ಬೇರೆ ಪಕ್ಷಗಳ ಶಾಸಕರನ್ನು ಖರೀದಿಸಲು ಬಿಜೆಪಿಗೆ ಹಣ ಎಲ್ಲಿಂದ ಬರುತ್ತಿದೆ? ಪ್ರಿಯಾಂಕ್ ಖರ್ಗೆ
ಬಿಜೆಪಿ ಎಲ್ಲ ರಾಜ್ಯಗಳಲ್ಲಿ ಈ ಧಂದೆ ನಡೆಸುತ್ತಿದೆ, ಅದಕ್ಕೆ ಹಣ ಎಲ್ಲಿಂದ ಬರುತ್ತಿದೆ ಅಂತ ಸಂತೋಷ್ ಜವಾಬು ನೀಡಬೇಕು ಅಂತ ಖರ್ಗೆ ಹೇಳಿದರು. ನಂತರ ಸಂತೋಷ್ ಅವರಿಗೆ ಬಹಿರಂಗ ಸವಾಲೆಸೆದ ಅವರು, ಸಂತೋಷ್ ಅವರಿಗೆ ಒಂದು ತಿಂಗಳು ಸಮಯಾವಕಾಶ ನೀಡುತ್ತೇನೆ, 45 ಅಲ್ಲ ಕೇವಲ 4 ಕಾಂಗ್ರೆಸ್ ಶಾಸಕರನ್ನು ತಮ್ಮ ಕಡೆ ಸೆಳೆದು ತೋರಿಸಲಿ ಎಂದರು.
ಬೆಂಗಳೂರು: ಗುರುವಾರದಂದು ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh), ಕಾಂಗ್ರೆಸ್ ಪಕ್ಷದ 45 ಪ್ರಮುಖ ಶಾಸಕರು ತನ್ನ ಸಂಪರ್ಕದಲ್ಲಿದ್ದಾರೆಂದು ಹೇಳಿದ್ದು ಅವರ ಪಕ್ಷದ ನಾಯಕರಿಂದಲೇ ತೀವ್ರ ಟೀಕೆಗೆ ಗುರಿಯಾಗಿದೆ. ಕಾಂಗ್ರೆಸ್ ನಾಯಕರಂತೂ ಅವರಿಗೆ ತೀಕ್ಷ್ಣ ತಿರುಗೇಟುಗಳನ್ನು ನೀಡುತ್ತಿದ್ದಾರೆ. ನಗರದಲ್ಲಿಂದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), 45 ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದಾರೆ ಅಂತ ಅವರು ಹೇಳುತ್ತಿದ್ದಾರೆಂದರೆ ಆಪರೇಷನ್ ಕಮಲಕ್ಕೆ (Operation Lotus) ಅಣಿಯಾಗುತ್ತಿದ್ದಾರೆ ಅಂತ ಅರ್ಥ, ಬಿಜೆಪಿ ಎಲ್ಲ ರಾಜ್ಯಗಳಲ್ಲಿ ಈ ಧಂದೆ ನಡೆಸುತ್ತಿದೆ, ಅದಕ್ಕೆ ಹಣ ಎಲ್ಲಿಂದ ಬರುತ್ತಿದೆ ಅಂತ ಸಂತೋಷ್ ಜವಾಬು ನೀಡಬೇಕು ಅಂತ ಹೇಳಿದರು. ನಂತರ ಸಂತೋಷ್ ಅವರಿಗೆ ಬಹಿರಂಗ ಸವಾಲೆಸೆದ ಖರ್ಗೆ, ಸಂತೋಷ್ ಅವರಿಗೆ ಒಂದು ತಿಂಗಳು ಸಮಯಾವಕಾಶ ನೀಡುತ್ತೇನೆ, 45 ಅಲ್ಲ ಕೇವಲ 4 ಕಾಂಗ್ರೆಸ್ ಶಾಸಕರನ್ನು ತಮ್ಮ ಕಡೆ ಸೆಳೆದು ತೋರಿಸಲಿ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ