ಮಂಗಳೂರಿನ ಮಳಲಿ ದರ್ಗಾನಲ್ಲಿ ಹಿಂದೂ ದೇವರ ಸಾನಿಧ್ಯವಿತ್ತು ಎಂದು ತಾಂಬೂಲ ಪ್ರಶ್ನೆ ನಡೆಸಿದ ಕೇರಳದ ಜ್ಯೋತಿಷಿ ಹೇಳಿದರು

ಮಂಗಳೂರಿನ ಮಳಲಿ ದರ್ಗಾನಲ್ಲಿ ಹಿಂದೂ ದೇವರ ಸಾನಿಧ್ಯವಿತ್ತು ಎಂದು ತಾಂಬೂಲ ಪ್ರಶ್ನೆ ನಡೆಸಿದ ಕೇರಳದ ಜ್ಯೋತಿಷಿ ಹೇಳಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 25, 2022 | 6:12 PM

ಅಷ್ಟಮಂಗಲ ಪ್ರಶ್ನೆ ಬದಲು ತಾಂಬೂಲ ಪ್ರಶ್ನೆ ನಡೆಸುವಾಗ ಸ್ಥಿರರಾಶಿ ಬಂದಕಾರಣ ಮಳಲಿ ಮಸೀದಿಯಲ್ಲಿ ದೇವರ ಸಾನಿಧ್ಯವಿತ್ತು ಅನ್ನೋದು ಗೊತ್ತಾಗುತ್ತದೆ ಎಂದು ಗೋಪಾಲಕೃಷ್ಣ ಪಣಿಕ್ಕರ್ ಅವರು ಹೇಳುತ್ತಾರೆ. ಹಾಗೇಯೇ ಗುರುಮಠದಲ್ಲಿ ಒಂದು ಪ್ರಾರ್ಥನೆ ನಡೆಸಬೇಕೆಂದು ಅವರು ಭಕ್ತಾದಿಗಳಿಗೆ ಹೇಳುತ್ತಾರೆ.

Mangaluru: ಕರಾವಳಿ ನಗರ ಮಂಗಳೂರಲ್ಲಿ (Mangaluru) ಅಹಿತಕರ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ ಗುರುವಾರದವರೆಗೆ ಬೆಳಗಿನ ಸಮಯದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಮಾರಾಯ್ರೇ. ನಗರದ ಹೊರವಲಯದಲ್ಲಿರುವ ಮಳಲಿ ಮಸೀದಿಯ (Malali Mosque) ನವೀಕರಣ ನಡೆಸುವಾಗ ಅಲ್ಲಿ ಮೊದಲು ಹಿಂದೂ ದೇವಸ್ಥಾನವಿತ್ತೆನ್ನುವ ಕುರುಹು ಲಭ್ಯವಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಕೇರಳದ ಖ್ಯಾತ ಜ್ಯೋತಿಷಿ ಜಿಪಿ ಗೋಪಾಲಕೃಷ್ಣ ಪಣಿಕ್ಕರ್ (GP Gopalakrishna Phanikker) ಅವರನ್ನು ದೇವಸ್ಥಾನದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಸಲು ಆಮಂತ್ರಿಸಲಾಗಿದೆ. ಮಸೀದಿಗೆ ಹತ್ತಿರವಿರುವ ಭಜನಾ ದೇವಸ್ಥಾನದಲ್ಲಿ ಅವರು ತಾಂಬೂಲ ಪ್ರಶ್ನೆ ನಡೆಸುವ ಮೊದಲೇ ಮಸೀದಿ ಸ್ಥಳದಲ್ಲಿ ಮಂದಿರವಿತ್ತಾ ಅಂತ ಮಾಧ್ಯಮದವರು ಕೇಳಿದಾಗ ಈಗಲೇ ನಾನೇನೂ ಹೇಳಲಾಗಲ್ಲ ಎನ್ನುತ್ತಾರೆ.

ತಾಂಬೂಲ ಪ್ರಶ್ನೆ ಸಮಯದಲ್ಲಿ ಗದ್ದಲದ ವಾತಾವರಣಗೊಳ್ಳದಂತಿರಲಿ ಜಿಲ್ಲಾಡಳಿತ ಮಸೀದಿಯ ಸುತ್ತ ಪ್ರತಿಬಂಧಕಾಜ್ಞೆ ವಿಧಿಸಿದೆ. ಕೆಎಸ್ಆರ್ ಪಿಯ ತುಕಡಿಯೊಂದನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಆದರೆ ಅಷ್ಟಮಂಗಲ ಪ್ರಶ್ನೆ ಬದಲು ತಾಂಬೂಲ ಪ್ರಶ್ನೆ ನಡೆಸುವಾಗ ಸ್ಥಿರರಾಶಿ ಬಂದಕಾರಣ ಮಳಲಿ ಮಸೀದಿಯಲ್ಲಿ ದೇವರ ಸಾನಿಧ್ಯವಿತ್ತು ಅನ್ನೋದು ಗೊತ್ತಾಗುತ್ತದೆ ಎಂದು ಗೋಪಾಲಕೃಷ್ಣ ಪಣಿಕ್ಕರ್ ಅವರು ಹೇಳುತ್ತಾರೆ. ಹಾಗೇಯೇ ಗುರುಮಠದಲ್ಲಿ ಒಂದು ಪ್ರಾರ್ಥನೆ ನಡೆಸಬೇಕೆಂದು ಅವರು ಭಕ್ತಾದಿಗಳಿಗೆ ಹೇಳುತ್ತಾರೆ.

ಮಳಲಿಯ ಅಸಯ್ಯದ್ ಅಬ್ದುಲ್ಲಾಹಿಲ್ ಮದನಿ ದರ್ಗಾನಲ್ಲಿ ಮೊದಲು ಹಿಂದೂ ದೇವಸ್ಥಾನವೊಂದು ಇತ್ತೆಂದು ಕರಾವಳಿ ಪ್ರದೇಶದಲ್ಲಿ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ದರ್ಗಾದ ನವೀಕರಣಕ್ಕಾಗಿ ಅದರ ಒಂದು ಭಾಗವನ್ನು ಬೀಳಿಸಿದಾಗ ಸಾಮಾನ್ಯವಾಗಿ ಹಿಂದೂ ದೇವಸ್ಥಾನಗಳಲ್ಲಿ ಕಂಡುಬರುವ ಸ್ತಂಭ ಮತ್ತು ಬಾಗಿಲುಗಳ ಕುರುಹು ಪತ್ತೆಯಾಗಿದ್ದವು ಅಂತ ಹೇಳಲಾಗುತ್ತಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.