ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಎಣ್ಣೆ ಪಾರ್ಟಿ: ವಿಡಿಯೋ ವೈರಲ್

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಎಣ್ಣೆ ಪಾರ್ಟಿ: ವಿಡಿಯೋ ವೈರಲ್

ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ವಿವೇಕ ಬಿರಾದಾರ

Updated on: Dec 07, 2024 | 1:05 PM

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮದ್ಯ ಸೇವಿಸುವುದು ಮತ್ತು ಅಕ್ರಮವಾಗಿ ಮೊಬೈಲ್ ಫೋನ್‌ಗಳು, ಬೀಡಿ, ಸಿಗರೇಟ್‌ಗಳನ್ನು ಹೊಂದಿರುವುದನ್ನು ತೋರಿಸುವ ಎರಡು ತಿಂಗಳ ಹಿಂದಿನ ವಿಡಿಯೋ ವೈರಲ್ ಆಗಿದೆ.ಇದು ಈ ಹಿಂದೆ ಬಹಿರಂಗಗೊಂಡ ಐಷಾರಾಮಿ ಜೀವನದ ವಿಡಿಯೋ ನಂತರ ಮತ್ತೊಂದು ಆಘಾತಕಾರಿ ಸುದ್ದಿಯಾಗಿದೆ.

ಕಲಬುರಗಿ, ಡಿಸೆಂಬರ್​ 07: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿನ ಕರ್ಮಕಾಂಡವನ್ನು ‘ಟಿವಿ9’ ಬಟಾಬಯಲು ಮಾಡಿತ್ತು. ಜೈಲೊಳಗಡೆ ಐಷಾರಾಮಿ ಜೀವನ ನಡೆಸುತ್ತಿರುವುದನ್ನು ಸಾಕ್ಷಿ ಸಮೇತ ಬಿಚ್ಚಿಟ್ಟಿತ್ತು. ಆ ಘಟನೆಯ ನೆನಪು ಮಾಸುವ ಮುನ್ನವೇ ಅದೇ ಜೈಲಿನ ಮತ್ತೊಂದು ಕರ್ಮಕಾಂಡದ ವಿಡಿಯೋ ಬಹಿರಂಗಗೊಂಡಿದೆ. ಜೈಲಿನಲ್ಲಿ ಕೈದಿಗಳು ಮದ್ಯ ಸೇವಿಸುತ್ತಿರುವ ಎರಡು ತಿಂಗಳ ಹಿಂದಿನ ವಿಡಿಯೋ ಹೊರಬಂದಿದೆ. ಹಾಗೇ ಸ್ಮಾರ್ಟ್​ ಫೋನ್​ಗಳು, ಬೀಡಿ, ಸಿಗರೇಟ್​​ ರಾಶಿ ಇರುವ ವಿಡಿಯೋ ವೈರಲ್​ ಆಗಿದೆ.