ಅಧಿಕಾರಿಗಳು ಶಿಷ್ಟಾಚಾರವನ್ನಷ್ಟೇ ಪಾಲಿಸುತ್ತಾರೆ, ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅವರೊಂದಿಗೆ ಹೋಗುತ್ತಾರೆ: ಶಿವಕುಮಾರ್

|

Updated on: Jul 05, 2024 | 5:16 PM

ಕುಮಾರಸ್ವಾಮಿ ಮಾಡುವ ಟೀಕೆಗಳಿಗೆ ಶಿವಕುಮಾರ್ ಮೊದಲಿನ ಹಾಗೆ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿಲ್ಲ, ಬಹಳ ಸೌಮ್ಯವಾಗಿ ಹೆದರಿಕೊಂಡವರ ಹಾಗೆ ತಮ್ಮ ಉತ್ತರ ಹೇಳುತ್ತಾರೆ. ಶಿವಕುಮಾರ್​​ರನ್ನು ಈಗ ಕುಮಾರಸ್ವಾಮಿ ಛೇಡಿಸುತ್ತಿದ್ದಾರೆಯೇ ಹೊರತು, ಶಿವಕುಮಾರ್ ಅದನ್ನು ಮಾಡುತ್ತಿಲ್ಲ. ಕುಮಾರಸ್ವಾಮಿ ಹೇಳಿದ್ದಕ್ಕೆ ಪ್ರತಿಕ್ರಿಯಿಸುವುದನ್ನಷ್ಟೇ ಡಿಸಿಎಂ ಮಾಡುತ್ತಿದ್ದಾರೆ!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರ ನಂತರ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೂ ಮುಖ್ಯಮಂತ್ರಿಗೆ ಕೇಳಿದ ಪ್ರಶ್ನೆಯನ್ನೇ ಪತ್ರಕರ್ತರು ಕೇಳಿದರು. ಮಂಡ್ಯದಲ್ಲಿ ಇಂದು ಕೇಂದ್ರ ಸಚಿವ ಹೆಚ್ ಡಿ ಕುಮರಸ್ವಾಮಿವರು ನಡೆಸಿದ ಜನತಾ ದರ್ಶನದಲ್ಲಿ ಭಾಗಿಯಾಗುವ ಅವಶ್ಯಕತೆ ಇಲ್ಲವೆಂದು ಅಧಿಕಾರಿಗಳಿಗೆ ಸುತ್ತೋಲೆ ಕಳಿಸಿದ್ದ್ದರ ಬಗ್ಗೆ. ಅವರಿಗೆ ಜನತಾ ದರ್ಶನ ಮಾಡಲು ಯಾರೂ ಅಡ್ಡಿಪಡಿಸಿಲ್ಲ, ಜನರೊಂದಿಗೆ ಅವರು ಕಾರ್ಯಕ್ರಮ ಮಾಡಲಿ, ಸರ್ಕಾರ ಅವರನ್ನು ತಡೆದಿಲ್ಲ ಸರ್ಕಾರ ಎಂದು ಶಿವಕುಮಾರ್ ಹೇಳಿದರು. ಅಲ್ಲ ಸರ್ ಅಧಿಕಾರಿಗಳನ್ನು ಹೋಗದಂತೆ ತಡೆದಿರುವಿರಂತಲ್ಲ ಅಂತ ಕೇಳಿದಾಗ, ಯಾವ ಅಧಿಕಾರಿಯನ್ನೂ ನಾವು ತಡೆದಿಲ್ಲ, ಅದರೆ ಅಧಿಕಾರಿಗಳು ಶಿಷ್ಟಾಚಾರವನ್ನು ಪಾಲಿಸುತ್ತಾರೆ, ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅವರ ಜೊತೆ ಹೋಗುತ್ತಾರೆ ಎಂದು ಶಿವಕುಮಾರ್ ಹೇಳಿದರು. ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರು ಸಿಡಿ ಫ್ಯಾಕ್ಟರಿ ಕ್ಲೋಸ್ ಮಾಡಿ, ಮುಡಾ ಫ್ಯಾಕ್ಟರಿ ಶುರುಮಾಡಿದ್ದಾರೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ ಅಂತ ಪತ್ರಕರ್ತರೊಬ್ಬರು ಹೇಳಿದಾಗ ಬಹಳ ಸಂತೋಷ, ಅವರಿಗೆ ನನ್ನನ್ನು ನೆನಪಿಸಿಕೊಳ್ಳದಿದ್ದರೆ ಊಟ ನೀರು ಸೇರಲ್ಲ, ನಿದ್ರೆ ಬರಲ್ಲ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ನಾನು ಹೇಳಿದ್ದು, ಸಮುದಾಯದ ಪ್ರಸ್ತಾಪ ಮಾಡಿಲ್ಲ: ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ

Follow us on