Ramanagara; ಐಎಎಸ್ ಅಧಿಕಾರಿಗಳನ್ನು ಖಾಸಗಿ ಕಾರ್ಯಕ್ರಮಕ್ಕೆ ಬಳಸಿ ಕಾಂಗ್ರೆಸ್ ಸರ್ಕಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ: ಹೆಚ್ ಡಿ ಕುಮಾರಸ್ವಾಮಿ
ಬಿಜೆಪಿ ನಾಯಕರು ವಿರೋಧ ಪಕ್ಷದ ನಾಯಕ ಯಾರನ್ನು ಮಾಡುತ್ತಾರೆ ಅನ್ನೋದು ನನಗೆ ಸಂಬಂಧಿಸದ ವಿಷಯ ಎಂದು ಕುಮಾರಸ್ವಾಮಿ ಹೇಳಿದರು.
ರಾಮನಗರ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಹಿರಿಯ ಸರ್ಕಾರಿ ಅಧಿಕಾರಿಗಳನ್ನು (senior officials) ಒಂದು ಖಾಸಗಿ ಮತ್ತು ರಾಜಕೀಯ ಸಭೆಯಲ್ಲಿ ಪಕ್ಷದ ಕಾರ್ಯಕರ್ತರಂತೆ (party workers) ಉಪಯೋಗಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರ ಒಂದು ಕೆಟ್ಟ ಸಂಪ್ರದಾಯ ಹುಟ್ಟುಹಾಕಿದೆ ಎಂದು ಹೇಳಿದರು. ವಿರೋಧ ಪಕ್ಷಗಳು ಬೆಂಗಳೂರಿನ ಹೋಟೆಲೊಂದರಲ್ಲಿ ನಡೆಸಿದ ಸಭೆಯಲ್ಲಿ ಹಿರಿಉ ಅಧಿಕಾರಿಗಳು ಸ್ವಾಗತ ಕಮಿಟಿಯ ಸದಸ್ಯರಂತೆ ಓಡಾಡಿದ್ದು ವಿಷಾದನೀಯ ಎಂದು ಕುಮಾರಸ್ವಾಮಿ ಹೇಳಿದರು. ಮಾಧ್ಯಮದವರು ವಿರೋಧ ಪಕ್ಷದ ನಾಯಕ ನೀವೇ ಅಂತೆ ಕೇಳಿದ್ದಕ್ಕೆ, ಅದು ಹೇಗೆ ಸಾಧ್ಯ? ನಾನು ಗೆದ್ದಿರೋದೇ 19 ಸ್ಥಾನ, ಬಿಜೆಪಿ 66 ಸ್ಥಾನ ಗೆದ್ದಿದ್ದಾರೆ, ಆ ಪಕ್ಷದ ಶಾಸಕರರೊಬ್ಬರು ವಿರೋಧ ಪಕ್ಷದ ನಾಯಕನಾಗುತ್ತಾರೆ, ಅವರು ಯಾವಾಗ ನಾಯಕನನ್ನು ಆಯ್ಕೆ ಮಾಡುತ್ತಾರೆ, ಯಾರನ್ನು ಮಾಡುತ್ತಾರೆ ಅನ್ನೋದು ನನಗೆ ಸಂಬಂಧಿಸದ ವಿಷಯ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ