‘ಕ್ರಿಕೆಟರ್ ಆಗಬೇಕು ಎಂದುಕೊಂಡಿದ್ದೆ, ನಟಿಯಾದೆ’; ಈ ಕಿರುಚಿತ್ರಕ್ಕೆ 12 ಪ್ರಶಸ್ತಿ
ಸಿಂಹಿಕಾ ನಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೆಲ ವರ್ಷಗಳ ಹಿಂದೆ ಅನುಪಮ್ ಖೇರ್ ಅವರ ನಟನಾ ಶಾಲೆಯಲ್ಲಿ ತರಬೇತಿ ಪಡೆದುಬಂದಿದ್ದಾರೆ. ಈ ಮೊದಲು ಒಂದು ಮ್ಯೂಸಿಕ್ ವಿಡಿಯೋದಲ್ಲಿ ಅವರು ಕಾಣಿಸಿಕೊಂಡಿದ್ದರು.
ಸಾಕಷ್ಟು ಹೆಣ್ಣುಮಕ್ಕಳು ಸಮಾಜಕ್ಕೆ ಹೆದರಿ ಬದುಕುತ್ತಿರುತ್ತಾರೆ. ಆದರೆ, ಭಯವನ್ನು ಮೀರಿ ಬದುಕಬೇಕು ಎಂಬ ಸಂದೇಶ ‘ಒನ್ ರೈಟ್ ಕಿಕ್’ ಕಿರುಚಿತ್ರ ಮೂಡಿ ಬಂದಿದೆ. ಮಂಗಳೂರು ಮೂಲದ ಬಾಲಚಂದಿರ್ ಅವರು ಈ ಕಿರುಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ಸಾಕಷ್ಟು ಅಂತಾರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಸಿಂಗಾಪುರ್ ಅಂತಾರಾಷ್ಟ್ರೀಯ ಸಿನಿಮೋತ್ಸವ, ಇಂಡೋ-ಫ್ರೆಂಚ್ ಅಂತಾರಾಷ್ಟ್ರೀಯ ಸಿನಿಮೋತ್ಸವ ಸೇರಿ 12 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸಿಂಹಿಕಾ ಇದರ ನಾಯಕಿ. ಸಿಂಹಿಕಾ ನಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೆಲ ವರ್ಷಗಳ ಹಿಂದೆ ಅನುಪಮ್ ಖೇರ್ ಅವರ ನಟನಾ ಶಾಲೆಯಲ್ಲಿ ತರಬೇತಿ ಪಡೆದುಬಂದಿದ್ದಾರೆ. ಈ ಮೊದಲು ಒಂದು ಮ್ಯೂಸಿಕ್ ವಿಡಿಯೋದಲ್ಲಿ ಅವರು ಕಾಣಿಸಿಕೊಂಡಿದ್ದರು. ಇದು ಅವರ ಮೊದಲ ಕಿರುಚಿತ್ರ. ಈಗ ಹೆಚ್ಚಿನ ನಟನಾ ತರಬೇತಿಗೆ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಅದಾದ ನಂತರದಲ್ಲಿ ಮುಂದಿನ ಆಲೋಚನೆಗಳನ್ನು ಮಾಡುವ ಉದ್ದೇಶವನ್ನು ಅವರು ಇಟ್ಟುಕೊಂಡಿದ್ದಾರೆ. ಈ ಬಗ್ಗೆ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ‘ಒನ್ ರೈಟ್ ಕಿಕ್’ ಕಿರುಚಿತ್ರಕ್ಕೆ 12 ಅಂತಾರಾಷ್ಟ್ರೀಯ ಪ್ರಶಸ್ತಿ; ನಟಿ ಸಿಂಹಿಕಾ ಬಿಚ್ಚಿಟ್ಟ ರಹಸ್ಯ