AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾ ಸ್ವಾಮಿ ಪ್ರಕರಣದಲ್ಲಿ ಈವರೆಗೆ ವಶಪಡಿಸಿಕೊಂಡಿರುವ ಹಣವೆಷ್ಟು?

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ದರ್ಶನ್​ಗೆ ಈ ಐಟಿ ಕಂಟಕ ಶುರುವಾಗಿದೆ. ಪ್ರಕರಣದಲ್ಲಿ ದೊಡ್ಡ ಮೊತ್ತದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದು ಅದರ ತನಿಖೆ ನಡೆಯಲಿದೆ. ಅಂದಹಾಗೆ ಈ ಪ್ರಕರಣದಲ್ಲಿ ಈವರೆಗೆ ವಶಪಡಿಸಿಕೊಂಡಿರುವ ಹಣವೆಷ್ಟು?

ರೇಣುಕಾ ಸ್ವಾಮಿ ಪ್ರಕರಣದಲ್ಲಿ ಈವರೆಗೆ ವಶಪಡಿಸಿಕೊಂಡಿರುವ ಹಣವೆಷ್ಟು?
ದರ್ಶನ್ ತೂಗುದೀಪ
Follow us
ಮಂಜುನಾಥ ಸಿ.
|

Updated on:Jun 21, 2024 | 3:00 PM

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಸತತ ವಿಚಾರಣೆಗೆ ಒಳಗಾಗುತ್ತಿರುವ ನಟ ದರ್ಶನ್ (Darshan Thoogudeepa) ಇನ್ನು ಮುಂದೆ ಐಟಿ ಇಲಾಖೆಯ ತನಿಖೆಯನ್ನೂ ಎದುರಿಸಬೇಕಿದೆ. ರೇಣುಕಾ ಸ್ವಾಮಿ ಕೊಲೆ ಮುಚ್ಚಿಹಾಕಲು ದರ್ಶನ್ ನೀಡಿದ್ದ ಹಣದ ಜೊತೆಗೆ ಇನ್ನೂ ದೊಡ್ಡ ಮೊತ್ತದ ಹಣವನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೊಡ್ಡ ಮೊತ್ತದ ಹಣವನ್ನು ಪ್ರಕರಣದಲ್ಲಿ ದೊರೆತಿರುವ ಕಾರಣ ಆದಾಯ ತೆರಿಗೆ (ಐಟಿ) ಇಲಾಖೆಗೆ ಪೊಲೀಸರು ಮಾಹಿತಿ ನೀಡಿದ್ದು, ಇದೀಗ ಐಟಿ ಇಲಾಖೆಯೂ ಸಹ ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

ದರ್ಶನ್​ಗೆ ಈಗ ತೆರಿಗೆ ಇಲಾಖೆಯ ಸಮಸ್ಯೆಯೂ ಸುತ್ತಿಕೊಳ್ಳಲಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ 77 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ, ಹಾಗಾಗಿ ಈಗ ದರ್ಶನ್​ ರ ಹಣಕಾಸು ವ್ಯವಹಾರದ ತನಿಖೆಯನ್ನು ಐಟಿ ಇಲಾಖೆ ನಡೆಸಲಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮುಚ್ಚಿ ಹಾಕಲು ದರ್ಶನ್ ನೀಡಿದ್ದಾರೆ ಎನ್ನಲಾದ 30 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಿವಿಧ ಆರೋಪಿಗಳಿಂದ ಈಗಾಗಲೇ ವಶಪಡಿಸಿಕೊಂಡಿದ್ದಾರೆ. ದರ್ಶನ್​ರ ಆರ್​ಆರ್ ನಗರದ ಮನೆ ಮಹಜರು ಮಾಡುವ ಸಂದರ್ಭದಲ್ಲಿ 37.40 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು. ಅದಾದ ಬಳಿಕ ವಿಜಯಲಕ್ಷ್ಮಿ ದರ್ಶನ್ ಅವರ ವಿಚಾರಣೆ ವೇಳೆ ಅವರು ಮೂರು ಲಕ್ಷ ರೂಪಾಯಿ ಹಣವನ್ನು ಪೊಲೀಸರ ಸುಪರ್ಧಿಗೆ ನೀಡಿದ್ದಾರೆ. ಅಲ್ಲಿಗೆ ಒಟ್ಟು 70.40 ಲಕ್ಷ ರೂಪಾಯಿ ಹಣವನ್ನು ಪೊಲೀಸರು ಈವರೆಗೆ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:Sreeleela: ದರ್ಶನ್ ಬಗ್ಗೆ ಕೇಳಿದ್ದಕ್ಕೆ ನೋ ರಿಯಾಕ್ಷನ್ ಎಂದ ನಟಿ ಶ್ರೀಲೀಲಾ

ದರ್ಶನ್, ತಮ್ಮ ಸಹಾಯಕನಿಂದ ವಿಜಯಲಕ್ಷ್ಮಿ ಅವರಿಗೆ ಮೂರು ಲಕ್ಷ ರೂಪಾಯಿ ಹಣ ಕೊಟ್ಟು ಕಳಿಸಿದ್ದರಂತೆ. ಹಾಗಾಗಿ ಆ ಹಣವನ್ನು ವಿಜಯಲಕ್ಷ್ಮಿ ಅವರು ಪೊಲೀಸರ ವಶಕ್ಕೆ ನೀಡಿದ್ದಾರೆ. ನಿಯಮದ ಪ್ರಕಾರ 10 ಲಕ್ಷಕ್ಕಿಂತಲೂ ಹೆಚ್ಚಿಗೆ ಹಣ ಪತ್ತೆಯಾದರೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕು. ಇದೀಗ ಈ ಪ್ರಕರಣದಲ್ಲಿ 70.40 ಲಕ್ಷ ರೂಪಾಯಿ ಹಣ ಪತ್ತೆ ಆಗಿರುವ ಕಾರಣ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದು ಮಾಹಿತಿ ಹಂಚಿಕೊಂಡಿದ್ದು, ಐಟಿ ಇಲಾಖೆ ಸಹ ಪ್ರಕರಣದ ತನಿಖೆ ನಡೆಸಲಿದೆ. ಈಗ ವಶಪಡಿಸಿಕೊಂಡಿರುವ ಹಣದ ಮೂಲ ಪತ್ತೆಯ ಜೊತೆಗೆ ದರ್ಶನ್​ರ ಈ ಹಿಂದಿನ ಹಣಕಾಸು ವ್ಯವಹಾರಗಳ ಬಗ್ಗೆಯೂ ತನಿಖೆ ನಡೆಯಲಿವೆ.

ಹಣದ ಮೂಲ ಪತ್ತೆ ಹಚ್ಚುವ ಕಾರ್ಯವನ್ನು ಸಹ ಪೊಲೀಸರು ಈಗಾಗಲೇ ಮಾಡುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ ಸಹ ಇದೇ ವಿಷಯವಾಗಿ ತನಿಖೆ ನಡೆಸಲಿದೆ. ಇದರ ಜೊತೆಗೆ ದರ್ಶನ್​ರ ಹಳೆಯ ವ್ಯವಹಾರಗಳ ತನಿಖೆಯೂ ಆಗಲಿದೆ. ಆರ್ಥಿಕ ಅಪರಾಧವನ್ನೇನಾದರೂ ದರ್ಶನ್ ಎಸಗಿರುವುದು ಪತ್ತೆಯಾದಲ್ಲಿ ಆ ಪ್ರಕರಣವೂ ಸಹ ದರ್ಶನ್​ ತಲೆಗೆ ಸುತ್ತಿಕೊಳ್ಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:52 pm, Fri, 21 June 24