Padma Awards 2023: ಪದ್ಮ ಪ್ರಶಸ್ತಿ ಪ್ರಕಟ, ದಿಲೀಪ್ ಮಹಲನಾಬಿಸ್‌ಗೆ ಮರಣೋತ್ತರ ಪದ್ಮವಿಭೂಷಣ

TV9kannada Web Team

TV9kannada Web Team | Edited By: Rashmi Kallakatta

Updated on: Jan 25, 2023 | 10:27 PM

ಪದ್ಮ ಪ್ರಶಸ್ತಿ 2023: ಪದ್ಮವಿಭೂಷಣ ಮತ್ತು ಪದ್ಮಶ್ರೀ ಎಂಬ ಎರಡು ವಿಭಾಗಗಳಲ್ಲಿ ಒಟ್ಟು 106 ವ್ಯಕ್ತಿಗಳಿಗೆ  ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಲಾಗಿದೆ. ORS ಸಂಶೋಧಕ ದಿಲೀಪ್ ಮಹಾಲನಾಬಿಸ್ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ (ಪೀಡಿಯಾಟ್ರಿಕ್ಸ್) ಪದ್ಮವಿಭೂಷಣ (ಮರಣೋತ್ತರ) ಪ್ರಶಸ್ತಿ ನೀಡಲಾಗುವುದು

Padma Awards 2023: ಪದ್ಮ ಪ್ರಶಸ್ತಿ ಪ್ರಕಟ, ದಿಲೀಪ್ ಮಹಲನಾಬಿಸ್‌ಗೆ ಮರಣೋತ್ತರ ಪದ್ಮವಿಭೂಷಣ
ದಿಲೀಪ್ ಮಹಾಲನಾಬಿಸ್

ಈ ವರ್ಷದ ಪದ್ಮ ಪ್ರಶಸ್ತಿ (Padma Awards) ಪ್ರಕಟವಾಗಿದೆ. ಪದ್ಮವಿಭೂಷಣ ಮತ್ತು ಪದ್ಮಶ್ರೀ ಎಂಬ ಎರಡು ವಿಭಾಗಗಳಲ್ಲಿ ಒಟ್ಟು 106 ವ್ಯಕ್ತಿಗಳಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಲಾಗಿದೆ. ORS ಸಂಶೋಧಕ ದಿಲೀಪ್ ಮಹಲನಾಬಿಸ್ (Dilip Mahalanabis) ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ (ಪೀಡಿಯಾಟ್ರಿಕ್ಸ್) ಪದ್ಮವಿಭೂಷಣ (ಮರಣೋತ್ತರ) (Padma Vibhushan) ಪ್ರಶಸ್ತಿ ನೀಡಲಾಗುವುದು. 74 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಸರ್ಕಾರ ಅತ್ಯುನ್ನತ ಸಾಗರಿಕ ಪ್ರಶಸ್ತಿ ಪ್ರಕಟಿಸಿದ್ದು ಮಹಲನಾಬಿಸ್ ಅವರ ಪ್ರಯತ್ನಗಳು ಓಆರ್​​ಎಸ್ ಅನ್ನು ವ್ಯಾಪಕವಾಗಿ ಬಳಸುವುದಕ್ಕೆ ಕಾರಣವಾಯಿತು, ಇದು ಜಾಗತಿಕವಾಗಿ ಐದು ಕೋಟಿಗೂ ಹೆಚ್ಚು ಜೀವಗಳನ್ನು ಉಳಿಸಿದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿಕಯಲ್ಲಿ ತಿಳಸಿದೆ. ಪಶ್ಚಿಮ ಬಂಗಾಳದವರಾಗಿದ್ದಾರೆ ಮಹಲನಾಬಿಸ್.

ಬುಡಕಟ್ಟು ಹೋ ಭಾಷಾ ವಿದ್ವಾಂಸರಾದ ಜನುಮ್ ಸಿಂಗ್ ಸೋಯ್ ಅವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿಗೌರವಿಸಲಾಗುವುದು. ಟೊಟೊ (ಡೆಂಗ್ಕಾ) ಭಾಷಾ ಸಂರಕ್ಷಕ, ಧನಿರಾಮ್ ಟೊಟೊ, ಮಂಡಿಯ ಸಾವಯವ ಕೃಷಿಕರಾದ ನೆಕ್ರಮ್ ಶರ್ಮಾ, ತೆಲಂಗಾಣದ ಭಾಷಾಶಾಸ್ತ್ರ ಪ್ರಾಧ್ಯಾಪಕರಾದ ಬಿ ರಾಮಕೃಷ್ಣ ರೆಡ್ಡಿ ಅವರಿಗೆ ಪದ್ಮಶ್ರೀ ಲಭಿಸಿದೆ.

6 ಪದ್ಮ ವಿಭೂಷಣ, 9 ಪದ್ಮಭೂಷಣ ಮತ್ತು 91 ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ

ಪದ್ಮವಿಭೂಷಣ ಪ್ರಶಸ್ತಿ

ಮುಲಾಯಂ ಸಿಂಗ್ ಯಾದವ್ (ಮರಣೋತ್ತರ) ಬಾಲಕೃಷ್ಣ ದೋಷಿ (ಮರಣೋತ್ತರ) ಜಾಕಿರ್ ಹುಸೇನ್ ಎಸ್ ಎಂ ಕೃಷ್ಣ ದಿಲೀಪ್ ಮಹಲನಾಬಿಸ್ (ಮರಣೋತ್ತರ) ಶ್ರೀನಿವಾಸ್ ವರದನ್

ಪದ್ಮಭೂಷಣ

ಎಸ್ ಎಲ್ ಭೈರಪ್ಪ ಕುಮಾರ್ ಮಂಗಲಂ ಬಿರ್ಲಾ ದೀಪಕ್ ಧಾರ್ ವಾಣಿ ಜೈರಾಮ್ ಸ್ವಾಮಿ ಚಿನ್ನ ಜೀಯರ್ ಸುಮನ್ ಕಲ್ಯಾಣಪುರ ಕಪಿಲ್ ಕಪೂರ್ ಸುಧಾ ಮೂರ್ತಿ ಕಮಲೇಶ್ ಡಿ ಪಟೇಲ್

ಪದ್ಮಶ್ರೀ ಪ್ರಶಸ್ತಿ

ಸುಕಮ ಆಚಾರ್ಯ, ಜೋಧಯ್ಯಬಾಯಿ ಬೈಗಾ,  ಪ್ರೇಮ್ಜಿತ್ ಬರಿಯಾ,ಉಷಾ ಬಾರ್ಲೆ, ಮುನೀಶ್ವರ ಚಂದಾವರ, ಹೇಮಂತ್ ಚೌಹಾಣ್ ಭಾನುಭಾಯಿ ಚಿತಾರಾ, ಹೆಮೊಪ್ರೊವಾ ಚುಟಿಯಾ,ನರೇಂದ್ರ ಚಂದ್ರ ದೆಬ್ಬರ್ಮ (ಮರಣೋತ್ತರ), ಸುಭದ್ರಾ ದೇವಿ, ಖಾದರ್ ವಲ್ಲಿ ದೂದೇಕುಲ, ಹೇಂ ಚಂದ್ರ ಗೋಸ್ವಾಮಿ,ಪ್ರಿತಿಕಾನಾ ಗೋಸ್ವಾಮಿ,ರಾಧಾ ಚರಣ್ ಗುಪ್ತಾ,ಮೊಡಡುಗು ವಿಜಯ್ ಗುಪ್ತಾ,ಅಹ್ಮದ್ ಹುಸೇನ್ ಮತ್ತು ಮೊಹಮ್ಮದ್ ಹುಸೇನ್ (ಜೋಡಿ),ದಿಲ್ಶಾದ್ ಹುಸೇನ್,ಭಿಕು ರಾಮ್‌ಜಿ ಇದತೇ,ಸಿ ಐ ಇಸಾಕ್, ರತ್ತನ್ ಸಿಂಗ್ ಜಗ್ಗಿ, ಬಿಕ್ರಮ್ ಬಹದ್ದೂರ್ ಜಮಾತಿಯಾ,ರಾಮ್ಕುಯಿವಾಂಗ್ಬೆ ಜೆನೆ,ರಾಕೇಶ್ ರಾಧೇಶ್ಯಾಮ್ ಜುಂಜುನ್ವಾಲಾ (ಮರಣೋತ್ತರ),ರತನ್ ಚಂದ್ರ ಕರ್ ಮಹಿಪತ್ ಕವಿ,ಎಂ ಎಂ ಕೀರವಾಣಿ,ಅರೀಜ್ ಖಂಬಟ್ಟಾ (ಮರಣೋತ್ತರ),ಪರಶುರಾಮ ಕೊಮಾಜಿ ಖುನೆ,ಗಣೇಶ ನಾಗಪ್ಪ ಕೃಷ್ಣರಾಜನಗರ ಮಾಗುನಿ ಚರಣ್ ಕುಂರ್,ಆನಂದ್ ಕುಮಾರ್,ಅರವಿಂದ್ ಕುಮಾರ್,ದೋಮರ್ ಸಿಂಗ್ ಕುನ್ವರ್,ರೈಸಿಂಗ್ಬೋರ್ ಕುರ್ಕಲಾಂಗ್ ಹೀರಾಬಾಯಿ ಲೋಬಿ,ಮೂಲಚಂದ್ ಲೋಧಾ,ರಾಣಿ ಮಾಚಯ್ಯ,ಅಜಯ್ ಕುಮಾರ್ ಮಾಂಡವಿ,ಪ್ರಭಾಕರ ಭಾನುದಾಸ್ ಮಂದೆ ಗಜಾನನ ಜಗನ್ನಾಥ ಮಾನೆ,ಅಂತರ್ಯಾಮಿ ಮಿಶ್ರಾ,ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ,ಪ್ರೊ. (ಡಾ.) ಮಹೇಂದ್ರ ಪಾಲ್ ಉಮಾ ಶಂಕರ್ ಪಾಂಡೆ,ರಮೇಶ್ ಪರ್ಮಾರ್ ಮತ್ತು ಶಾಂತಿ ಪರ್ಮಾರ್,ನಳಿನಿ ಪಾರ್ಥಸಾರಥಿ,ಹನುಮಂತ ರಾವ್ ಪಸುಪುಲೇಟಿ ರಮೇಶ ಪತಂಗೆ,ಕೃಷ್ಣ ಪಟೇಲ್, ಕೆ ಕಲ್ಯಾಣಸುಂದರಂ ಪಿಳ್ಳೆ,ವಿ ಪಿ ಅಪ್ಪುಕುಟ್ಟನ್ ಪೊದುವಾಳ್, ಕಪಿಲ್ ದೇವ್ ಪ್ರಸಾದ್, ಎಸ್ ಆರ್ ಡಿ ಪ್ರಸಾದ್, ಶಾ ರಶೀದ್ ಅಹ್ಮದ್ ಕ್ವಾದ್ರಿ,ಸಿ ವಿ ರಾಜು,ಬಕ್ಷಿ ರಾಮ್, ಚೆರುವಾಯಲ್ ಕೆ ರಾಮನ್, ಸುಜಾತಾ ರಾಮದೊರೈ, ಅಬ್ಬಾರೆಡ್ಡಿ ನಾಗೇಶ್ವರ ರಾವ್,ಪರೇಶಭಾಯಿ ರಾತ್ವಾ,ಬಿ ರಾಮಕೃಷ್ಣ ರೆಡ್ಡಿ,ಮಂಗಳಾ ಕಾಂತಿ ರಾಯ್,ಕೆ ಸಿ ರನ್ನರಸಂಗಿ ವಡಿವೇಲ್ ಗೋಪಾಲ್ ಮತ್ತು ಮಾಸಿ ಸದಯ್ಯನ್,ಮನೋರಂಜನ್ ಸಾಹು,ಪತಾಯತ್ ಸಾಹು,ಋತ್ವಿಕ್ ಸನ್ಯಾಲ್,ಕೋಟ ಸಚ್ಚಿದಾನಂದ ಶಾಸ್ತ್ರಿ,ಸಂಕುರಾತ್ರಿ ಚಂದ್ರಶೇಖರ್,ಕೆ ಶಾನತೋಯಿಬಾ ಶರ್ಮಾ,ನೆಕ್ರಮ್ ಶರ್ಮಾ,ಗುರ್ಚರಣ್ ಸಿಂಗ್,ಲಕ್ಷ್ಮಣ್ ಸಿಂಗ್,ಮೋಹನ್ ಸಿಂಗ್, ತೌನೋಜಮ್ ಚಾವೋಬಾ ಸಿಂಗ್,  ಪ್ರಕಾಶ್ ಚಂದ್ರ ಸೂದ್, ನೈಹುನಾವೋ ಸೋರಿ,ಡಾ. ಜನುಮ್ ಸಿಂಗ್ ಸೋಯ್, ಕುಶೋಕ್ ಥಿಕ್ಸೇ ನವಾಂಗ್ ಚಂಬಾ ಸ್ಟಾಂಜಿನ್, ಎಸ್ ಸುಬ್ಬರಾಮನ್, ಮೋವಾ ಸುಬಾಂಗ್, ಪಾಲಂ ಕಲ್ಯಾಣ ಸುಂದರಂ, ರವೀನಾ ರವಿ ಟಂಡನ್,ವಿಶ್ವನಾಥ್ ಪ್ರಸಾದ್ ತಿವಾರಿ,ಧನಿರಾಮ್ ಟೊಟೊ,ತುಲಾ ರಾಮ್ ಉಪ್ರೇತಿ,ಗೋಪಾಲಸಾಮಿ ವೇಲುಚಾಮಿ,ಈಶ್ವರ ಚಂದರ್ ವರ್ಮಾ,ಕೂಮಿ ನಾರಿಮನ್ ವಾಡಿಯಾ,ಕರ್ಮ ವಾಂಗ್ಚು (ಮರಣೋತ್ತರ), ಗುಲಾಮ್ ಮುಹಮ್ಮದ್ ಝಾಝ್.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada