ಗೃಹಲಕ್ಷ್ಮೀ ಯೋಜನೆ ತನಗೆ ಬೇಡವೆಂದು ನಯವಾಗಿ ತಿರಸ್ಕರಿಸಿ, ಸ್ವಾಭಿಮಾನ ಮೆರೆದ ಅಜ್ಜಿ ಏನು ಹೇಳಿದರು ಕೇಳಿ

| Updated By: ಸಾಧು ಶ್ರೀನಾಥ್​

Updated on: Sep 02, 2023 | 12:47 PM

ಕೊಪ್ಪಳ: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್​​ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆ ತನಗೆ ಬೇಡವೆಂದು ವೃದ್ಧ ಮಹಿಳೆಯೊಬ್ಬರು ನಯವಾಗಿ ತಿರಸ್ಕರಿಸಿ, ಸ್ವಾಭಿಮಾನ ಮೆರೆದಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಿಡಶೇಷಿ ಗ್ರಾಮದ ವಯೋವೃದ್ದೆಯಿಂದ ಈ ಸ್ವಾಭಿಮಾನದ ಮಾತು ಕೇಳಿಬಂದಿದೆ. ಶಿವಮ್ಮ‌ ಸಜ್ಜನ್ ಎಂಬುವವರೇ ಆ ಸ್ವಾಭಿಮಾನಿ ಮಹಿಳೆ.

ದೇವರು ನನಗೆ ಎಲ್ಲವೂ ಕರುಣಿಸಿದ್ದಾನೆ. ಇರೋ ಸವಲತ್ತಿನಲ್ಲೆ ಸಂತೃಪ್ತ ಜೀವನ ನಡೆಸುತ್ತಿದ್ದೇನೆ. ಸರ್ಕಾರದ ಗೃಹಲಕ್ಷ್ಮೀ ಯೋಜನಾ ಮೊತ್ತವಾದ ೨ ಸಾವಿರ ರೂ ಬೇಡವೆಂದು ಅಜ್ಜಿ ತಿಳಿಸಿದ್ದಾರೆ. ಈ ಹಿಂದೆ ತಾನು ಕೂಡಿಟ್ಟಿದ್ದ ಹಣವನ್ನೆಲ್ಲ ಗ್ರಾಮದ ಕೆರೆ ಅಭಿವೃಧ್ಧಿಗೆ ನೀಡಿ ಮಾದರಿಯಾಗಿದ್ದ ಅಜ್ಜಿ, ಸಧ್ಯ ಮತ್ತೊಮ್ಮೆ ಮಾದರಿ ನಿರ್ಧಾರ ತೆಗದುಕೊಂಡಿದ್ದಾರೆ. ಅಜ್ಜಿಯ ಈ ನಿರ್ಧಾರಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:44 pm, Sat, 2 September 23

Follow us on