ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬಂದಾಗ ಅತಿಹೆಚ್ಚು ಫಲಾನುಭವಿ ಕುಮಾರಸ್ವಾಮಿ ಆಗಲಿದ್ದಾರೆ: ಶಿವಕುಮಾರ್
ಕುಮಾರಸ್ವಾಮಿ ಅವರ ಬಿಡದಿ ಬಳಿಯ ಜಮೀನಲ್ಲಿ ಕೋರ್ಟ್ ಆದೇಶದ ಮೇರೆಗೆ ತೆರವು ಕಾರ್ಯಾಚರಣೆ ಬಗ್ಗೆ ಕೇಂದ್ರ ಸಚಿವ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಅವರು ರಾಜಕೀಯದ ಹೇಳಿಕೆಗಳನ್ನು ನೀಡುತ್ತಿರುತ್ತಾರೆ, ಕುಮಾರಸ್ವಾಮಿ ನನ್ನನ್ನು ಬಯ್ಯದೆ ಮತ್ಯಾರನ್ನು ಬಯ್ಯುತ್ತಾರೆ, ಅವರ ಜಮೀನು ಪಕ್ಕದಲ್ಲಿ ನನ್ನ ಜಮೀನು ಇಟ್ಕೊಂಡು ಚೇಷ್ಟೆ ಮಾಡಲು ಸಾಧ್ಯವಾಗುತ್ತಾ ಎಂದು ಪ್ರಶ್ನಿಸಿದರು.
ದೆಹಲಿ, ಮಾರ್ಚ್ 18: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (ಎಐಸಿಸಿ) ಮಾರ್ಚ್ 27 ಮತ್ತು 28ರಂದು ಅಹ್ಮದಾಬಾದ್ ನಗರದ ಸಬರಮತಿ ಆಶ್ರಮದ (Sabarmati Ashram) ಪಕ್ಕದಲ್ಲಿ ಒಂದು ಮೀಟಿಂಗ್ ಇಟ್ಟುಕೊಂಡಿದೆ, ಪಕ್ಷದ ಹಿರಿಯ ನಾಯಕರು, ಸಂಸದರು ಮತ್ತು ಡಿಸಿಸಿ ಪದಾಧಿಕಾರಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಪರಿಕಲ್ಪನೆಯೊಂದಿಗೆ ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಅಗಿ ಪರಿವರ್ತಿಸಲು ಸಚಿವ ಸಂಪುಟದ ಅನುಮೋದನೆ ಪಡೆದುಕೊಂಡಿದ್ದೇನೆ, ಒಳ್ಳೆಯ ಕೆಲಸ ಆಗುವಾಗ ಒಂದಷ್ಟು ಅಡಚಣೆ ಆಗೇ ಆಗುತ್ತವೆ, ಗ್ರೇಟರ್ ಬೆಂಗಳೂರುನಿಂದ ಹೆಚ್ಚಿನ ಲಾಭ ಕುಮಾರಸ್ವಾಮಿಯವರಿಗಿದೆ ಎಂದು ಶಿವಕುಮಾರ್ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಜತೆ ಡಿಕೆ ಶಿವಕುಮಾರ್ ದಿಢೀರ್ ಪಯಣ!