‘ಅಂಬರೀಶ್​ ಇದ್ದಿದ್ರೆ ದರ್ಶನ್​ ಕಪಾಳಕ್ಕೆ ಹೊಡೆಯುತ್ತಿದ್ದರು’: ಓಂ ಪ್ರಕಾಶ್​ ರಾವ್​

| Updated By: ಮದನ್​ ಕುಮಾರ್​

Updated on: Jun 23, 2024 | 5:06 PM

ಚಿತ್ರರಂಗಕ್ಕೆ ಅಂಬರೀಶ್​ ಹಿರಿಯಣ್ಣನ ರೀತಿ ಇದ್ದರು. ಅವರಿಗೆ ದರ್ಶನ್​ ಕೂಡ ತುಂಬ ಗೌರವ ನೀಡುತ್ತಿದ್ದರು. ಈಗ ದರ್ಶನ್​ ಅವರು ಕೊಲೆ ಆರೋಪದ ಮೇಲೆ ಜೈಲು ಸೇರಿದ್ದಾರೆ. ಈ ಬಗ್ಗೆ ಓಂ ಪ್ರಕಾಶ್​ ರಾವ್​ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಅಂಬರೀಶಣ್ಣ ಈಗ ಇದ್ದಿದ್ದರೆ ದರ್ಶನ್​ಗೆ ಕಪಾಳಕ್ಕೆ ಹೊಡೆಯುತ್ತಿದ್ದರು. ಬಾರೋ ಇಲ್ಲಿ ಅಂತ ಕರೆದು ಬುದ್ಧಿ ಹೇಳುತ್ತಿದ್ದರು’ ಎಂದಿದ್ದಾರೆ ಓಂ ಪ್ರಕಾಶ್​ ರಾವ್.

ನಟ ದರ್ಶನ್​ (Darshan) ಈಗ ಜೈಲು ಪಾಲಾಗಿರುವ ಬಗ್ಗೆ ಅವರ ಆಪ್ತರು ಹಾಗೂ ಅಭಿಮಾನಿಗಳಿಗೆ ಬೇಸರ ಇದೆ. ಚಿತ್ರರಂಗದಲ್ಲಿ ಅನೇಕರ ಜೊತೆ ದರ್ಶನ್​ಗೆ ಉತ್ತಮ ಒಡನಾಟ ಇತ್ತು. ರೆಬಲ್​ ಸ್ಟಾರ್​ ಅಂಬರೀಶ್​ ಅವರಿಗೆ ದರ್ಶನ್​ ಅಪಾರ ಗೌರವ ನೀಡುತ್ತಿದ್ದರು. ಒಂದು ವೇಳೆ ಇಂದು ಅಂಬರೀಶ್​ (Ambareesh) ಇದ್ದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ಎಂಬ ಬಗ್ಗೆ ಹಿರಿಯ ನಿರ್ದೇಶಕ ಓಂ ಪ್ರಕಾಶ್​ ರಾವ್​ ಮಾತನಾಡಿದ್ದಾರೆ. ‘ಅಂಬರೀಶಣ್ಣ ಇದ್ದಿದ್ರೆ ದರ್ಶನ್​ ಕಪಾಳಕ್ಕೆ ಹೊಡೆಯುತ್ತಿದ್ದರು. ಕರೆದು ಬುದ್ಧಿ ಹೇಳುತ್ತಿದ್ದರು. ಬಾರೋ ಇಲ್ಲಿ.. ನೀನು ಮಾಡುತ್ತಿರುವುದು ತಪ್ಪು ಅಂತ ಖಂಡಿತಾ ಹೇಳಿರುತ್ತಿದ್ದರು. ಸುಮಲತಾ ಕೂಡ ಮಾತನಾಡುತ್ತಾರೆ. ಅದರ ಬಗ್ಗೆ ಅನುಮಾನ ಬೇಡ’ ಎಂದು ಓಂ ಪ್ರಕಾಶ್​ ರಾವ್​ (Om Prakash Rao) ಹೇಳಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಹತ್ಯೆ ಮಾಡಿದ ಆರೋಪದಿಂದ ದರ್ಶನ್ ಮತ್ತು ಅವರ ಸಹಚರರು ಜೈಲು ಸೇರಿದ್ದಾರೆ. ಈ ಕೇಸ್​ನಲ್ಲಿ ಪವಿತ್ರಾ ಗೌಡ ಪ್ರಮುಖ ಆರೋಪಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.