ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು ನೋಡಿ

Edited By:

Updated on: May 08, 2025 | 11:33 AM

ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಕರ್ನಾಟಕದ ಬೆಳಗಾವಿಯ ಸೊಸೆ. ಸೋಫಿಯಾ ಬಗ್ಗೆ ಅವರ ಮಾವ ಗೌಸ್ ಬಾಗೇವಾಡಿ ‘ಟಿವಿ9’ ಜತೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ನೆಚ್ಚಿನ ಸೊಸೆಯ ಬಗ್ಗೆ ಮಾವ ಗೌಸ್ ಬಾಗೇವಾಡಿ ಏನಂದರು? ಏನು ಅಭಿಪ್ರಾಯ ವ್ಯಕ್ತಪಡಿಸಿದರು ಎಂಬುದನ್ನು ವಿಡಿಯೋದಲ್ಲಿ ನೋಡಿ.

ಬೆಳಗಾವಿ, ಮೇ 8: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆಯು ನಡೆಸಿದ ‘‘ಆಪರೇಷನ್ ಸಿಂದೂರ’’ ಜಂಟಿ ದಾಳಿಯ ವಿವರವನ್ನು ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡಿದ್ದರು. ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆಯೂ ಹೌದು. ಸೋಫಿಯಾ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿರುವ ತಾಜಾದ್ದೀನ್ ಬಾಗೇವಾಡಿ ಅವರನ್ನು ಮದುವೆಯಾಗಿದ್ದಾರೆ. ಇದೀಗ ಸೊಸೆಯ ಬಗ್ಗೆ ಮಾವ ಗೌಸ್ ಬಾಗೇವಾಡಿ ‘ಟಿವಿ9’ ಜತೆ ಮಾತನಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಅವರು ಏನು ಹೇಳಿದರೆಂಬುದನ್ನು ವಿಡಿಯೋದಲ್ಲಿ ನೋಡಿ.

ಸೋಫಿಯಾ ಖುರೇಷಿ ಬಗ್ಗೆ ತಿಳಿಯಲು ಓದಿ: ಆಪರೇಷನ್ ಸಿಂಧೂರ್: ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಯಾರು? ಇಲ್ಲಿದೆ ಮಾಹಿತಿ

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ