ಸಿದ್ದರಾಮಯ್ಯ ಕೇವಲ ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡಿ ಪಕ್ಷಪಾತಿ ಅನಿಸಿಕೊಂಡಿದ್ದಾರೆ: ಅರಗ ಜ್ಞಾನೇಂದ್ರ

Updated on: Jul 29, 2025 | 4:30 PM

ಕಾಂಗ್ರೆಸ್ ಯಾವತ್ತಿಗೂ ದಲಿತ ವಿರೋಧಿ, ಮೀಸಲಾತಿಯ ಮೂಲಕ ತಮ್ಮ ಜನಾಂಗ ಹತ್ತು ವರ್ಷಗಳಲ್ಲಿ ಉದ್ಧಾರವಾಗುತ್ತದೆ ಅಂತ ಡಾ ಬಿಅರ್ ಅಂಬೇಡ್ಕರ್ ಕನಸು ಕಂಡಿದ್ದರು, ಅದರೆ ಅವರ ಕನಸನ್ನು ಕಾಂಗ್ರೆಸ್ ನುಚ್ಚುನೂರು ಮಾಡಿತು, ಪಕ್ಷದ ದಲಿತ ವಿರೋಧಿ ಧೋರಣೆಯಿಂದಾಗೇ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಲಿಲ್ಲ, ಕಾಂಗ್ರೆಸ್ ದಲಿತರನ್ನು ವೋಟ್ ಬ್ಯಾಂಕ್ ಆಗಿ ಬಳಸುತ್ತಾ ಬಂದಿದೆ ಎಂದು ಜ್ಞಾನೇಂದ್ರ ಹೇಳಿದರು.

ಬೆಂಗಳೂರು, ಜುಲೈ 29: ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ, ಕಾಂಗ್ರೆಸ್ ಶಾಸಕರು ತಮಗೆ ಅನುದಾನ ಸಿಗುತ್ತಿಲ್ಲ ಎಂದು ದೊಡ್ಡಮಟ್ಟದಲ್ಲಿ ಸದ್ದು ಮಾಡಲು ಅರಂಭಿಸಿ, ದುಂಬಾಲು ಬಿದ್ದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಈಗ ಅವರಿಗೆ ತಲಾ ₹50 ಕೋಟಿ ನೀಡುತ್ತಿದ್ದಾರೆ ಎಂದು ಹೇಳಿದರು. ಆದರೆ ಸಿದ್ದರಾಮಯ್ಯ ಕೇವಲ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ನೀಡುವ ಮೂಲಕ ಪಕ್ಷಪಾತಿ ಧೋರಣೆ ಪ್ರದರ್ಶಿಸುತ್ತಿದ್ದಾರೆ, ಅವರು ಸಮಗ್ರ ಕರ್ನಾಟಕಕ್ಕೆ ಮುಖ್ಯಮಂತ್ರಿ ಕೇವಲ ಕಾಂಗ್ರೆಸ್ ನಾಯಕರು ಆರಿಸಿಬಂದ ಕ್ಷೇತ್ರಗಳಿಗೆ ಮಾತ್ರ ಅಲ್ಲ, ಅನುದಾನ ನೀಡುತ್ತಿಲ್ಲ ಅಂತ ಕ್ಷೇತ್ರದ ಜನರಿಗೆ ಹೇಳುತ್ತಿದ್ದೇವೆ, ಕನ್ನಡಿಗರು ನೀಡುವ ತೆರಿಗೆ ಹಣವನ್ನು ಸಿದ್ದರಾಮಯ್ಯ ಪಕ್ಷದ ಕೆಲಸಗಳಿಗೆ ಉಪಯೋಗಿಸುತ್ತಿದ್ದಾರೆ ಎಂದು ಜ್ಞಾನೇಂದ್ರ ಹೇಳಿದರು.

ಇದನ್ನೂ ಓದಿ:  ಕಾಂಗ್ರೆಸ್ ಶಾಸಕರಿಗೆ 50 ಕೋಟಿ, ವಿಪಕ್ಷ ಶಾಸಕರಿಗೆ 25 ಕೋಟಿ ರೂ. ಅನುದಾನ: ಸಿಎಂ ವಿರುದ್ಧ ವಿಪಕ್ಷಗಳ ವಾಗ್ದಾಳಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ