ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಅದರಲ್ಲಿರುವುದು ಯಾವ ಮ್ಯಾಟರ್ ಗೊತ್ತಾ?

Edited By:

Updated on: Jan 29, 2026 | 6:25 PM

ವಿಪಕ್ಷ ನಾಯಕ ಅಶೋಕ್ ಅವರು ಸದನದಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಶಾಸಕರೊಬ್ಬರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಪ್ರಶ್ನಿಸಿದ್ದಾರೆ. ಬಳ್ಳಾರಿಯನ್ನು ಸುಡುವ ಬೆದರಿಕೆ ಹಾಕಿದ ಶಾಸಕರಿಗೆ ಡಿಕೆ ಶಿವಕುಮಾರ್ ಬೆಂಬಲ ಸೂಚಿಸಿದ್ದನ್ನು ಅವರು ಖಂಡಿಸಿದ್ದಾರೆ. ಬಳ್ಳಾರಿ ಘಟನೆಯಲ್ಲಿ ಪೊಲೀಸರ ನಡೆ ಮತ್ತು ಎಫ್‌ಐಆರ್ ದಾಖಲಾತಿಯಲ್ಲಿನ ವಿಳಂಬವನ್ನೂ ಅಶೋಕ್ ಪ್ರಸ್ತಾಪಿಸಿದ್ದಾರೆ.

ಬೆಂಗಳೂರು, ಜನವರಿ 29: ವಿಧಾನಸಭೆಯಲ್ಲಿ ಬಳ್ಳಾರಿ ಬ್ಯಾನರ್​ ಗಲಾಟೆ ಬಗ್ಗೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ಅಶೋಕ್,​​ ಶಾಸಕರೊಬ್ಬರ ಗಂಭೀರ ಹೇಳಿಕೆಯನ್ನು ಉಲ್ಲೇಖಿಸಿದರು. ಅಷ್ಟೇ ಅಲ್ಲದೆ ಆ ಕುರಿತ ಆಡಿಯೋ, ವಿಡಿಯೋ ಸಾಕ್ಷಿಗಳಿರುವ ಪೆನ್​ ಡ್ರೈವ್​ ತೋರಿಸಿದರು. “ಕೊಲ್ಲಲು ಸಾವಿರಾರು ದಾರಿಗಳಿವೆ, ನಾನು ಅಂದುಕೊಂಡರೆ ಐದು ನಿಮಿಷದಲ್ಲಿ ಬಳ್ಳಾರಿಯನ್ನು ಭಸ್ಮ ಮಾಡಬಲ್ಲೆ” ಎಂದು ಆ ಶಾಸಕರು ಹೇಳಿರುವ ಹೇಳಿಕ ಉಲ್ಲೇಸಿದರು. ಈ ವಿಚಾರದಲ್ಲಿ ಗೃಹಸಚಿವರು ಸುಳ್ಳು ಎಂದು ಸಾಬೀತುಪಡಿಸಿದರೆ ಕ್ಷಮಾಪಣೆ ಕೇಳಲು ಸಿದ್ಧ ಎಂದು ಆರ್​​. ಅಶೋಕ್ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jan 29, 2026 06:22 PM