Dasara Mahotsav 2024; ಅಂಬಾರಿ ತೂಕ 680 ಕೇಜಿಯಾದರೂ ಚಿನ್ನದ ಪ್ರಮಾಣ 80 ಕೇಜಿ ಮಾತ್ರ: ಡಾ ಅಯ್ಯಂಗಾರ್
Dasara Mahotsav 2024: ಹತ್ತನೇ ಚಾಮರಾಜ ಒಡೆಯರ್ ಅವರ ಕಾಲದಿಂದ ಚಿನ್ನದ ಅಂಬಾರಿಯ ಇತಿಹಾಸ ಶುರುವಾಗುತ್ತದೆ ಎಂದು ಹೇಳುವ ಡಾ ಶೆಲ್ವಪಿಳ್ಳೈ ಅಯ್ಯಂಗಾರ್ ಅದರ ತೂಕ 680 ಕೇಜಿಯಷ್ಟಿದ್ದರೂ ಚಿನ್ನದ ಪ್ರಮಾಣ ಕೇವಲ 80 ಕೇಜಿಗಳಷ್ಟು ಮಾತ್ರವಿದೆ ಎನ್ನುತ್ತಾರೆ. ಅಂಬಾರಿ ತಯಾರಿಕೆಯಲ್ಲಿ ಕಟ್ಟಿಗೆ ಬಳಸಲಾಗಿದೆ ಎಂದು ಅವರು ಹೇಳುತ್ತಾರೆ.
ಮೈಸೂರು: ಜಗದ್ದಿಖ್ಯಾತ ಮೈಸೂರು ಜಂಬೂ ಸವಾರಿ ಇಂದು ನಡೆಯಲಿದ್ದು ಅಭಿಮನ್ಯು ಹೆಸರಿನ ಆನೆ ಇದೇ ಚಿನ್ನದ ಅಂಬಾರಿಯನ್ನು ಹೊತ್ತು ನಗರದ ಬೀದಿಗಳಲ್ಲಿ ಸಾಗಲಿದೆ. ಬಹಳಷ್ಟು ಜನಕ್ಕೆ ಚಿನ್ನದ ಅಂಬಾರಿ ಬಗ್ಗೆ ಹೆಚ್ಚು ಗೊತ್ತಿರಲಿಕ್ಕಿಲ್ಲ. ಆಧ್ಯಾತ್ಮಿಕ ಗುರುಗಳಾದ ಡಾ ಶೆಲ್ವಪಿಳ್ಳೈ ಅಯ್ಯಂಗಾರ್ ಅವರು ಅಂಬಾರಿಯ ಮಹತ್ವ, ವಿನ್ಯಾಸ, ನೈಜ್ಯ ತೂಕ, ಯಾರ ಅರಸೊತ್ತಿಗೆಯ ಕಾಲದಲ್ಲಿ ಇದು ಪ್ರಾಮುಖ್ಯತೆಗೆ ಬಂತು ಮೊದಲಾದ ಸಂಗತಿಗಳನ್ನು ವಿವರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Dasara Mahotsav 2024: ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ತೂಗಿದ್ದು ಎಷ್ಟು ಗೊತ್ತಾ? ಬರೋಬ್ಬರಿ 5,560 ಕೇಜಿ!