ವನ್ಪ್ಲಸ್ ನಾರ್ಡ್ ಸಿಇ ಸ್ಮಾರ್ಟ್ ಫೋನ್ ಕೆಲವೇ ದಿನಗಳಲ್ಲಿ ಭಾರತದ ಮಾರ್ಕೆಟ್ ಪ್ರವೇಶಿಸಲಿದೆ
ಲೀಕ್ ಆಗಿರುವ ಮಾಹಿತಿಯು ನಾವು ಹೊಸ ವನ್ಪ್ಲಸ್ ನಾರ್ಡ್ ಸಿಇ ಸ್ಮಾರ್ಟ್ ಫೋನ್ ಬಗ್ಗೆ ಏನೆಲ್ಲ ನಿರೀಕ್ಷೆ ಇಟ್ಟುಕೊಳ್ಳಬಹುದೆನ್ನುವುದಕ್ಕೆ ಒಂದು ಸುಳಿವು ನೀಡುತ್ತದೆ.
ಮಾಧ್ಯಮಗಳಿಗೆ ಲೀಕ್ ಆಗಿರುವ ಮಾಹಿತಿಯನ್ನು ನಂಬುವುದಾದರೆ, ವನ್ಪ್ಲಸ್ ನಾರ್ಡ್ ಸಿಇ ಸ್ಮಾರ್ಟ್ ಫೋನ್ ಅತಿ ಶೀಘ್ರದಲ್ಲೇ ಭಾರತೀಯ ಮಾರ್ಕೆಟ್ ಪ್ರವೇಶಿಸಲಿದೆ. ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ್ ಇವಾನ್ ಎಂಬ ಕೋಡ್ ಹೆಸರಿನಲ್ಲಿ ತಯಾರಾಗುತ್ತಿರುವ ಮತ್ತು ಐವಿ 2201 ಮಾಡೆಲ್ ಹೊದಿರುವ ವನ್ಪ್ಲಸ್ ನಾರ್ಡ್ ಸಿಇ ಸ್ಮಾರ್ಟ್ ಫೋನ್ಗಳ ಉತ್ಪಾದನೆಯು ಭರದಿಂದ ಸಾಗಿದೆ. ಫೋನ್ಗಳ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳದವರಿಗೆ ಈ ಮಾಹಿತಿ; ವನ್ಪ್ಲಸ್ ನಾರ್ಡ್ ಸಿಇ ಫೋನು ವನ್ಪ್ಲಸ್ ನಾರ್ಡ್ ಆವೃತ್ತಿಗಿಂತ ಕಡಿಮೆ ವರ್ಚಸ್ಸು ಮತ್ತು ಕೊಂಚ ಕಡಿಮೆ ಬೆಲೆಯ ಫೋನ್ ಆಗಿದೆ.
ಲೀಕ್ ಆಗಿರುವ ಮಾಹಿತಿಯು ನಾವು ಹೊಸ ವನ್ಪ್ಲಸ್ ನಾರ್ಡ್ ಸಿಇ ಸ್ಮಾರ್ಟ್ ಫೋನ್ ಬಗ್ಗೆ ಏನೆಲ್ಲ ನಿರೀಕ್ಷೆ ಇಟ್ಟುಕೊಳ್ಳಬಹುದೆನ್ನುವುದಕ್ಕೆ ಒಂದು ಸುಳಿವು ನೀಡುತ್ತದೆ.
ಅಂದಹಾಗೆ, ಇದರ ಬೆಲೆ ಎಷ್ಟಿರಬಹುದು ಅನ್ನುವ ಸುಳಿವನ್ನೂ ನಿಮಗೆ ನೀಡಿಬಿಡುತ್ತೇವೆ. ರೂ. 24,000 ಗಳಿಂದ ರೂ. 28,000 ವರೆಗೆ ಇರಲಿದೆ.
ವನ್ಪ್ಲಸ್ ನಾರ್ಡ್ ಸಿಇ ಸ್ಮಾರ್ಟ್ ಫೋನ್ ಮೀಡಿಯಾ ಟೆಕ್ ಡೈಮಿನ್ಸಿಟಿ 900 5ಜಿ ಚಿಪ್ ಸೆಟ್ ನಿಂದ ಕಾರ್ಯಾಗತಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ.
ಹೊಸ ಫೋನಿನ ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್, 8 ಮೆಗಾಪಿಕ್ಸಲ್ ವಿಸ್ತೃತ ಲೆನ್ಸ್, ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಒಳಗೊಂಡ ತ್ರಿವಳಿ ಕೆಮೆರಾಗಳ ಸೆಟಪ್ ಇರುವ ನಿರೀಕ್ಷೆಯಿದೆ. ಫೋನಿನ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫೀ ಶೂಟರ್ ಇರಲಿದೆ.
ಇದನ್ನೂ ಓದಿ: Viral Video: ಮದುವೆ ಮಂಟಪದಲ್ಲಿ ತಮಾಷೆ ಮಾಡಿದ ವರನ ಸ್ನೇಹಿತರಿಗೆ ಸರಿಯಾದ ಉತ್ತರ ಕೊಟ್ಟ ವಧು; ವಿಡಿಯೋ ನೋಡಿ