Assembly Session: ಮಂತ್ರಿಗಳು, ವಿರೋಧ ಪಕ್ಷಗಳ ಶಾಸಕರು ತಮ್ಮ ತಮ್ಮ ಕೆಲಸಗಳಲ್ಲಿ ಬ್ಯೂಸಿ, ಸದನ ಖಾಲಿ ಖಾಲಿ!

ಅರುಣ್​ ಕುಮಾರ್​ ಬೆಳ್ಳಿ

Updated on: Jul 18, 2023 | 6:19 PM

ವಿರೋಧ ವ್ಯಕ್ತಪಡಿಸಬಹುದಾಗಿದ್ದ ವಿರೋಧ ಪಕ್ಷದ ಆಸನಗಳಲ್ಲಿ ಒಂದಿಬ್ಬರು ಮಾತ್ರ ಕಂಡರು. ಹೊಸ ವಿಧಾನ ಸಭೆಯ ಮೊದಲ ಅಧಿವೇಶನವೇ ಹೀಗಾದರೆ ಮುಂದೆ ಹೇಗೆ?

ಬೆಂಗಳೂರು: ಅಡಳಿಯ ಪಕ್ಷದ ಸದಸ್ಯರು ತಮ್ಮ ದೆಹಲಿ ನಾಯಕರೊಂದಿಗೆ ಬ್ಯೂಸಿಯಾಗಿದ್ದರೆ, ಅವರೇ ಇಲ್ಲದೆ ಮೇಲೆ ನಮ್ಮದೇನು ಕೆಲಸ ಅಂತ ವಿರೋಧ ಪಕ್ಷದ ನಾಯಕರು ವಿಧಾನ ಸಭಾ ಅಧಿವೇಶನಕ್ಕೆ ಚಕ್ಕರ್ ಹೊಡೆದರು, ಹಾಗಾಗಿ ಸದನವಿಂದು ಖಾಲಿ ಖಾಲಿ! ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ (HK Patil) 2023ರ ಸಾಲಿನ ಸಿವಿಲ್ ಪ್ರಕ್ರಿಯಾ ಸಂಹಿತೆ (Code of Civil Procedure) ಕರ್ನಾಟಕ ತಿದ್ದುಪಡಿ ವಿಧೇಯಕ ಮಂಡಿಸಿದ ಬಳಿಕ ಸ್ಪೀಕರ್ ಯುಟಿ ಖಾದರ್ (UT Khader) ಅದನ್ನು ಮತಕ್ಕೆ ಹಾಕುತ್ತಾರೆ. ಆಗ ’ಹೌದು’ ಅಂತ ಏಳೆಂಟು ಸ್ವರಗಳು ಮಾತ್ರ ಕೇಳಿಸುತ್ತವೆ. ‘ಇಲ್ಲ’ ಅಂತ ಒಂದೇ ಒಂದು ಧ್ವನಿ ಕೇಳಿಸುವುದಿಲ್ಲ. ಅದರರ್ಥ ನಿಮಗೆ ಆಗಿರಬಹುದು. ವಿರೋಧ ವ್ಯಕ್ತಪಡಿಸಬಹುದಾಗಿದ್ದ ವಿರೋಧ ಪಕ್ಷದ ಆಸನಗಳಲ್ಲಿ ಒಂದಿಬ್ಬರು ಮಾತ್ರ ಕಂಡರು. ಹೊಸ ವಿಧಾನ ಸಭೆಯ ಮೊದಲ ಅಧಿವೇಶನವೇ ಹೀಗಾದರೆ ಮುಂದೆ ಹೇಗೆ ಮಾರಾಯ್ರೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.