ಜಾತಿ ಗಣತಿಯ ವ್ಯಾಪಕ ಚರ್ಚೆ ನಡೆದ ನಂತರವೇ ತಪ್ಪು-ಒಪ್ಪುಗಳು ಗೊತ್ತಾಗೋದು: ಸತೀಶ್ ಜಾರಕಿಹೊಳಿ

Updated on: Apr 15, 2025 | 7:16 PM

ಅಧಿವೇಶನ ಕರೆದಲ್ಲಿ, 3-4 ದಿನಗಳನ್ನು ಜಾತಿ ಗಣತಿ ವರದಿ ಮೇಲಿನ ಚರ್ಚೆಗೆ ಇಡಬೇಕು, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವರದಿಯ ಬಗ್ಗೆ ಮಾತಾಡಲಿ, ಯಾಕೆಂದರೆ ಅವರ ಸಮುದಾಯದ ಸುಮಾರು 35 ಶಾಸಕರಿದ್ದಾರೆ ಮತ್ತು ಅವರು ಸಮುದಾಯದ ಪ್ರಮುಖ ನಾಯಕರಲ್ಲಿ ಒಬ್ಬರು, ಎಲ್ಲಾ ಚರ್ಚೆಗಳ ನಂತರ ಸರ್ಕಾರ ಒಂದು ಅಂತಿಮ ನಿರ್ಣಯವನ್ನು ತೆಗೆದುಕೊಳ್ಳುತ್ತದೆ ಎಂದು ಜಾರಕಿಹೊಳಿ ಹೇಳಿದರು.

ಬೆಳಗಾವಿ, ಏಪ್ರಿಲ್ 15: ಜಾತಿ ಗಣತಿಯ ಬಗ್ಗೆ ವ್ಯಾಪಕವಾದ ಚರ್ಚೆಯಾಗಬೇಕಿದೆ; ಸದನದಲ್ಲಿ, ಕ್ಯಾಬಿನೆಟ್ ಮತ್ತು ಸಾರ್ವಜನಿಕವಾಗಿ ಸುದೀರ್ಘವಾದ ಚರ್ಚೆ (expansive debate) ನಡೆಯಬೇಕು, ಅದಾದ ಬಳಿಕವೇ ವರದಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ವರದಿಯ ಸಾರ್ವಜನಿಕ ಚರ್ಚೆಯಾಗದ ಹೊರತು ಅದರಲ್ಲಿರುವ ನ್ಯೂನತೆಗಳು ಗೊತ್ತಾಗಲಾರವು, ಜಾತಿ ಗಣತಿಯ ವರದಿಯ ಚರ್ಚೆಗೆಂದೇ ವಿಶೇಷ ಅಧಿವೇಶನ ಕರೆಯಬೇಕೆಂದು ಮುಖ್ಯಮಂತ್ರಿಯವರಲ್ಲಿ ತಮ್ಮ ವಿನಂತಿ ಇದೆ ಎಂದು ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ:  ಓರ್ವ ​ ಮಂತ್ರಿಯನ್ನೇ ಹನಿಟ್ರ್ಯಾಪ್​ ಮಾಡಿದ್ದಾರೆ: ಸಚಿವ ಸತೀಶ್ ಜಾರಕಿಹೊಳಿ ಬಾಂಬ್​..!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ