AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ ಖೈದಿ ಸಂಖ್ಯೆ 6106; ಈ ನಂಬರ್​ನಲ್ಲೇ ವಾಹನ ನೋಂದಣಿಗೆ ಹೆಚ್ಚಿದೆ ಬೇಡಿಕೆ

ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್​ ಕಳಿಸಿದ್ದ ಎಂಬ ಕಾರಣಕ್ಕೆ ರೇಣುಕಾ ಸ್ವಾಮಿ ಎಂಬಾತನನ್ನು ಕೊಲೆ ಮಾಡಿದ ಆರೋಪದಲ್ಲಿ ದರ್ಶನ್​ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿ ಆಗಿರುವ ಅವರಿಗೆ 6106 ಖೈದಿ ನಂಬರ್​ ಕೊಡಲಾಗಿದೆ. ಈ ಸಂಖ್ಯೆಯಲ್ಲೇ ತಮ್ಮ ಹೊಸ ವಾಹನಗಳ ನೋಂದಣಿ ಮಾಡಿಸಿಕೊಳ್ಳಲು ಕೆಲವು ಅಭಿಮಾನಿಗಳು ಮುಂದಾಗಿದ್ದಾರೆ. ಫ್ಯಾನ್ಸ್ ಪಾಲಿಗೆ ಇದು ಲಕ್ಕಿ ನಂಬರ್​ ಎಂಬ ಭಾವನೆ ಕೆಲವರಿಗೆ ಮೂಡಿದೆ.

ದರ್ಶನ್​ ಖೈದಿ ಸಂಖ್ಯೆ 6106; ಈ ನಂಬರ್​ನಲ್ಲೇ ವಾಹನ ನೋಂದಣಿಗೆ ಹೆಚ್ಚಿದೆ ಬೇಡಿಕೆ
ದರ್ಶನ್​
ರಾಮ್​, ಮೈಸೂರು
| Edited By: |

Updated on:Jun 24, 2024 | 12:28 PM

Share

ನಟ ದರ್ಶನ್​ (Darshan) ಅವರನ್ನು ಅಪಾರವಾಗಿ ಪ್ರೀತಿಸುವ ಅಭಿಮಾನಿಗಳು ಇದ್ದಾರೆ. ಎಂಥದ್ದೇ ಸಂದರ್ಭದಲ್ಲೂ ಅವರನ್ನು ಬಿಟ್ಟುಕೊಡುವುದಿಲ್ಲ ಎಂಬ ಜನರು ಇದ್ದಾರೆ. ಇತ್ತೀಚೆಗೆ ದರ್ಶನ್​ ಅವರು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದರೂ ಕೂಡ ಅವರ ಪರವಾಗಿಯೇ ಕೆಲವು ಫ್ಯಾನ್ಸ್​ (Darshan Fans) ಜೈಕಾರ ಕೂಗುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ದರ್ಶನ್​ ಅಭಿಮಾನಿಗಳು ಇನ್ನಷ್ಟು ಆ್ಯಕ್ಟೀವ್​ ಆಗಿದ್ದಾರೆ. ಅಚ್ಚರಿ ಏನೆಂದರೆ, ದರ್ಶನ್​ಗೆ ಜೈಲಿನಲ್ಲಿ ನೀಡಿದ ಖೈದಿ ನಂಬರ್​ (Darshan Jail Number) ಕೂಡ ಈಗ ಅಭಿಮಾನಿಗಳ ಪಾಲಿನ ಲಕ್ಕಿ ನಂಬರ್​ ಆಗುತ್ತಿದೆ!

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ2 ಆಗಿರುವ ದರ್ಶನ್​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಅವರು ವಿಚಾರಣಾಧೀನ ಖೈದಿ ಆಗಿದ್ದಾರೆ. ಅವರಿಗೆ 6106 ಖೈದಿ ನಂಬರ್​ ನೀಡಲಾಗಿದೆ. ಈ ನಂಬರ್​ ಮೇಲೆ ಕೆಲವು ಅಭಿಮಾನಿಗಳಿಗೆ ಆಕರ್ಷಣೆ ಹೆಚ್ಚಿದೆ. ಇದೇ ನಂಬರ್​ನಲ್ಲಿ ಹೊಸ ವಾಹನಗಳ ನೋಂದಣಿ ಮಾಡಿಸಿಕೊಳ್ಳಲು ಕೆಲವು ಫ್ಯಾನ್ಸ್​ ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಊಟ, ನಿದ್ರೆ, ಕೆಲಸ ಬಿಟ್ಟು ದರ್ಶನ್​ಗಾಗಿ ಜೈಲಿನ ಹೊರಗೆ ಕಾದಿರುವ ಅಭಿಮಾನಿಗಳು

ಸೋಶಿಯಲ್​ ಮೀಡಿಯಾದಲ್ಲಿ ಕೆಲವು ಅಭಿಮಾನಿಗಳು ಕಣ್ಣೀರಿಡುತ್ತಾ ದರ್ಶನ್​ ಪರವಾಗಿ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ‘ನಮ್ಮ ಬಾಸ್​ ತಪ್ಪು ಮಾಡಿಲ್ಲ’ ಎಂದು ಕೂಗಿ ಹೇಳುತ್ತಿದ್ದಾರೆ. ಆದಷ್ಟು ಬೇಗ ದರ್ಶನ್​ ಅವರು ಬಿಡುಗಡೆ ಆಗಿ ಹೊರಗೆ ಬರಬೇಕು ಎಂದು ಫ್ಯಾನ್ಸ್​ ಹಂಬಲಿಸುತ್ತಿದ್ದಾರೆ. ದರ್ಶನ್​ ಅರೆಸ್ಟ್​ ಆದಾಗಿನಿಂದಲೂ ಅಭಿಮಾನಿಗಳಲ್ಲಿ ಚಡಪಡಿಕೆ ಹೆಚ್ಚಾಗಿದೆ.

ಇದನ್ನೂ ಓದಿ: ಉಪ್ಪು ಖಾರ ಇಲ್ಲದ ಊಟ, ಸೊಳ್ಳೆ ಕಾಟ: ಪವಿತ್ರಾ ಗೌಡಗೆ ನರಕವಾಯ್ತು ಜೈಲು

ಪರಪ್ಪನ ಅಗ್ರಹಾರದಲ್ಲಿ ಇರುವ ದರ್ಶನ್​ ಅವರನ್ನು ನೋಡಲೇಬೇಕು ಎಂದು ಕೆಲವು ಅಭಿಮಾನಿಗಳು ಹಠ ಹಿಡಿದಿದ್ದಾರೆ. ದೂರದ ಊರುಗಳಿಂದ ಬಂದಿರುವ ಫ್ಯಾನ್ಸ್​ ಈಗಾಗಲೇ ಜೈಲಿನ ಮುಂದೆ ನಿಂತು ಕಾಯುತ್ತಿದ್ದಾರೆ. ‘ಅವರನ್ನು ನೋಡಿಕೊಂಡೇ ನಾವು ಊರಿಗೆ ಹೋಗೋದು’ ಎಂದು ಕೆಲವರು ಕಣ್ಣೀರು ಹಾಕುತ್ತಿದ್ದಾರೆ. ಸದ್ಯಕ್ಕೆ ದರ್ಶನ್​, ಪವಿತ್ರಾ ಹಾಗೂ ಅವರ ಸಹಚರರು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:58 am, Mon, 24 June 24

Follow Us
Ram
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More