ಬಳ್ಳಾರಿಯಲ್ಲಿ ಬಾಣಂತಿಯರು ಸಾಯುತ್ತಿದ್ದರೆ ಸಿದ್ದರಾಮಯ್ಯ ಸರ್ಕಾರ ಸಮಾವೇಶ ಮಾಡುತ್ತಿದೆ: ಬಿ ಶ್ರೀರಾಮುಲು
ಬಿಜೆಪಿಯಲ್ಲಿನ ಒಳಜಗಳದ ಬಗ್ಗೆ ಮಾತಾಡಿದ ಶ್ರೀರಾಮುಲು, ರಾಜ್ಯ ಬಿಜೆಪಿಗೆ ವಿಜಯೇಂದ್ರ ರಾಜಾಧ್ಯಕ್ಷನ ಸ್ಥಾನದಿಂದ ಕೆಳಗಿಳಿಯುವುದು ಬೇಕಿಲ್ಲ ಮತ್ತು ಬಸನಗೌಡ ಯತ್ನಾಳ್ ಅವರ ಉಚ್ಛಾಟನೆಯೂ ಬೇಕಿಲ್ಲ, ಎಲ್ಲರೂ ಒಗ್ಗಟ್ಟಿನಿಂದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡುತ್ತೇವೆ ಎಂದರು.
ಬಳ್ಳಾರಿ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಯಾವ ಪುರಷಾರ್ಥಕ್ಕಾಗಿ ಜನಕಲ್ಯಾಣ ಸಮಾವೇಶ ನಡೆಸಿದೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಪ್ರಶ್ನಿಸಿದರು. ಬಳ್ಳಾರಿಯ ಬಿಮ್ಸ್ನಲ್ಲಿ ಬಾಣಂತಿಯರು ಸಾಯುತ್ತಿದ್ದಾರೆ, ಅವರ ಗೋಳು ಕೇಳಲು ಸರ್ಕಾರದ ಮಂತ್ರಿಗಳ್ಯಾರೂ ಬರಲ್ಲ, ಅವರಿಗೆ ಪರಿಹಾರ ನೀಡಲ್ಲ, ಅದರೆ ಸಮಾವೇಶವನ್ನು ಅದ್ದೂರಿಯಾಗಿ ಮಾಡುತ್ತಾರೆ, ತನಗೆ ಎಷ್ಟೆಲ್ಲ ಜನ ಬೆಂಬಲವಿದೆ ಅಂತ ಈಡಿ ಮತ್ತು ಸಿಬಿಐಗೆ ತೋರಿಸಿ ಹೆದರಿಸಲು ಸಿದ್ದರಾಮಯ್ಯ ಸಮಾವೇಶ ಮಾಡಿರುವಂತಿದೆ ಎಂದು ಶ್ರೀರಾಮುಲು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಮ್ಸ್ನಲ್ಲಿ ಬಾಣಂತಿಯರ ಸಾವು; ಸರ್ಕಾರದ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ಅಕ್ಷಮ್ಯ: ಬಿವೈ ವಿಜಯೇಂದ್ರ
Latest Videos