ನೇಗಿಲು ಹಿಡಿದು ಹೊಲದಲ್ಲಿ ಉಳುಮೆ ಮಾಡಿದರು ಚಿತ್ರ ನಟಿ ಶೃತಿ, ಅಮ್ಮನ ಶ್ರಮವನ್ನು ಮಗಳು ಕೆಮೆರಾನಲ್ಲಿ ಸೆರೆ ಹಿಡಿದರು!
ಹೊಲದಲ್ಲಿ ದುಡಿಮೆ ಮಾಡೋದು ಉತ್ತಿ ಬಿತ್ತಿ ಬೆಳೆಯೋದು ತಮ್ಮ ಬಹುದಿನದ ಆಸೆ ಎಂದು ಹೇಳಿಕೊಂಡಿದ್ದ ಅವರು ತಮ್ಮಾಸೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಹೊಲದಲ್ಲಿ ಉಳುಮೆ ಮಾಡುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಸ್ಯಾಂಡಲ್ ವುಡ್ ಖ್ಯಾತ ನಟಿ ಶೃತಿ (Shruthi) ಬಹುಮುಖ ಪ್ರತಿಭೆಯ ಕಲಾವಿದೆ. ಕನ್ನಡ ಅಲ್ಲದೆ ದಕ್ಷಿಣ ಭಾರತದ ಬೇರೆ ಭಾಷೆಯ, ಚಿತ್ರಗಳಲ್ಲಿ ಅವರು ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸಿದ್ದಾರೆ. ನಟಿ ಶೃತಿ ಬಿಜೆಪಿ ಪಕ್ಷದ ಜೊತೆಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ಬಿಗ್ ಬಾಸ್ (Big Boss Kannada) ಕಾರ್ಯಾಕ್ರಮದಲ್ಲಿ ಅವರು ಸ್ಫರ್ಧಿಯಾಗಿ ಭಾಗವಹಿಸಿದ್ದರು. ಈಗ ಅವರು ಸೃಜನ್ ಲೋಕೇಶ್ (Srijan Lokesh) ಜೊತೆ ಒಂದು ರಿಯಾಲಿಟಿ ಶೋ ಜಜ್ ಮಾಡುತ್ತಿದ್ದಾರೆ. ಏತನ್ಮಧ್ಯೆ, ಅವರ ಹೊಸ ಚಿತ್ರವೊಂದರ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದನ್ನೆಲ್ಲ ಯಾಕೆ ಹೇಳುತ್ತಿದ್ದೇವೆ ಅಂದರೆ, ಅವರ ಇನ್ನೊಂದು ಮುಖ ನಮಗೆ ಈ ವಿಡಿಯೋನಲ್ಲಿ ಪರಿಚಯವಾಗುತ್ತಿದೆ. ತಮ್ಮ ಹೊಲದಲ್ಲಿ ನೇಗಿಲು ಹಿಡಿದು ಉಳುಮೆ ಮಾಡುತ್ತಿರುವ ಈ ಮಹಿಳೆ ಬೇರೆ ಯಾರೂ ಅಲ್ಲ, ಅದು ಶೃತಿ.
ಹೊಲದಲ್ಲಿ ದುಡಿಮೆ ಮಾಡೋದು ಉತ್ತಿ ಬಿತ್ತಿ ಬೆಳೆಯೋದು ತಮ್ಮ ಬಹುದಿನದ ಆಸೆ ಎಂದು ಹೇಳಿಕೊಂಡಿದ್ದ ಅವರು ತಮ್ಮಾಸೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಹೊಲದಲ್ಲಿ ಉಳುಮೆ ಮಾಡುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ತಮ್ಮಾಸೆ ಈಡೇರಲು ನೆರವಾದ ಭಗವಂತನಿಗೆ ಕೋಟಿ ನಮನಗಳು ಎಂದು ಅವರು ಶಿರ್ಷಿಕೆ ಬರೆದುಕೊಂಡಿದ್ದಾರೆ.
ಈ ವಿಡಿಯೋದ ಕೊನೆಯಲ್ಲಿ ಒಬ್ಬ ಯುವತಿ ಕಾಣಿಸುತ್ತಾರೆ. ಅದು ಮಹೆಂದರ್ ಗೌರಿ, ಶೃತಿ ಅವರ 20-ವರ್ಷ ವಯಸ್ಸಿನ ಮಗಳು. ಉತ್ತಮ ಗಾಯಕಿಯಾಗಿರುವ ಗೌರಿ ಅಮ್ಮನ ನೆರಳಿನಂತಿರುತ್ತಾರೆ. ಶೃತಿಗೆ ಅಷ್ಟು ದೊಡ್ಡ ಮಗಳಿರುವುದು ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು. ಆದರೆ, ನಿಮಗೆ ಗೊತ್ತಿರಲಿ, ಅವರು ಸಿನಿಮಾ ರಂಗಕ್ಕೆ ಬಂದೇ 32 ವರ್ಷಗಳಾಯಿತು! ಅಂದಹಾಗೆ ಅವರಿಗೆ ಈಗ 46ರ ಪ್ರಾಯ.
ಅಮ್ಮ ಉಳುಮೆ ಮಾಡುತ್ತಿರುವುದನ್ನು ಮಗಳು ಶೂಟ್ ಮಾಡಿದರೆ, ಮಗಳು ಹೊಲದಲ್ಲಿ ಓಡಾಡುವುದನ್ನು ತಾಯಿ ಚಿತ್ರೀಕರಿಸಿರುವಂತಿದೆ. ಗೌರಿಯ ನಡಿಗೆಯನ್ನು ಸ್ಲೋ ಮೋಷನಲ್ಲೂ ತೋರಿಸಲಾಗಿದೆ. ಶೃತಿ ಹಾಸನದವರಾದರೂ ಕನ್ನಡಿಗರಿಗೆ ಪರಿಚಯವಾಗಿದ್ದು ಬೆಂಗಳೂರಿಗೆ ಬಂದ ನಂತರ. ಅವರ ಸೋದರ ಶರಣ್ ಕೂಡ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟನಾಗಿದ್ದಾರೆ.
ಶೃತಿ ಹೊಸ ಚಿತ್ರ ‘13’ ರಲ್ಲಿ ಅವರು ಒಬ್ಬ ಮುಸ್ಲಿಂ ಮಹಿಳೆಯ ಪಾತ್ರವನ್ನು ಮಾಡುತ್ತಿದ್ದಾರೆ. ಅವರ ಜೊತೆ ಬಹಳ ವರ್ಷಗಳ ನಂತರ ರಾಘವೇಂದ್ರ ರಾಜಕುಮಾರ ನಟಿಸುತ್ತಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.