ಅಧಿಕಾರ ಹಂಚಿಕೆ ವಿಷಯ ನನಗಿಂತ ಜಾಸ್ತಿ ಮುನಿಯಪ್ಪನವರಿಗೆ ಗೊತ್ತಿರಬಹುದು: ಜಿ ಪರಮೇಶ್ವರ್

ಅಧಿಕಾರ ಹಂಚಿಕೆ ವಿಷಯ ನನಗಿಂತ ಜಾಸ್ತಿ ಮುನಿಯಪ್ಪನವರಿಗೆ ಗೊತ್ತಿರಬಹುದು: ಜಿ ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 07, 2024 | 11:53 AM

ಸಚಿವ ಮುನಿಯಪ್ಪ ಮಾತಾಡಿದ್ದು ಸರಿಯೋ ತಪ್ಪೋ ಅನ್ನೋದು ಹೈಕಮಾಂಡ್ ವಿವೇಚನೆಗೆ ಬಿಟ್ಟಿರುವ ವಿಚಾರ ಅಥವಾ ಕೆಪಿಸಿಸಿ ಅಧ್ಯಕ್ಷರು ಇಲ್ಲವೇ ಮುಖ್ಯಮಂತ್ರಿಯವರು ಅದರ ಕಡೆ ಗಮನ ಹರಿಸಬೇಕು, ತಮ್ಮ ಪಕ್ಷದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯವೇ ಅಂತಿಮ ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಹೆಚ್ ಮುನಿಯಪ್ಪ ಕೋಲಾರದಲ್ಲಿ ಮಾತಾಡುವಾಗ, ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಮತ್ತು ಹೈಕಮಾಂಡ್ ನಡುವೆ ಅಧಿಕಾರ ಹಸ್ತಾಂತರದ ಬಗ್ಗೆ ಮಾತುಕತೆ ನಡೆದಿರೋದು ಸತ್ಯ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ ಪರಮೇಶ್ವರ್, ತನಗೆ ಅದರ ಬಗ್ಗೆ ಗೊತ್ತಿಲ್ಲ, ಈ ವಿಷಯದಲ್ಲಿ ಮುನಿಯಪ್ಪನವರಿಗೆ ತನಗಿಂತ ಜಾಸ್ತಿ ಮಾಹಿತಿ ಇರಬಹುದು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅವರಿಬ್ಬರೇ ರಾಜಕಾರಣ ಮಾಡಿ, ಅವರಿಬ್ಬರೇ ನಡೆಸಲಿ: ಡಿಕೆ ಒಪ್ಪಂದ ಹೇಳಿಕೆಗೆ ಪರಮೇಶ್ವರ್ ತೀವ್ರ ಅಸಮಾಧಾನ