AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾ ಸ್ವಾಮಿ ಪ್ರಕರಣ: ದರ್ಶನ್​ ಹಾಗೂ ಗ್ಯಾಂಗ್​ಗೆ ಜುಲೈ 4ರ ವರೆಗೆ ನ್ಯಾಯಾಂಗ ಬಂಧನ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ತೂಗುದೀಪ್ ಹಾಗೂ ಇತರೆ ಮೂವರ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದು, ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್​ಗೆ ಹಾಜರುಪಡಿಸಲಾಯ್ತು, ನ್ಯಾಯಾಧೀಶರು ಆರೋಪಿಗಳಿಗೆ 14 ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ರೇಣುಕಾ ಸ್ವಾಮಿ ಪ್ರಕರಣ: ದರ್ಶನ್​ ಹಾಗೂ ಗ್ಯಾಂಗ್​ಗೆ ಜುಲೈ 4ರ ವರೆಗೆ ನ್ಯಾಯಾಂಗ ಬಂಧನ
ಮಂಜುನಾಥ ಸಿ.
|

Updated on:Jun 22, 2024 | 4:59 PM

Share

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ (Darshan Thoogudeepa) ಹಾಗೂ ವಿನಯ್, ಪ್ರದೋಷ್, ಧನರಾಜ್ ಅವರ ಎರಡು ದಿನದ ಪೊಲೀಸ್ ಕಸ್ಟಡಿ ಅವಧಿ ಮುಗಿದ ಕಾರಣ ಇಂದು (ಜೂನ್ 22) ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್​ಗೆ ಹಾಜರುಪಡಿಸಲಾಯ್ತು. ಮತ್ತೆ ಪೊಲೀಸರು ಕಸ್ಟಡಿಗೆ ಕೇಳಲಿಲ್ಲವಾದ್ದರಿಂದ ದರ್ಶನ್ ಹಾಗೂ ಇತರೆ ಮೂವರು ಆರೋಪಿಗಳಿಗೆ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಯ್ತು. ಇದೇ ಪ್ರಕರಣದ ಆರೋಪಿಗಳಾದ ಪವಿತ್ರಾ ಹಾಗೂ ಇತರರಿಗೆ ಎರಡು ದಿನಗಳ ಹಿಂದೆಯೇ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11 ರಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನೂ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು. ಆ ದಿನದಿಂದಲೂ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಮೊದಲ ಬಾರಿ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೇಳಲಾಗಿತ್ತು, ಒಂದು ದಿನ ಮುಂಚಿತವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಐದು ದಿನಗಳ ಕಾಲ ಕಸ್ಟಡಿಗೆ ಪಡೆಯಲಾಯ್ತು, ಅದಾದ ಬಳಿಕ ಮತ್ತೆ ಎರಡು ದಿನಗಳ ಕಾಲ ಕಸ್ಟಡಿಗೆ ಕೇಳಿ ಪಡೆಯಲಾಗಿತ್ತು. ಅಲ್ಲಿಗೆ ಒಟ್ಟು 12 ದಿನಗಳ ಕಾಲ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿ ಕಳೆದಿದ್ದಾರೆ. ಈಗ 13 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಬೇಕಿದ್ದು, ಇಂದೇ (ಜೂನ್ 22) ದರ್ಶನ್ ಹಾಗೂ ಇತರೆ ಮೂವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುತ್ತದೆ. ಜುಲೈ 4 ರ ವರೆಗೆ ದರ್ಶನ್ ಹಾಗೂ ಅವರ ಸಂಗಡಿಗರು ಜೈಲಿನಲ್ಲಿರಬೇಕಾಗಿದೆ.

ಇದನ್ನೂ ಓದಿ:‘ಶ್ವಾನದ ಮೇಲೆ ಆನೆ ದಾಳಿ ಮಾಡಿದಂತೆ’; ದರ್ಶನ್ ಪ್ರಕರಣದಲ್ಲಿ ಅಭಿಪ್ರಾಯ ಹಂಚಿಕೊಂಡ ಖ್ಯಾತ ನಿರ್ದೇಶಕ

ಇಂದು ಪೊಲೀಸರು, ಆರೋಪಿಗಳಿಗೆ ನ್ಯಾಯಾಂಗ ಬಂಧನ ಕೋರಿ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದರು, ಅದನ್ನು ಪುರಸ್ಕರಿಸಿದ ನ್ಯಾಯಾಧೀಶ ಜಯಕುಮಾರ್ ಜಾಟ್ಲಾ ಅವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ವಿಚಾರಣೆಗೆ ಕರೆತರುವ ಮುನ್ನ ಪೊಲೀಸರು ಆರೋಪಿಗಳ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದರು. ನ್ಯಾಯಾಲಯಕ್ಕೆ ಬಂದ ಬಳಿಕವೂ ಸಹ ನ್ಯಾಯಾಧೀಶರು ಆರೋಪಿಗಳನ್ನು ಉದ್ದೇಶಿಸಿ, ಪೊಲೀಸರಿಂದ ಏನಾದರೂ ಸಮಸ್ಯೆ ಆಗಿದೆಯೇ ಎಂದು ಕೇಳಿ ಮಾಹಿತಿ ಪಡೆದುಕೊಂಡರು. ಅಂತಿಮವಾಗಿ ನಾಲ್ಕು ಮಂದಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದರು.

ಈ ವೇಳೆ ಪೊಲೀಸರ ಪರ, ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿ, ಈ ಪ್ರಕರಣದ ಆರೋಪಿಗಳನ್ನು ಬೇರೆ-ಬೇರೆ ಜೈಲುಗಳಿಗೆ ವರ್ಗಾವಣೆ ಮಾಡುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಆರೋಪಿಗಳ ಪರ ವಕೀಲರಾದ ಪ್ರವೀಣ್ ತಿಮ್ಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಈ ವಿಚಾರದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಯ್ತು.

ದರ್ಶನ್ ಪರವಾಗಿ ಇಂದು (ಜೂನ್ 22) ನ್ಯಾಯಾಲಯದಲ್ಲಿ ವಕೀಲ ಕೀಲ ಪ್ರವೀಣ್ ತಿಮ್ಮಯ್ಯ ವಾದ ಮಂಡಿಸಿದರು. ಪ್ರವೀಣ್ ತಿಮ್ಮಯ್ಯ ಅವರು ಹಿರಿಯ ವಕೀಲ ಸಿ.ವಿ.ನಾಗೇಶ್ ಅವರೊಂದಿಗೆ ಚರ್ಚಿಸಿ ವಾದಕ್ಕೆ ಆಗಮಿಸಿದಾರೆ ಎನ್ನಲಾಗುತ್ತಿದೆ. ದರ್ಶನ್ ಪ್ರಕರಣದಲ್ಲಿ ಇನ್ನು ಮುಂದೆ ಸಿವಿ ನಾಗೇಶ್ ವಾದ ಮಂಡಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:12 pm, Sat, 22 June 24

Follow Us
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ
ಚಿಕ್ಕಮಗಳೂರಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು
ಚಿಕ್ಕಮಗಳೂರಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು
ಫಾಸ್ಟ್‌ಟ್ಯಾಗಲ್ಲಿ ಹಣವಿಲ್ಲದ್ದಕ್ಕೆ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್
ಫಾಸ್ಟ್‌ಟ್ಯಾಗಲ್ಲಿ ಹಣವಿಲ್ಲದ್ದಕ್ಕೆ ಹಿಗ್ಗಾಮುಗ್ಗಾ ಥಳಿತ! ವಿಡಿಯೋ ವೈರಲ್
ಬೆಂಗಳೂರು: ಹಾಡಹಗಲೇ ಸುಜುಕಿ ಆಕ್ಸೆಸ್ ಹೊತ್ತೊಯ್ದ ಖದೀಮ!
ಬೆಂಗಳೂರು: ಹಾಡಹಗಲೇ ಸುಜುಕಿ ಆಕ್ಸೆಸ್ ಹೊತ್ತೊಯ್ದ ಖದೀಮ!