Assembly Session: ರೈತರ ಸಮಸ್ಯೆ ಪ್ರಸ್ತಾಪಿಸಿ ಮುಂಗಾರು ವೈಫಲ್ಯದ ಹಿನ್ನೆಲೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದ ದರ್ಶನ್ ಪುಟ್ಟಣ್ಣಯ್ಯ!

Assembly Session: ರೈತರ ಸಮಸ್ಯೆ ಪ್ರಸ್ತಾಪಿಸಿ ಮುಂಗಾರು ವೈಫಲ್ಯದ ಹಿನ್ನೆಲೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದ ದರ್ಶನ್ ಪುಟ್ಟಣ್ಣಯ್ಯ!

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 18, 2023 | 4:21 PM

ಮುಂಗಾರು ವೈಪಲ್ಯದಿಂದ ಸಣ್ಣ ಮತ್ತು ಅತಿಸಣ್ಣ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಸರ್ಕಾರ ಈ ವರ್ಗದ ರೈತರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಅಂತ ದರ್ಶನ್ ಹೇಳುತ್ತಾರೆ.

ಬೆಂಗಳೂರು: ಪಕ್ಷೇತರ ಶಾಸಕರಾಗಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಇಂದು ಮತ್ತೊಮ್ಮೆ ಸದನದಲ್ಲಿ ರೈತರ ಸಮಸ್ಯೆಯನ್ನು ಪ್ರಸ್ತಾಪಿಸಿ ಗಮನ ಸೆಳೆದರು. ಅವರ ಮಾತುಗಳಲ್ಲಿ ರೈತರ ಬಗ್ಗೆ ಇರುವ ಕಾಳಜಿ ಮತ್ತು ಸ್ಪಷ್ಟವಾಗಿ ಗೊತ್ತಾಗುತ್ತದೆ. ರೈತನಾಯಕನ ಮಗನೆಂಬ ಕಾರಣಕ್ಕೆ ಅವರು ರೈತಾಪಿ ಸಮುದಾಯದ (farming community) ಸಮಸ್ಯೆಯನ್ನು ಪ್ರಸ್ತಾಪಿಸುವುದಿಲ್ಲ. ಸಮಸ್ಯೆಯ ಆಳವನ್ನು ಅವರು ಅರ್ಥಮಾಡಿಕೊಂಡು ಮಾತಾಡುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡು ತಿಂಗಳ ಅವಧಿಯಲ್ಲಿ 42 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಹಾವೇರಿ ಜಿಲ್ಲೆಯೊಂದರಲ್ಲೇ (Haveri district) 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಅವರು ಹೇಳಿದಾಗ ಕಾಂಗ್ರೆಸ್ ರೊಬ್ಬರು ಆಕ್ಷೇಪಣೆ ವ್ಯಕ್ತಪಡಿಸಿ, ಸದಸ್ಯರು ತಾಲ್ಲೂಕುವಾರು ವಿವರ ನೀಡಲಿ ಎನ್ನುತ್ತಾರೆ. ಅವರ ಮಾತಿನ ಬಳಿಕ ಸ್ವಲ್ಪ ಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಗುತ್ತದೆ. ಮುಂದುವರಿದು ಮಾತಾಡುವ ದರ್ಶನ್, ಮುಂಗಾರು ವೈಪಲ್ಯದಿಂದ ಸಣ್ಣ ಮತ್ತು ಅತಿಸಣ್ಣ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಸರ್ಕಾರ ಈ ವರ್ಗದ ರೈತರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಅಂತ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 18, 2023 04:19 PM