ಅಣ್ಣ-ತಮ್ಮ ಇಬ್ಬರನ್ನೂ ಕಳೆದುಕೊಂಡಿದ್ದು ಹೇಗೆ?; ಎಲ್ಲವನ್ನೂ ವಿವರಿಸಿದ ನಟಿ ಅಂಜಲಿ

ಸಹೋದರರು ಮೃತಪಟ್ಟಿದ್ದು ಹೇಗೆ ಎನ್ನುವ ಬಗ್ಗೆ ವಿವರ ನೀಡಿದ್ದಾರೆ ಅಂಜಲಿ. ಬೇಸರದ ಸಂಗತಿ ಎಂದರ ಈ ಘಟನೆ ನಡೆದು 10 ವರ್ಷ ಕಳೆದಿದ್ದರೂ ಅವರಿಗೆ ಸುಧಾರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

TV9kannada Web Team

| Edited By: Rajesh Duggumane

May 25, 2022 | 3:49 PM

‘ತರ್ಲೆ ನನ್ ಮಗ’ (Tharle Nan Maga Movie) ಸೇರಿ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದವರು ಅಂಜಲಿ ಸುಧಾಕರ್ (Anjali Sudhakar). ಅವರು ಎರಡು ದಶಕಗಳ ಹಿಂದೆ ಚಿತ್ರರಂಗ ತೊರೆದು ದುಬೈಗೆ ಹೋದರು. ಅವರಿಗೆ ಇಬ್ಬರು ಸಹೋದರರಿದ್ದರು. ಅವರನ್ನು ಕಂಡರೆ ಅಂಜಲಿಗೆ ಎಲ್ಲಿಲ್ಲದ ಪ್ರೀತಿ. ಅಣ್ಣನ ವಯಸ್ಸು 52 ವರ್ಷ ಆಗಿತ್ತು, ತಮ್ಮನಿಗೆ 34 ವರ್ಷ. ಆದರೆ, ಇಬ್ಬರೂ ಮೃತಪಟ್ಟರು. ಈ ಬಗ್ಗೆ ಅವರಿಗೆ ತುಂಬಾನೇ ದುಃಖವಿದೆ. ಸಹೋದರರು ಮೃತಪಟ್ಟಿದ್ದು ಹೇಗೆ ಎನ್ನುವ ಬಗ್ಗೆ ವಿವರ ನೀಡಿದ್ದಾರೆ ಅಂಜಲಿ. ಬೇಸರದ ಸಂಗತಿ ಎಂದರೆ ಈ ಘಟನೆ ನಡೆದು 10 ವರ್ಷ ಕಳೆದಿದ್ದರೂ ಅವರಿಗೆ ಸುಧಾರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅವರು 10 ವರ್ಷ ಮನೆಯಿಂದ ಹೊರಗೇ ಬಂದಿರಲಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ ಅಂಜಲಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada