ದರ್ಶನ್ ನೋಡಲು ರಾಯಚೂರಿನಿಂದ ಬಂದು ಜೈಲಿನ ಹೊರಗೆ ಕಣ್ಣೀರು ಹಾಕಿದ ಫ್ಯಾನ್ಸ್
ನಟ ದರ್ಶನ್ ಅವರನ್ನು ನೋಡಬೇಕು ಅಂತ ಅವರ ಅಭಿಮಾನಿಗಳು ಹಠ ಹಿಡಿದಿದ್ದಾರೆ. ‘ಇಂದು ರಜೆ ಇರುವುದರಿಂದ ಬಾಸ್ ಭೇಟಿಗೆ ಅವಕಾಶ ಸಿಗುತ್ತಿಲ್ಲ. ನಾವು ನಾಳೆ ಬಾಸ್ ಭೇಟಿ ಮಾಡಿಕೊಂಡೇ ವಾಪಸ್ ಹೊರಡೋದು’ ಎಂದು ಪರಪ್ಪನ ಅಗ್ರಹಾರ ಜೈಲಿನ ಬಳಿ ದರ್ಶನ್ ಅವರ ಅಭಿಮಾನಿಗಳ ಹೇಳುತ್ತಿದ್ದಾರೆ. ದೂರದ ಊರುಗಳಿಂದ ದರ್ಶನ್ ಫ್ಯಾನ್ಸ್ ಬಂದಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ (Renuka Swamy Murder) ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಖತ್ ಬೇಸರ ಮೂಡಿಸಿದೆ. ಸದ್ಯ ಪರಪ್ಪನ ಅಗ್ರಹಾರದಲ್ಲಿ ದರ್ಶನ್ (Darshan) ಕಂಬಿ ಎಣಿಸುವಂತಾಗಿದೆ. ಅವರನ್ನು ನೋಡಬೇಕು ಎಂದು ಕೆಲವು ಅಭಿಮಾನಿಗಳು ಜೈಲಿನ ಬಳಿ ಬಂದಿದ್ದಾರೆ. ದೂರದ ರಾಯಚೂರು ಜಿಲ್ಲೆಯಿಂದ ಬಂದಿರುವ ಫ್ಯಾನ್ಸ್ ಕಣ್ಣೀರು ಹಾಕುತ್ತಿದ್ದಾರೆ. ತಮ್ಮ ನೆಚ್ಚಿನ ನಟನನ್ನು ನೋಡಬೇಕು ಎಂದು ಅಭಿಮಾನಿಗಳು (Darshan Fans) ಹಠ ಹಿಡಿದಿದ್ದಾರೆ. ದರ್ಶನ್ ಜೊತೆ ಪವಿತ್ರಾ ಗೌಡ ಮುಂತಾದ ಸಹಚರರು ಕೂಡ ಜೈಲಿನಲ್ಲಿದ್ದಾರೆ.
ದೂರದ ಊರುಗಳಿಂದ ಬಂದಿರುವ ದರ್ಶನ್ ಅಭಿಮಾನಿಗಳು ತಮ್ಮ ಎದೆಯ ಮೇಲೆ ದರ್ಶನ್ ಭಾವಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ‘ನಮ್ಮ ಬಾಸ್ ಕೆಟ್ಟದ್ದು ಮಾಡಿರಬಹುದು. ಆದರೆ ಅವರು ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಆದರೂ ಮಾಧ್ಯಮಗಳಲ್ಲಿ ಕೆಟ್ಟದಾಗಿ ತೋರಿಸಲಾಗುತ್ತಿದೆ’ ಎಂದು ದರ್ಶನ್ ಅಭಿಮಾನಿಗಳು ಹೇಳುತ್ತಿದ್ದಾರೆ. ದರ್ಶನ್ರನ್ನು ನೋಡಬೇಕು ಎಂಬುದು ಅವರ ಬಯಕೆ.
ಕೊಲೆ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಅವರನ್ನು ಬೆಂಬಲಿಸುವವರ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಆ ಬಗ್ಗೆಯೂ ದರ್ಶನ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ‘ದರ್ಶನ್ ರೀತಿ ಅವರ ಅಭಿಮಾನಿಗಳು ಕೂಡ ಕೆಟ್ಟವರು ಅಂತಾರೆ. ನಾವು ರಾಯಚೂರಿನಿಂದ ಬಾಸ್ ನೋಡಲು ಆಗಮಿಸಿದ್ದೇವೆ. ಹಾಗಾದ್ರೆ ನಾವು ಕೆಟ್ಟವರಾ’ ಎಂದು ಜೈಲಿನ ಹೊರಗೆ ನಿಂತು ಫ್ಯಾನ್ಸ್ ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ದರ್ಶನ್ ನ್ಯಾಯಾಂಗ ಬಂಧನ: ಜೀವಾವಧಿ ಶಿಕ್ಷೆಗೂ ಹೊರತಾದ ಶಿಕ್ಷೆಯಾಗಬೇಕು ಎಂದ ರೇಣುಕಾಸ್ವಾಮಿ ತಂದೆ
ದರ್ಶನ್ ಅವರನ್ನು ನೋಡಲೇಬೇಕು ಎಂದು ಫ್ಯಾನ್ಸ್ ಹಠ ಹಿಡಿದಿದ್ದಾರೆ. ‘ಇಂದು ರಜೆ ಹಿನ್ನೆಲೆಯಲ್ಲಿ ಬಾಸ್ ಭೇಟಿಗೆ ಅವಕಾಶ ನೀಡುತ್ತಿಲ್ಲ. ನಾವು ನಾಳೆ ಬಾಸ್ ಭೇಟಿ ಮಾಡಿಯೇ ವಾಪಸ್ ಹೊರಡೋದು’ ಎಂದು ಪರಪ್ಪನ ಅಗ್ರಹಾರ ಜೈಲಿನ ಬಳಿ ದರ್ಶನ್ ಅಭಿಮಾನಿಗಳ ಹೇಳುತ್ತಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕೋಪಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎನ್ನುವ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ದರ್ಶನ್ ಹಾಗೂ ಸಹಚರರ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.