತ್ರಿವೇಣಿ ಸಂಗಮದ ಮೇಲೆ ಪ್ರತಿ 20 ನಿಮಿಷಕ್ಕೊಮ್ಮೆ ಹೆಲಿಕಾಪ್ಟರ್ ಯಾಕೆ ಹಾರಾಡುತ್ತದೆ ಗೊತ್ತಾ? ವಿಡಿಯೋ ನೋಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 26, 2025 | 9:20 PM

ಟಿವಿ9 ಪ್ರತಿನಿಧಿ ಸಾಗುತ್ತಿರುವ ದೋಣಿಯಲ್ಲಿ ಬೇರೆ ಭಕ್ತರೂ ಇದ್ದಾರೆ. ಯಾರೋ ಒಬ್ಬರು ಹಿಂದಿಯಲ್ಲಿ; ಅನತಿ ದೂರದಲ್ಲಿ ಕಾಣುವ ಅರೇಲ್ ಘಾಟ್ ಬಗ್ಗೆ ಹೇಳುತ್ತಾರೆ. ಅದೇ ಭಾಗದಲ್ಲಿ ರಾಷ್ಟ್ರಪತಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ವಿಶ್ವದ ಪ್ರಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಮತ್ತು ಇನ್ನೂ ಹಲವಾರು ಗಣ್ಯರು ಪವಿತ್ರ ಸ್ನಾನ ಮಾಡಿದರಂತೆ. ನಮ್ಮ ಪ್ರತಿನಿಧಿ ಅದನ್ನು ಕನ್ನಡದಲ್ಲಿ ವಿವರಿಸುತ್ತಾರೆ.

ಪ್ರಯಾಗ್​ರಾಜ್ (ಉತ್ತರ ಪ್ರದೇಶ), ಫೆ. 26: ಮಹಾಶಿವರಾತ್ರಿಯಾಗಿರುವ ಇಂದು ಮಹಾಕುಂಭಮೇಳ ಕೊನೆಗೊಳ್ಳಲಿದೆ. ಟಿವಿ9 ಕನ್ನಡ ವಾಹಿನಿಯ ತಂಡಗಳು ಕೊನೆಯ ದಿನದ ವಿದ್ಯಮಾನಗಳನ್ನು ಕನ್ನಡಿಗರಿಗೆ ನೀಡುತ್ತಿದ್ದಾರೆ. ನಮ್ಮ ಪ್ರತಿನಿಧಿಯೊಬ್ಬರು ದೋಣಿಯಲ್ಲಿ ತ್ರಿವೇಣಿ ಸಂಗಮಕ್ಕೆ (Triveni Sangam) ತೆರಳುವಾಗ ಮೇಲೆ ಹಾರಾಡುತ್ತಿರುವ ಹೆಲಿಕಾಪ್ಟರ್ ಬಗ್ಗೆ ವಿವರಣೆ ನೀಡಿದ್ದಾರೆ. ಈ ಚಾಪರ್ 20 ನಿಮಿಷಗಳಿಗೊಮ್ಮೆ ತ್ರಿವೇಣಿ ಸಂಗಮದ ಮೇಲೆ ಹಾರಾಡುತ್ತಾ ಅಮೃತ ಸ್ನಾನಕ್ಕಾಗಿ ಬಂದಿರುವ ಭಕ್ತಾದಿಗಳ ಮೇಲೆ ಪುಷ್ಟವೃಷ್ಟಿ ಮಾಡುತ್ತಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಯಾಗ್​ರಾಜ್​ನಲ್ಲಿ ತ್ರಿವೇಣಿ ಸಂಗಮಕ್ಕೆ ಅಭಿಮುಖವಾಗಿ ನಿಂತು ಭಿನ್ನವಾಗಿ ಶಿವ ನಮಸ್ಕಾರ ಮಾಡಿದ ಶಿವಭಕ್ತ!

Published on: Feb 26, 2025 07:27 PM