ಗಣರಾಜ್ಯೋತ್ಸವ ಪರೇಡ್ನಲ್ಲಿ ಗಮನ ಸೆಳೆದ ಆಪರೇಷನ್ ಸಿಂಧೂರ್ ವಿಜಯೋತ್ಸವ
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಒಗ್ಗಟ್ಟಿನ ಶಕ್ತಿಯನ್ನು ತೋರಿಸುವ ವಿಜಯೋತ್ಸವದ ಮಾದರಿಯನ್ನು ಇಂದು ಗಣರಾಜ್ಯೋತ್ಸವದ ಪರೇಡ್ನಲ್ಲಿ ಪ್ರದರ್ಶಿಸಲಾಯಿತು. ಯುರೋಪಿನ ಮುಖ್ಯ ಅತಿಥಿಗಳು, ವಿದೇಶಿ ನಿಯೋಗಗಳು, ಗಣ್ಯರು ಮತ್ತು ಸಾವಿರಾರು ಪ್ರೇಕ್ಷಕರು ಭಾರತದ ಪರಂಪರೆ ಮತ್ತು ಅದರ ಕಾರ್ಯತಂತ್ರದ ರಕ್ಷಣಾ ವಿಕಸನ ಎರಡನ್ನೂ ಒತ್ತಿಹೇಳುವ ಅಸಾಧಾರಣ ಮೆರವಣಿಗೆಗೆ ಸಾಕ್ಷಿಯಾದರು.
ನವದೆಹಲಿ, ಜನವರಿ 26: ಇಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಆಪರೇಷನ್ ಸಿಂಧೂರ್ (Operation Sindoor) ಕುರಿತಾದ ಟ್ಯಾಬ್ಲೋ ಬಹಳ ಗಮನ ಸೆಳೆಯಿತು. ಇದು ಬ್ರಹ್ಮೋಸ್, S-400 ವಾಯು ರಕ್ಷಣಾ ಮತ್ತು ಡ್ರೋನ್ ಮಾಡೆಲ್ಗಳನ್ನು ಒಳಗೊಂಡಿತ್ತು. ಹಾಗೇ, ವಾಯುಸೇನೆ, ನೌಕಾಪಡೆ, ಭೂ ಸೇನೆಯ ಒಗ್ಗಟ್ಟನ್ನು ಇದು ಪ್ರದರ್ಶಿಸಿತು. ಭಾರತದ 77ನೇ ಗಣರಾಜ್ಯೋತ್ಸವದ ಮೆರವಣಿಗೆಯು ಈ ವರ್ಷ ರಕ್ಷಣಾ ಸನ್ನದ್ಧತೆ, ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಜಂಟಿ ಕಾರ್ಯಾಚರಣೆಯ ಬಲದ ಮೇಲೆ ಪ್ರಬಲ ಒತ್ತು ನೀಡುವ ಮೂಲಕ ಜಾಗತಿಕ ಗಮನ ಸೆಳೆಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jan 26, 2026 09:38 PM