ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಶೌರ್ಯ ಪ್ರಶಸ್ತಿ ಪ್ರಧಾನ ಮಾಡಲಾಗಿದ್ದು, ಕರ್ನಾಟಕದ ಮೂವರು ಬಾಲಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅದರಲ್ಲ್ಲಿ ಹುಬ್ಬಳ್ಳಿಯ ಆದಿತ್ಯಾ ಮಲ್ಲಿಕಾರ್ಜುನ್ ಎಂಬ ಬಾಲಕ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರ ಪ್ರಾಣ ಉಳಿಸಿದ ಕಾರಣದಿಂದ ಶೌರ್ಯ ಪ್ರಶಸ್ತಿ ಪಡೆದಿದ್ದು, ದಾವಣಗೆರೆಯ ಕೀರ್ತಿ ವಿವೇಕ್ ಎಂ ಸಾಹುಕಾರ್ ತನ್ನ ಇಡೀ ಕುಟುಂಬವನ್ನ ಕಾಪಾಡಿಕೊಂಡಿದ್ದಕ್ಕಾಗಿ ಹಾಗೂ ಕೊಡಗು ಮೂಲದ ಕೆ.ಆರ್ ದೀಕ್ಷಿತ್ ಸೇರಿ ರಾಜ್ಯದ ಮೂವರು ಬಾಲಕರಿಗೆ ಶೌರ್ಯ ಪ್ರಶಸ್ತಿ ಸಿಕ್ಕಿದ್ದು, ದೆಹಲಿಯ ಹೆಬಿಟೆಟ್ ಸೆಂಟರ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಮೂರು ಸೇನೆಗಳ ಮುಖ್ಯಸ್ಥರು ಭಾಗಿಯಾಗಿ, ಬಾಲಕರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ